ಚದುರಂಗದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ

ಚದುರಂಗದಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ  Prize distribution to chess winners

             ಕಾರವಾರ 13 : ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ , ಉತ್ತರ ಕನ್ನಡ ಜಿಲ್ಲಾ ಸರಕಾರಿ ನೌಕರರ ಕ್ರೆಡಿಟ್ ಸೊಸೈಟಿ ಕಾರವಾರ, ಜಿಲ್ಲಾ ಕ್ರೀಡಾ ಪ್ರತಿಷ್ಠಾನ ಹಾಗೂ ಕಾರವಾರ ಚೆಸ್ ಕ್ಲಬ್ ಇವರ ಸಹಯೋಗದಲ್ಲಿ ಈಚೆಗೆ ಕಾರವಾರದ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಮುಕ್ತ, 17 ವರ್ಷದೊಳಗಿನ ಹಾಗೂ 13 ವರ್ಷದೊಳಗಿನವರ ವಿಭಾಗದ ರಾಜ್ಯ ಆಯ್ಕೆಯ ಪ್ರಕ್ರಿಯೆ ನಡೆಯಿತು. ಒಟ್ಟೂ 27,500 ರೂ. ನಗದು ಹಾಗು ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಯಿತು.

             ಮುಖ್ಯ ತೀಪುಗಾರ ಆನಂದ ಸ್ವಾಮಿ ಇದ್ದರು. ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ ಎಮ್‌. ಸುಮೀತ್ ಕುಮಾರ್ ರೂ. 4,000 ಮತ್ತು ಟ್ರೋಫಿ, ದ್ವಿತೀಯ ರಾಮಚಂದ್ರ ಭಟ್ ಮಾತ್ನಳ್ಳಿ ರೂ.3,000 ಮತ್ತು ಟ್ರೋಫಿ, ತೃತೀಯ ಸಮರ್ಥ ಜೆ. ರಾವ್ ರೂ.2,000 ಮತ್ತು ಟ್ರೋಫಿ, ಚತುರ್ಥ ನವೀನ ಹೆಗಡೆ ರೂ.1,000 ಮತ್ತು ಟ್ರೋಫಿ ಪಡೆದರು. 17 ವರ್ಷದೊಳಗಿನ ವಿಭಾಗ ಉತ್ತಮ ಬಾಲಕಿ ಆಟಗಾರ್ತಿ ಪ್ರಥಮ ಕು.ಭೂಮಿಕಾ ಪ್ರದೀಪ ಹೆಗಡೆ ರೂ.2,500 ಮತ್ತು ಟ್ರೋಫಿ, ದ್ವಿತೀಯ ಆದ್ಯ ಕಟ್ಟೇರ ರೂ.1,250 ಮತ್ತು ಟ್ರೋಫಿ, 17 ವರ್ಷದೊಳಗಿನ ವಿಭಾಗ ಪ್ರಥಮ ಕು.ಅಭಿನೀತ ಭಟ್ ರೂ.2,500 ಮತ್ತು ಟ್ರೋಫಿ, ದ್ವಿತೀಯ ಕು.ದಕ್ಷ ಜಿ. ಬಳ್ಕುರ ರೂ.1,500 ಮತ್ತು ಟ್ರೋಫಿ, ತೃತೀಯ ಕು.ಶ್ರವಣ ಆರ್‌. ಹೆಗಡೆ ರೂ.1,000 ಮತ್ತು ಟ್ರೋಫಿ, 13 ವರ್ಷದೊಳಗಿನವರ ವಿಭಾಗದ ಉತ್ತಮ ಬಾಲಕಿ ಆಟಗಾರ್ತಿ ಪ್ರಥಮ ಕು. ಸಮೃದ್ಧಿ ಆರ್‌.ರೇವಣ್ಯರ ರೂ.2,500 ಮತ್ತು ಟ್ರೋಫಿ, ದ್ವಿತೀಯ ಸಾದ್ವಿ ಶರಣಪ್ಪ ಹಳ್ಳಿ ರೂ.1,250 ಮತ್ತು ಟ್ರೋಫಿಗಳೊಂದಿಗೆ ಕ್ರಮವಾಗಿ ಹಂಚಿಕೊಂಡರು.

              13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಕು. ಪವನ್ ಕುಮಾರ್ ಹೆಗಡೆ ರೂ.2,500 ಮತ್ತು ಟ್ರೋಫಿ, ದ್ವಿತೀಯ ಕು.ಚಿಂತನ ಬಿ. ಭಟ್ ರೂ.1,500 ಮತ್ತು ಟ್ರೋಫಿ, ತೃತೀಯ ಕು.ಆದಿತ್ಯ ನೈನ್ ರೂ.1,000 ಮತ್ತು ಟ್ರೋಫಿಗಳೊಂದಿಗೆ ತಮ್ಮ ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡರು. ಪಂದ್ಯಾವಳಿಯು ಫಿಡೆ ಸ್ವಿಸ್ ಲೀಗ್ ಮಾದರಿಯಲ್ಲಿ 20 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಸೇರೆ​‍್ಡಯಾಗಿ ಜರುಗಿತು ಮತ್ತು 156 ಸ್ಪರ್ಧಾಳುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಜಗದೀಪ್ ಬಹುಮಾನ ವಿತರಿಸಿದರು . ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ನಾಯ್ಕ, ರಾಮಚಂದ್ರ ಭಟ್ ಕೃಷ್ಣ ಎಸ್‌.ಭಟ್ ಖಜಾಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.