ಪ್ರಿಯಾಂಕಾ ಗೆ ಟಿಕೆಟ್ ನಿರಾಕರಣೆ : ಜೇಟ್ಲಿ ಬೇಸರ


ನವದೆಹಲಿ, ಏ26  ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಕಟ್ಟಿ ಆ ಮೂಲಕ ದೇಶದಲ್ಲಿ  ಅಧಿಕಾರ  ಹಿಡಿಯಲು ಹೊರಟ ಕಾಂಗ್ರೆಸ್ ಪಕ್ಷ ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಹಳ ಅನ್ಯಾಯ ಮಾಡಿದೆ. ಇದು ತಮಗೆ ನೋವು ಮತ್ತು ನಿರಾಶೆ ಉಂಟು ಮಾಡಿದೆ  ಎಂದು ಕೇಂದ್ರ  ಹಣಕಾಸು ಸಚಿವ ಅರುಣ್ ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಪ್ರಿಯಾಂಕ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ  ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನವೇ ಸೋಲೊಪ್ಪಿಕೊಂಡಿದೆ ಎಂದು ಹೇಳಿದರು. ಪ್ರಿಯಾಂಕಾ ಅವರಿಂದಲೇ ಕಾಂಗ್ರೆಸ್ ಉದ್ಧಾರ ಸಾಧ್ಯ ಎಂದು ನಂಬಿಕೊಂಡಿದ್ದ ಪಕ್ಷ ಅವರಿಗೆ ಟಿಕೆಟ್ ವಂಚನೆ  ಮಾಡಿರುವುದು ನನಗೆ ನೋವು ಮತ್ತು ನಿರಾಶೆ ತಂದಿದೆ ಎಂದು ಅವರು ಲೇವಡಿ ಮಾಡಿದರು.