ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
Prize distribution to the winners of various competitions
ಹುಬ್ಬಳ್ಳಿ-ಧಾರವಾಡ, 24 ; ಬದುಕಿನಲ್ಲಿ ಚೈತನ್ಯ ತುಂಬಿಕೊಂಡರೆ ಮುಪ್ಪಿನಲ್ಲೂ ಮಕ್ಕಳ ಮನಸ್ಸನ್ನು ಕಾಣಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಸ್ಪೂರ್ತಿ ನಾಯಕ ಹೇಳಿದರು.
ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಶ್ರಾವಣ ಮಾಸದ ಅಂಗವಾಗಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮಹಿಳೆಯರಿಗಾಗಿ ಏರಿ್ಡಸಿದ್ದ ಜಾನಪದ ನೃತ್ಯ, ವೈಯಕ್ತಿಕ ಜಾನಪದ ಗೀತೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನ್ನಾಡುತ್ತಿದ್ದರು.
ಜಾನಪದ ಕಲೆ ಬದುಕಿಗೆ ಹತ್ತಿರವಾಗಿದ್ದು ಮನುಷ್ಯನ ಹುಟ್ಟಿನಿಂದ ಮರಣದವರೆಗೂ ಪ್ರಯೋಗವಾಗುತ್ತವೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗುತ್ತದೆ. ಇಂದು ವಯಸ್ಸಾದ ತಾಯಂದಿರೂ ಅತಿ ಉತ್ಸಾಹದಿಂದ ನೃತ್ಯಮಾಡಿದ್ದು ನೋಡಿದರೆ ಚಿಕ್ಕಮಕ್ಕಳ ಚೈತನ್ಯ ಕಂಡೆವು. ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಸಂಘಟಕರನ್ನು ಸಮಾಜ ಸ್ಮರಿಸಲೇಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ನಾವು ಪರಿಸರಕ್ಕೆ ಸಂಬಂಧಿಸಿದ ಅನೇಕ ಕಾರ್ಯ ಮಾಡುತ್ತೇವೆ. ಸಮಾಜ ಕೈಜೋಡಿಸಿದರೆ ಇನ್ನೂ ಹೆಚ್ಚು ಕಾರ್ಯ ಮಾಡಬಹುದು ಎಂದರು. ಗಣೇಶ ಚತುರ್ಥಿ ಹಬ್ಬ ಪರಿಸರ ಸ್ನೇಹಿ ಹಬ್ಬಗಳನ್ನಾಗಿ ಆಚರಿಸಿ, ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರು ಆಸಕ್ತಿ ತೋರಬೇಕೆಂದರು.
ಸ್ಪರ್ಧೆಯ ವಿಜೇತರು:
್ಖ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ -ಶ್ರೀಮತಿ ಜಯಶ್ರೀ ಯಂಡಿಗೇರಿ. ದ್ವಿತೀಯ- ಕಿರಣ ಚಿಟಗುಬ್ಬಿ, ತೃತೀಯ - ಶ್ರೀಮತಿ ನೂತನ ಪಿ ವೇರಣೆಕರ. ಸಮಾಧಾನಕರ-ಮಹಾದೇವಿ ಮಡಿವಾಳರ. ವಯಕ್ತಿಕ ಜಾನಪದ ಹಾಡಿನ ಸ್ಪರ್ಧೆ /- ಪ್ರಥಮ- ಮೈನಾರಾಣಿ ದಂಡವತಿ. ದ್ವಿತೀಯ/- ದೀಪಾ ಮೇಲಿ. ತೃತೀಯ/- ಶ್ರೀಮತಿ ಜಯಶ್ರೀ ಯಂಡಿಗೇರಿ. ಸಮಾಧಾನಕರ/- ಶ್ರೀಮತಿ ಜಯಶ್ರೀ ಗುತ್ತಲ.ಜಾನಪದ ನೃತ್ಯ ಸಾಮೂಹಿಕ /- ಪ್ರಥಮ -ಗಾನ ಸಿಂಚನ ಮಹಿಳಾ ಮಂಡಲ. ಧಾರವಾಡ. ದ್ವಿತೀಯ- -ಶ್ರೀರಂಜನಿ ಮಹಿಳಾ ಮಂಡಳ. ಧಾರವಾಡ. ತೃತೀಯ - ಸಿಂಗಾರ ಸಖಿ ಮಹಿಳಾ ಮಂಡಳ ಧಾರವಾಡ. ಸಮಾಧಾನಕರ- ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಮಂಡಳ.
ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ-5000/-, ದ್ವಿತೀಯ-4000/-, ತೃತೀಯ-3000/- ಹಾಗೂ ವೈಯಕ್ತಿಕ ರಂಗೋಲಿ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ-3000/-, ದ್ವಿತೀಯ 2000/- ಹಾಗೂ ತೃತೀಯ 1000/- ಸಮಾಧಾನಕರ 500/- ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಸಮಿತಿಯ ಸಹ ಕಾರ್ಯದರ್ಶಿ ಕೆ. ಎಚ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕೋಶಾಧ್ಯಕ್ಷ ಆಯ್. ಎಲ್. ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಆರ್. ಹೆಗಡೆ, ಗಂಗಾಧರ ತಪಶೆಟ್ಟಿ, ಡಾ. ವಿಲಾಸ ಕುಲಕರ್ಣಿ, ಡಾ. ಮಲ್ಲಿಕಾರ್ಜುನ ತರ್ಲಘಟ್ಟ, ಅನ್ನಪೂರ್ಣಾ ತಾಳಿಕೋಟಿ, ವಾಣಿ ಮುಜುಮದಾರ, ಬಸವರಾಜ ಕುರಿಯವರ, ಪ್ರಕಾಶ ಮಲ್ಲಿಗವಾಡ, ಸುನಂದಾ ನಿಂಬನಗೌಡರ, ವ್ಹಿ. ಎನ್. ಕೀರ್ತಿವತಿ ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 