ಬೆಂಗಳೂರು, ಫೆ 13 : ಚಲನಚಿತ್ರಗಳನ್ನು ವೀಕ್ಷಿಸಲು ವಾರಾಂತ್ಯ ಅಥವಾ ಸೂಕ್ತ, ಸಮಯ, ದಿನಾಂಕ ನಿರ್ಧರಿಸುವ ಕಾಲವೊಂದಿತ್ತು ಆದರೀಗ ಏನಾಗಿದೆ? ಚಿತ್ರಮಂದಿರದತ್ತ ಬರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಜನಪ್ರಿಯ ನಟರ ಚಿತ್ರಗಳೂ ಸಹ 25 ದಿನ ಪ್ರದರ್ಶನ ಕಂಡರೆ ಹೆಚ್ಚು ಎನ್ನುವಂತಾಗಿದೆ
ದಶಕಗಳು ಕಳೆದಂತೆ ಕನ್ನಡ ಚಿತ್ರರಂಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುತೇಕ ಕನ್ನಡ ಚಿತ್ರಗಳು ಹೆಸರು ಮಾಡುತ್ತಿವೆ ಇಷ್ಟಾದರೂ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭ್ಯವಿಲ್ಲ
ಕಥೆ, ಚಿತ್ರಕಥೆ, ಸಂಭಾಷನೆ, ಮೇಕಿಂಗ್, ಸೂಕ್ತ ನಟ, ನಟಿಯರು ಎಲ್ಲವೂ ಇದ್ದ ಚಿತ್ರಗಳು ಒಂದು ವಾರಕ್ಕೇ ಥಿಯೇಟರ್ ನಿಂದ ಮಾಯವಾಗುತ್ತಿವೆ ಅಥವಾ ಎತ್ತಂಗಡಿಯಾಗುತ್ತಿವೆ ಈ ಕುರಿತು ‘ಜಂಟಲ್ ಮ್ಯಾನ್’ ಸುದ್ದಿಗೋಷ್ಠಿಯಲ್ಲಿ ಒಂದಷ್ಟು ಕಥೆ, ವ್ಯಥೆಯನ್ನು ಹಂಚಿಕೊಂಡ ನಿರ್ಮಾಪಕ, ನಿರ್ದೇಶಕ ಗುರುದೇಶಪಾಂಡೆ, “ನಿರ್ಮಾಪಕರುಗಳೇ ಇದರ ಬಗ್ಗೆ ಚಿಂತಿಸಿ, ಸರಿಯಾದ ನಿರ್ಧಾರಕ್ಕೆ ಬರಬೇಕು ಅಲ್ಲಿಯವರೆಗೂ ಇದಕ್ಕೆ ಪರಿಹಾರವಿಲ್ಲ” ಎಂದರು
ಈ ವಾರ 13 ಚಿತ್ರಗಳು ರಿಲೀಸ್!
‘ಮದುವೆ ಮಾಡ್ರಿ ಸರಿ ಹೋಗ್ತಾನೆ’, ‘ಪ್ರೀತಿ ಎಂದರೇನು’, ‘ನವರತ್ನ’, ‘ಸಾಗುತ ದೂರ ದೂರ’, ‘ಡೆಮೋ ಪೀಸ್’, ‘ಗಿಫ್ಟ್ ಬಾಕ್ಸ್’, ‘ಬೆಂಕಿಯಲ್ಲಿ ಅರಳಿದ ಹೂವು’, ‘ಗಡ್ಡಪ್ಪನ ಸರ್ಕಲ್’, ‘ಸಾವು’, ‘ಲೈಟ್ ಆಗಿ ಲವ್ ಆಗಿದೆ’, ‘ತುಂಡ್ ಹೈಕಳ ಸಹವಾಸ’ ಪ್ರೇಮಸ್ವರ, ಎನ್ನ(ತುಳು) ಸೇರಿದಂತೆ 13 ಚಿತ್ರಗಳು ತೆರೆಗೆ ಬರಲಿವೆ
