ನೇಸರಗಿ. ಜ.08 . ಕ್ಷೇತ್ರದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವದು ಆ ನಿಟ್ಟಿನಲ್ಲಿ ನೇಸರಗಿ ಮತ್ತು ನಾಗನೂರ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಕೆಲಸಗಳು ನಡೆಯುತ್ತಿದ್ದು ಇನ್ನೂ ಅನೇಕ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುವದೆಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಬುಧವಾರದಂದು ತಾಲೂಕಿನ ಮುರಕಿಭಾವಿ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ 5050 ರ ಅನುಧಾನದಲ್ಲಿ ರೂ. 10 ಲಕ್ಷ ಗಳ ಅನುಧಾನದಲ್ಲಿ ಮುಖ್ಯ ರಸ್ತೆಯಿಂದ ಶೇಖರ ಅವರ ಮನೆವರೆಗೆ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮತ್ತು ನೇಸರಗಿ ಗ್ರಾಮದ ಪೊಲೀಸ್ ಠಾಣೆ ಹಿಂದೆ ಹೊಲಕ್ಕೆ ಹೋಗುವ ಹೊಂಗಲ ರಸ್ತೆಗೆ ಮುಖ್ಯಮಂತ್ರಿ ವಿಶೇಷ ಅನುಧಾನದ ರೂ. 10 ಲಕ್ಷ ಗಳ ಸಿ ಸಿ ರಸ್ತೆ ಕಾಮಗಾರಿಗೆ ಕಾಮಗಾರಿಗೆ ಮತ್ತು ಮಲ್ಲಾಪೂರ ಕೆ ಎನ್ ಗ್ರಾಮದ ಗೌಡರ ಓಣಿ ಸಿ ಸಿ ರಸ್ತೆ ನಿರ್ಮಾಣಕ್ಕೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ 6 ಲಕ್ಷ 90 ಸಾವಿರ ಅನುಧಾನದಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಬಾಳಪ್ಪ ಮಾಳಗಿ, ರೈತ ಮುಖಂಡ ರವಿ ಸಿದ್ದಮ್ಮನವರ, ಈರ್ಪ ಸೋಮಣ್ಣವರ, ಡಾ. ಪ್ರಕಾಶ ಹಲ್ಯಾಳ, ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ , ಪ್ರಕಾಶ್ ತೋಟಗಿ, ಯಮನಪ್ಪ ಪೂಜೇರಿ, ಮಂಜು ಮಾದೇನ್ನವರ, ಸುಜಾತ ಪಾಟೀಲ, ಬಾಳಪ್ಪ ಕುಂಟಗಿ, ದೊಡ್ಡನಾಯ್ಕ ರೇವಣ್ಣವರ, ಶಿವನಿಂಗಪ್ಪ ಶಿವಬಸನವರ, ಶಿದ್ದಲಿಂಗಪ್ಪ ಹುನಸಿಕಟ್ಟಿ, ವೀರನಗೌಡ ಪಾಟೀಲ, ಅಡಿವಪ್ಪ ಮೋದಗಿ, ಶಿದಲಿಂಗಪ್ಪ ರುದ್ರನಾಯ್ಕರ, ಬಾಳಪ್ಪ ಪೂಜೇರಿ, ಮಂಜು ಕೊಳದೂರ, ಮಲ್ಲಾಪೂರ ಗ್ರಾ ಪಂ ಅಧ್ಯಕ್ಷ ಅಶೋಕ ವಕ್ಕುಂದ, ಪಿಡಿಓ ಬಸನಗೌಡ ಪಾಟೀಲ, ಕಾರ್ಯದರ್ಶಿ ಶಿವಮೊಗ್ಗಪ್ಪ ಗಡ್ಡಿ, ಮಲ್ಲನಗೌಡ ಪಾಟೀಲ, ನಾಗಪ್ಪ ಸುಳ್ಳದ, ಗೌಡಪ್ಪ ಶಿವಬಸನವರ, ರಾಜು ಬುಗಡಿಗಟ್ಟಿ, ರುದ್ರಗೌಡ ಪಾಟೀಲ, ಶಂಕರಗೌಡ ಗುರನಗೌಡರ, ಗೀರೀಗೌಡ ಪಾಟೀಲ ಎಇಇ ಮಹೇಶ ಹೊಲಿ, ಗುತ್ತಿಗೆದಾರ ವಿ ಎಸ್ ಹೊಸೂರ ಸೇರಿದಂತೆ ನೇಸರಗಿ, ಮುರಕಿಭಾವಿ, ಮಲ್ಲಾಪೂರ ಕೆ ಎನ್ ಗ್ರಾಮಗಳ ಅನೇಕರು ಭಾಗವಹಿಸಿದ್ದರು.