‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ
Prize distribution and silver jubilee for the winning listeners of the ‘Aralali Ayyot Mana’ series
ಲೋಕದರ್ಶನ ವರದಿ
ಧಾರವಾಡ 16 : ಆಕಾಶವಾಣಿಯ ಶಾಲ್ಮಲಾ ಸಭಾಂಗಣದಲ್ಲಿ ಧಾರವಾಡ ಮಕ್ಕಳ ಆಕಾಡೆಮಿ ಮತ್ತು ಆಕಾಶವಾಣಿ, ಧಾರವಾಡ ಸಹಯೋಗದಲ್ಲಿ ಪ್ರಸಾರಗೊಂಡ ‘ಅರಳಲಿ ಬೆಳಕಿನ ನಾಳೆ’ ಸರಣಿಯ ವಿಜೇತ ಕೇಳುಗರ ಬಹುಮಾನ ವಿತರಣಾ ಮತ್ತು ರಜತ ಮಹೋತ್ಸವ ಗ್ರಂಥಕರ್ತರಿಗೆ ಹಾಗೂ ಪ್ರಾಯೋಜಕರಿಗೆ ಗೌರವ ಸನ್ಮಾನ ಸಮಾರಂಭಕ್ಕೆ ಡಾ. ಎಸ್.ಎಮ್. ಶಿವಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದರು. ಮುಂದುವರೆದು ಮಾತನಾಡುತ್ತಾ ಭೂಮಿ, ಪರಿಸರ, ನೀರು ಇವುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ ಎಂದರು.
ಅಧ್ಯಕ್ಷತೆಯನ್ನು ಆಕಾಶ ವಾಣಿಯ ಸಹಾಯಕ ನಿರ್ದೇಶಕ ಶರಣಬಸವ ಚೋಳಿನ್ ವಹಿಸಿ ಮಾತನಾಡಿದರು. ಮಕ್ಕಳ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಮಾತನಾಡುತ್ತ ಮಕ್ಕಳ ಅಕಾಡೆಮಿ ಬೆಳೆದು ಬಂದ ದಾರಿಯನ್ನು ವಿವರಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಯು. ಬೆಳ್ಳಕ್ಕಿ ಅತಿಥಿಗಳ ಪರಿಚಯ ಮಾಡಿದರು. ಮಂಜುಳಾ ಪುರಾಣಿಕ ಸ್ವಾಗತಿಸಿದರು. ಡಾ. ಎಮ್. ವೈ. ಸಾವಂತ್ ವಂದಿಸಿದರು. ಮಾಯಾ ರಾಮನ್ ನಿರೂಪಿಸಿದರು. ಸಮಾರಂಭದಲ್ಲಿ ಅಕಾಡೆಮಿಯ ಸದಸ್ಯರಾದ ಕವಿತಾ ದೇಶಪಾಂಡೆ, ಡಾ.ಸ್ನೇಹಾ ಜೋಶಿ, ಡಾ. ಐ.ಎಸ್. ಮಳೇಕರ್, ಡಾ. ಬಾಳಣ್ಣ ಚಿನಗುಡಿ, ಶ್ರೀಕಾಂತ್ ದೊಡವಾಡ, ಡಾ. ವೆಂಕಮ್ಮ ಗಾಂವಕರ್, ಸತೀಶ್ ಪರ್ವತಿಕರ್ ಮತ್ತು ಡಾ. ಸಿ.ಗು. ಹಿರೇಮಠ ಉಪಸ್ಥಿತರಿದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 