ಹೀಗಾಗಿ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಲವ್ ಮಾಕ್ ಟೇಲ್’, ‘ಜಂಟಲ್ ಮ್ಯಾನ್’, ‘ನಾನು ಮತ್ತು ಗುಂಡ’ ನ ಸ್ಥಿತಿ ಏನಾದೀತೋ ಗೊತ್ತಿಲ್ಲ ಈ ಕುರಿತು ಪ್ರಸ್ತಾಪಿಸಿದ ಗುರುದೇಶ್ ಪಾಂಡೆ, “ಪ್ರತಿ ವಾರ 10 ರಿಂದ 13 ಚಿತ್ರಗಳು ತೆರೆಗೆ ಬರುವುದಾದರೆ ಉತ್ತಮವಾಗಿ ಓಡುತ್ತಿರುವ ಚಿತ್ರಗಳ ಪಾಡೇನು? ಇದಕ್ಕೆಲ್ಲ ನಿರ್ಮಾಪಕರೇ ಕಾರಣ ಎಷ್ಟು ದುಡ್ಡಾದರೂ ಪರವಾಗಿಲ್ಲ ಎಂದು ಸಿಂಗಲ್ ಥಿಯೇಟರ್ ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ, ಥಿಯೇಟರ್ ಬಾಡಿಗೆಯನ್ನೂ ಮುಂಚಿತವಾಗಿಯೇ ನೀಡುತ್ತಾರೆ ಇನ್ನು, ಬುಕ್ ಮೈ ಶೋ ಅನ್ನು ಕೂಡ ನಂಬುವಂತಿಲ್ಲ. .. . ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಇದ್ದರೂ ರೇಟಿಂಗ್ ಕಡಿಮೆ ಹಾಕುತ್ತಾರೆ, ಖಾಲಿ ಹೊಡೆಯುತ್ತಿದ್ದರೂ ರೇಟಿಂಗ್ 99 ಪರ್ಸೆಂಟ ಹಾಕಿರುತ್ತಾರೆ ಇದನ್ನೆಲ್ಲ ಕೇಳೋರು ಯಾರು? ಎಂದು ಅಲವತ್ತುಕೊಂಡರು ದರ್ಶನ್ ಹೇಳಿದ್ದು ಸರಿಯಾಗಿಯೇ ಇದೆ
ರಾಜ್ಯದಲ್ಲಿ ತಮಿಳು, ತೆಲುಗು, ಹಿಂದಿ ಸೇರಿದಂತೆ ಪರಭಾಷಾ ಚಿತ್ರಗಳು ಯಶಸ್ವಿಯಾಗಿ ಓಡುತ್ತಿರುವಾಗ, ಕನ್ನಡ ಚಿತ್ರಮಂದಿರಗಳೇಕ್ ಖಾಲಿ ಹೊಡೆಯುತ್ತವೆ ಇದನ್ನು ಮನಗಂಡು, ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಅಂಡು ಬಗ್ಗಿಸಿ ಕನ್ನಡ ಚಿತ್ರ ನೋಡಿ’ ಎಂದಿದ್ದರು ಇದರಲ್ಲಿ ತಪ್ಪೇನೂ ಇಲ್ಲ ಎಲ್ಲರೂ ಸೇರಿಕೊಂಡು ಕನ್ನಡ ಚಿತ್ರರಂಗವನ್ನು ಉಳಿಸಬೇಕಿದೆ ಎಂದು ಗುರುದೇಶಪಾಂಡೆ ಅಭಿಪ್ರಾಯಪಟ್ಟರು.
ಆದರ, ನಿರ್ಮಾಪಕರು ನಿರ್ದೇಶಕರಲ್ಲಿಯೇ ಹೊಂದಾಣಿಕೆ ಇಲ್ಲದಿರುವಾಗ, ಚಲನಚಿತ್ರ ವಾಣಿಜ್ಯ ಮಂಡಳಿ ಏನೂ ಮಾಡಲಾಗದಂತಹ ಪರಿಸ್ಥಿತಿಯಲ್ಲಿರುವಾಗ, ಚಿತ್ರಮಂದಿರಗಳ ಕೊರತೆಯೊಂದಿಗೆ ವಾರಕ್ಕೆ 10 ರಿಂದ 12 ಚಿತ್ರ ಬಿಡುಗಡೆ ಮಾಡುತ್ತಿರುವ ಸಂದರ್ಭದಲ್ಲಿ ಯಾರು ಏನು ಮಾಡಲು ಸಾಧ್ಯ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟೋರು ಯಾರು, ನಮ್ಮನ್ನು ಉಳಿಸೋರು ಯಾರು ಎಂಬ ಪ್ರಶ್ನೆ ಮತ್ತೆ ಕಾಡುತ್ತದೆ ಅಷ್ಟೆ.