ಪಾರಿತೋಷಕ ವಿತರಣೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ

ಪಾರಿತೋಷಕ ವಿತರಣೆ  ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ  Prize Distribution and Annual Friendship Conference

ಲೋಕದರ್ಶನ ವರದಿ 

ಯಮಕನಮರಡಿ 09: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ 2025- 26 ನೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುಮಾನ ವಿತರಣೆ ಹಾಗೂ ಸ್ನೇಹ ಸಮ್ಮೇಳನ ಜರುಗಿತು.  

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸ್ಥಳೀಯ ಶೂನ್ಯ ಸಂಪಾದನಾ ಮಠದ ಸಿದ್ದಬಸವ ದೇವರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವೀರಣ್ಣ ಬಿಸಿರೊಟ್ಟಿ ಹಾಗೂ ಇತರೆ ಸದಸ್ಯರು ಹಾಗೂ ಪ್ರಾಚಾರ್ಯರು ನೆರವೇರಿಸಿದರು.   

ನಂತರದಲ್ಲಿ ಸಿದ್ದಬಸವ ದೇವರು ಆಶೀರ್ವಚನ ನೀಡಿ ಮಾತನಾಡುತ್ತ ವಿದ್ಯಾರ್ಥಿಗಳು ಇಂದು ತಮ್ಮ ಪಾಲಕರ ಪರಿಸ್ಥಿತಿ ಅರೆತು ಎಚ್ಚರಿಕೆಯಿಂದ ಇರಬೇಕು ಮಕ್ಕಳ ಮೇಲೆ ತಂದೆ ತಾಯಿಗಳು ದೊಡ್ಡ ಭರವಸೆ ಇಟ್ಟುಕೊಂಡಿರುತ್ತಾರೆ ಆದರೆ ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಪ್ರೀತಿ ಪ್ರೇಮ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನೆ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸಯಮಕ್ಕೆ ಮಹತ್ವ ಕೊಟ್ಟು ಅಧ್ಯನಯನಶೀಲರಾಗಬೇಕು ಎಂದು ತಿಳಿಸಿದರು.   

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಿ.ಬಿ.ಕೊಡ್ಲಿ 2025-26 ನೇ ಸಾಲಿನ ವರದಿ ವಾಚನ ಮಾಡಿ ಕಾಲೇಜಿನ ಸಾದನೆ ಹಾಗೂ ವಿದ್ಯಾರ್ಥಿಗಳ ಸಾಧನೆ ಕುರಿತು ತಿಳಿಸಿ ವಾರ್ಷಿಕ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಅದರಂತೆ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಸ್‌ಆರ್ ತಬರಿ ಸರ್ ಅವರು ನಡೆಸಿಕೊಟ್ಟರು. ಕಾಲೇಜು ಅಭಿವೃದ್ಧಿ ಸಮಿತಿಯ ಎಲ್ಲ ಸದಸ್ಯರು ಕಳೆದ ವರ್ಷದಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಲಾ ವಿಭಾಗದಲ್ಲಿ ಸೌಜನ್ಯ ನಂದಗಾವಿ ವಾಣಿಜ್ಯ ವಿಭಾಗದಲ್ಲಿ ಕೀರ್ತಿ ಕಾಂಬಳೆ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಶಿಳ್ಳಿ ನಗದು ಬಹುಮಾನ ವಿತರಿಸಲಾಯಿತು.  ಅದರಂತೆ  ಕ್ರೀಡಾಕೂಟದಲ್ಲಿ ಸಮಗ್ರ ವಿರಾಗ್ರಣಿ ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು.  

ವಿದ್ಯಾರ್ಥಿನಿಯರಾದ ಲಕ್ಷ್ಮೀ ಪಾಟೀಲ ಸಂದ್ಯಾ ನಾವಿ ಪ್ರೀತಿ ಘಸ್ತಿ ಹಾಗೂ ಅಮೂಲ್ಯ ಪಾಟೀಲ ಕಳೆದ ಎರಡು ವರ್ಷಗಳ ಅನುಭವ ಹಂಚಿಕೊಂಡರು. ಉಪನ್ಯಾಸಕಿ ಕು.ಜಿ.ಜಿ.ಮಠಪತಿ ಉಪನ್ಯಾಸಕ ಅನುಭವ ಹಂಚಿಕೊಂಡರು. ಅದರಂತೆ ಕಾಲೇಜಿನ ಎಲ್ಲ ಉಪನ್ಯಾಸಕರು ತಮ್ಮ ತಮ್ಮ ವಿಷಯದಲ್ಲಿ ದ್ವಿತೀಯ ಪಿ.ಯು.ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಯಕ್ತಿಕವಾಗಿ ನಗದು ಬಹುಮಾನ ವಿತರಿಸಿದರು.  

ಅದರಂತೆ ಕಾರ್ಯಕ್ರಮದಲ್ಲಿ ಎನ್‌.ಎಸ್‌.ಎಸ್ ಯೋಜನೆಯಿಂದ ಅತ್ಯುತ್ತಮ ಸ್ವಯಂ ಸೇವಕ ಹಾಗೂ ಅತ್ಯುತ್ತಮ ಸ್ವಯಂ ಸೇವಕಿಯರನ್ನು ಗುರುತಿಸಿ ಕ್ರಮವಾಗಿ  ವಿದ್ಯಾರ್ಥಿಗಳಾದ ಬಾಬು ಹುಕ್ಕೇರಿ ಹಾಗೂ ಶಿಲ್ಪಾ ಬಂಗಾರಿ ಇವರಿಗೆ ಪ್ರಮಾಣ ಪತ್ರ ಹಾಗೂ ಟ್ರೋಪಿ ವಿತರಿಸಲಾಯಿತು.  

ಕಾರ್ಯಕ್ರಮವನ್ನು ಎಸ್‌.ಆರ್‌.ತಬರಿ ನಿರೂಪಿಸಿದರು. ಸ್ವಾಗತವನ್ನು ಎಸ್‌.ಎ.ರಾಮನಕಟ್ಟಿ  ಕೋರಿದರು. ಮಾಲಾರೆ​‍್ಣ ಕಾರ್ಯಕ್ರಮವನ್ನು ಎ.ಎ.ಕಿವಂಡಾ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾ ಹೊಳೆಪ್ಪಗೊಳ ವಂದನೆ ಸಲ್ಲಿಸಿದರು.