ಸಂಬರಗಿ 10: ಸಿಂದಗಿಯ ಡಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಮತ್ತು ವಿ.ವಿ ಸಾಲಿಮಠ ವಿಜ್ಞಾನ ಕಾಲೇಜಿನ ಗಣಿತ ವಿಭಾಗದ ಪ್ರಾಧ್ಯಾಪಕಿ ರಂಜನಾ ಮಹಾದೇವ ಸಂಕಪಾಲ್ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಎಸ್ಟಡಿ ಆನ್ ಟುಪೋಲಾಜಿಕಲ್ ಇಂಡಸ್ಟ್ರೀ ಓವರ್ ಗ್ರಾಫ್ ಕುರಿತು ತಮ್ಮ ಪ್ರಬಂಧವನ್ನು ಬರೆದು ಮಂಡಿಸಿದ್ದಕ್ಕಾಗಿ ಪಿಎಚ್‌ಡಿ ಪದವಿಯನ್ನು ನೀಡಿ ಗೌರವಿಸಿದೆ.
ವಿಶ್ವನಾಥ ಅವಟಿ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಪೂರ್ಣಗೊಂಡಿದೆ.
ರಂಜನಾ ಮಹಾದೇವ ಸಂಕಪಾಲ್ ಅವರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಕಾಲೇಜಿನ ಸಂಸ್ಥಾಪಕ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಪ್ರಾಚಾರ್ಯ ಡಿ ಎಂ ಪಾಟೀಲ, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ. ರಂಜನಾ ಸಂಕಪಾಲ್ ಅಥಣಿಯ ಬಿಎಸ್‌ಎನ್‌ಎಲ್ ಅಧಿಕಾರಿ ಮಾರುತಿ ಹೊನ್ನಮುರಿ ಅವರ ಮಗಳು.