ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ

ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ Prize distribution to chess tournament winners

ಕಾರವಾರ, ಜ.13 :- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಾರವಾರ, ಉತ್ತರ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಕ್ರೆಡಿಟ್ ಸೊಸೈಟಿ, ಜಿಲ್ಲಾ ಕ್ರೀಡಾ ಪ್ರತಿಷ್ಠಾನ ಹಾಗೂ ಕಾರವಾರ ಚೆಸ್ ಕ್ಲಬ್ ಇವರ ಸಹಯೋಗದೊಂದಿಗೆ ಕಾರವಾರದ ಸರಕಾರಿ ನೌಕರರ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿ ಭಾನುವಾರ ನಡೆಯಿತು.  

ಉತ್ತರ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಕ್ರೆಡಿಟ್ ಸೊಸೈಟಿ ಹಾಗು ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ನಾಯ್ಕ, ಉಪಾಧ್ಯಕ್ಷ ರಾಮಚಂದ್ರ ಭಟ್, ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ಖಜಾಂಚಿ ಕೃಷ್ಣ ಎಸ್‌.ಭಟ್, ಉತ್ತರ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಹಕಾರಿ ಕ್ರೆಡಿಟ್ ಸೊಸೈಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತರಿಗೆ ಜಗದೀಪ ರಾವ್ ಬಹುಮಾನವನ್ನು ವಿತರಿಸಿದರು.  

ಪಂದ್ಯಾವಳಿಯಲ್ಲಿ ಮುಕ್ತ, 17 ವರ್ಷದೊಳಗಿನ ಹಾಗೂ 13 ವರ್ಷದೊಳಗಿನವರ ವಿಭಾಗದ ರಾಜ್ಯ ಆಯ್ಕೆಯ ಪ್ರಕ್ರಿಯೆ ನಡೆಯಿತು. ಒಟ್ಟೂ 27,500 ರೂ. ನಗದು ಹಾಗೂ ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಯಿತು. ಮುಖ್ಯತೀಪುಗಾರ ಶ್ರೀ. ಆನಂದ ಸ್ವಾಮಿ ಪ್ರಕಟಣೆಯಂತೆ ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ ಎಮ್‌. ಸುಮೀತ್ ಕುಮಾರ್ ರೂ. 4,000 ಮತ್ತು ಟ್ರೋಫಿ, ದ್ವಿತೀಯ ರಾಮಚಂದ್ರ ಭಟ್ ಮಾತ್ನಳ್ಳಿ ರೂ.3,000 ಮತ್ತು ಟ್ರೋಫಿ, ತೃತೀಯ ಸಮರ್ಥ ಜೆ. ರಾವ್ ರೂ.2,000 ಮತ್ತು ಟ್ರೋಫಿ, ಚತುರ್ಥ ನವೀನ ಶ್ರೀ. ಹೆಗಡೆ ರೂ.1,000 ಮತ್ತು ಟ್ರೋಫಿ, 17 ವರ್ಷದೊಳಗಿನ ವಿಭಾಗ ಉತ್ತಮ ಬಾಲಕಿ ಆಟಗಾರ್ತಿ ಪ್ರಥಮ ಭೂಮಿಕಾ ಪ್ರದೀಪ ಹೆಗಡೆ ರೂ.2,500 ಮತ್ತು ಟ್ರೋಫಿ, ದ್ವಿತೀಯ ಆದ್ಯ ಕಟ್ಟೇರ ರೂ.1,250 ಮತ್ತು ಟ್ರೋಫಿ, 17 ವರ್ಷದೊಳಗಿನ ವಿಭಾಗ ಪ್ರಥಮ ಅಭಿನೀತ ಭಟ್ ರೂ.2,500 ಮತ್ತು ಟ್ರೋಫಿ, ದ್ವಿತೀಯ ದಕ್ಷ ಜಿ. ಬಳ್ಕುರ ರೂ.1,500 ಮತ್ತು ಟ್ರೋಫಿ, ತೃತೀಯ ಶ್ರವಣ ಆರ್‌. ಹೆಗಡೆ ರೂ.1,000 ಮತ್ತು ಟ್ರೋಫಿ, 13ವರ್ಷದೊಳಗಿನವರ ವಿಭಾಗದ ಉತ್ತಮ ಬಾಲಕಿ ಆಟಗಾರ್ತಿ ಪ್ರಥಮ ಸಮೃದ್ಧಿ ಆರ್‌.ರೇವಣ್ಯರ ರೂ.2,500 ಮತ್ತು ಟ್ರೋಫಿ, ದ್ವಿತೀಯ ಸಾದ್ವಿ ಶರಣಪ್ಪ ಹಳ್ಳಿ ರೂ.1,250ಮತ್ತು ಟ್ರೋಪಿ ಪಡೆದಿದ್ದಾರೆ.  

13 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಪವನ್ ಕುಮಾರ್ ಹೆಗಡೆ ರೂ.2,500 ಮತ್ತು ಟ್ರೋಫಿ, ದ್ವಿತೀಯ ಚಿಂತನ ಬಿ. ಭಟ್ ರೂ.1,500 ಮತ್ತು ಟ್ರೋಫಿ, ತೃತೀಯ ಆದಿತ್ಯ ನೈನ್ ರೂ.1,000 ಮತ್ತು ಟ್ರೋಫಿ ಪಡೆದಿದ್ದಾರೆ.   ಪಂದ್ಯಾವಳಿಯು ಫಿಡೆ ಸ್ವಿಸ್ ಲೀಗ್ ಮಾದರಿಯಲ್ಲಿ 20 ನಿಮಿಷ ಮತ್ತು 5 ಸೆಕೆಂಡ್ ಪ್ರತಿ ನಡೆಗೆ ಸೇರೆ​‍್ಡಯಾಗಿ ಜರುಗಿತು ಮತ್ತು 156 ಸ್ಪರ್ಧಾಳುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಪ್ರತಿಯೊಂದು ವಿಭಾಗದಲ್ಲಿ ತಲಾ ಎರಡರಂತೆ ಆಟಗಾರರನ್ನು ರಾಜ್ಯ ಚೆಸ್ ಪಂದ್ಯಾವಳಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ನವೀನ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.