ನೈಸಗರ್ಿಕ ಸಂಪನ್ಮೂಲ ರಕ್ಷಣೆ ಕಾಮಗಾರಿಗೆ ಆದ್ಯತೆ, ಶೌಚಾಲಯ ಬಳಕೆಗೆ ಜಾಗೃತಿ: ಶಿಲ್ಪಾ ನಾಗ್


ಹಾವೇರಿ.01: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತಾಪಿ ವರ್ಗಗಳಿಗಿರುವ ಸೌಲಭ್ಯಗಳು, ಶಾಲಾ ಅಭಿವೃದ್ಧಿ, ಅರಣ್ಯೀಕರಣ ಸೇರಿದಂತೆ ವಿವಿಧ ಸೌಲಭ್ಯಗಳ ಕುರತ ಜನರಿಗೆ ಮಾಹಿತಿ ನೀಡುವುದು ಹಾಗೂ ಸ್ವಚ್ಛ ಭಾರತ ಮಿಷನ್ ಅಡಿ ಸ್ವಚ್ಛ ಸವರ್ೇಕ್ಷಣಾ ಗ್ರಾಮೀಣ ಅಭಿಯಾನದಡಿ ಶೌಚಾಲಯ ಬಳಕೆ, ಸಾಮೂಹಿಕ ಶೌಚಾಲಯಗಳ ಸ್ವಚ್ಛತೆಯಲ್ಲಿ ಸಮುದಾಯ ಭಾಗವಹಿಸುವ ಕುರಿತಂತೆ ಇಂದಿನಿಂದ ಒಂದು ವಾರದ ವರೆಗೆ ಗ್ರಾಮೀಣರಿಗೆ ಸಾಮೂಹಿಕ ಅರಿವು ಮತ್ತು ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಬುಧವಾರ ಹಾನಗಲ್ ತಾಲೂಕು ಸೋಮಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಕೆರೆ ಅಂಗಳದಲ್ಲಿ ಕೂಲಿಕಾಮರ್ಿಕರೊಂದಿಗೆ ಶ್ರಮದಾನದಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಗಸ್ಟ್ 1 ರಿಂದ 8ರವರೆಗೆ ಜಿಲ್ಲೆಯ 224 ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಕರ್ಾರದ ಮಹತ್ವಾಕಾಂಕ್ಷಿ ಆಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವಾಷರ್ಿಕವಾಗಿ 50ಸಾವಿರ ಕೋಟಿ ಅನುದಾನದಲ್ಲಿ ಜನರ ಜೀವನ ಉಪಯೋಗ ಕಾರ್ಯಕ್ರಮಗಳು ಹಾಗೂ ಜೀವನ ಸುಧಾರಣೆಗೆ ಮೂಲ ಸೌಕರ್ಯ ಕಲ್ಪಿಸಲು 294 ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2006ರಿಂದ ಈವರೆಗೆ ಈ ಯೋಜನೆಯಡಿ ದೇಶದಲ್ಲಿ 90ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 11.2 ಕೋಟಿ ಕೂಲಿ ಕಾಮರ್ಿಕರು ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 1.93 ಲಕ್ಷ ಸಕ್ರಿಯ ಕಾರ್ಯಕರ್ತರು(ಕೂಲಿಕಾರರು) ನೋಂದಾಯಿಸಿಕೊಂಡಿದ್ದು ಕಳೆದ ವರ್ಷ 39 ಲಕ್ಷ ಮಾನವ ದಿನಗಳನ್ನು ಜಿಲ್ಲೆಯಲ್ಲಿ ಸೃಜಿಸಲಾಗಿದೆ. 131 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ 2018-19ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಂದ 696 ಕೋಟಿ ರೂ.ಗಳ ಕಾಮಗಾರಿ ಗುಚ್ಛವನ್ನು ತಯಾರಿಸಲಾಗಿದೆ ಅನುಮೋದನೆ ಗೊಂಡಿದೆ. ರಾಜ್ಯ ಸಕರ್ಾರದಿಂದ ಈ ವರ್ಷ ಜಿಲ್ಲೆಗೆ 44.71 ಲಕ್ಷ ಮಾನವ ದಿನಗಳ ಸೃಜನತೆಗೆ ಗುರಿ ನಿಗಧಿಪಡಿಸಲಾಗಿದೆ. ಈಗಾಗಲೇ 4.25  ಲಕ್ಷ  ಮಾನವ ದಿನಗಳನ್ನು ಸೃಜಿಸಲಾಗಿದೆ. ಈ ವರ್ಷ 196 ಕೋಟಿ ಆಥರ್ಿಕ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು. 

ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನೈಸಗರ್ಿಕ ಸಂಪನ್ಮೂಲಗಳ ಸೃಜನೆಗೆ ಆದ್ಯತೆ ನೀಡಲಾಗಿದೆ. ಈ ಕುರಿತು  260 ಕಾಮಗಾರಿಗಳನ್ನು ಸೃಜನೆಮಾಡಿದೆ. ಈ ಪೈಕಿ 181 ಕಾಮಗಾರಿಗಳು ನೈಸಗರ್ಿಕ ಸಂಪನ್ಮೂಲಗಳ ರಕ್ಷಣೆಗಾಗಿಯೇ ರೂಪಿಸಲಾಗಿದೆ. 84 ಕಾಮಗಾರಿಗಳು ನೀರು ಸಂರಕ್ಷಣೆ, ರೈತರಿಗೆ ಅನುಕೂಲಕರವಾದ ಕೃಷಿಹೊಂಡ, ಕೆರೆ ಹೂಳೆತ್ತುವುದು, ತಡೆಗೋಡೆ, ನಮ್ಮ ಹೊಲ ನಮ್ಮ ದಾರಿ, ಕೆರೆಗಳ ಮರು ಪೂರ್ಣ, ಕೊಳವೆಬಾವಿಗಳ ಮರುಪೂರ್ಣ, ರೈತ ಕಣ, ಎರೆಹುಳು ಗೊಬ್ಬರ ತೊಟ್ಟಿ, ಕುರಿ, ದನದ ದೊಡ್ಡಿ ಹಾಗೂ ವಿಶೇಷವಾಗಿ ಸಕರ್ಾರಿ ಶಾಲೆಗಳಿಗೆ ಆವರಣಗೋಡೆ ನಿಮರ್ಾಣ, ಶೌಚಾಲಯ ನಿಮರ್ಾಣ, ಕೈ ತೋಟ ನಿಮರ್ಾಣದಂತಹ ಕಾಮಗಾರಿಗಳನ್ನು ರೂಪಿಸಲು ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.

ಹೆಚ್ಚುವರಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲು ಜಿಲ್ಲೆಯ 224 ಗ್ರಾಮ ಪಂಚಾಯತಿಗಳಲ್ಲಿ ಆಗಸ್ಟ್ 8 ರಂದು ಗ್ರಾಮ ಸಭೆ ನಿಗಧಿಪಡಿಸಲಾಗಿದೆ.  ಪಂಚಾಯತಿ ಇತಿಹಾಸದಲ್ಲಿ ಒಂದೇ ದಿನ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಏಕ ಕಾಲದಲ್ಲಿ ಗ್ರಾಮ ಸಭೆ ನಡೆಸಿ ಜನಪ್ರತಿನಿಧಿಗಳು, ಗ್ರಾಮಸ್ಥರು, ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಅಗತ್ಯವಾದ ಕಾರ್ಯಕ್ರಮ ರೂಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದೇ ಮಾದರಿಯಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಸ್ವಚ್ಛ ಸವರ್ೇಕ್ಷಣಾ ಗ್ರಾಮೀಣ ಅಭಿಯಾನ ಜಾಗೃತಿ ಕಾರ್ಯಕ್ರಮ ಚಾಲನೆ ನೀಡಲಾಗಿದೆ. ಬಯಲು ಬಹಿದರ್ೆಸೆ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯಲ್ಲಿ 1,95,060 ಶೌಚಾಲಯಗಳನ್ನು ನಿಮರ್ಿಸಲಾಗಿದೆ. ಜಿಲ್ಲೆಯಲ್ಲಿ ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಮಹಿಳೆಯರು ಹೆಚ್ಚಾಗಿ ಶೌಚಾಲಯ ಬಳಸುತ್ತಾರೆ. ಆದರೆ ಮಕ್ಕಳು ಹಾಗೂ ವಯಸ್ಸಾದವರು ಶೌಚಾಲಯ ಕಡಿಮೆ ಪ್ರಮಾಣದಲ್ಲಿ ಬಳಸುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆಯ ಜಾಗೃತಿ, ಸಾಮೂಹಿಕ ಶೌಚಾಲಯಗಳ ಸ್ವಚ್ಛತೆ ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸಲಾಗುವುದು ಎಂದರು.

ಸ್ವಚ್ಛ ಸವರ್ೇಕ್ಷಣಾ ಕೇಂದ್ರ ಸಕರ್ಾರದ ತಂಡ ಜಿಲ್ಲೆಗೆ ಮೌಲ್ಯ ಮಾಪನ ತಂಡ ಆಗಮಿಸಲಿದೆ. ಶೌಚಾಲಯದ ಬಳಕೆ, ಸಾಮೂಹಿಕ ಶೌಚಾಲಯದ ಸ್ವಚ್ಛತೆ, ನೀರಿನ ಸೌಕರ್ಯ ಸೇರಿದಂತೆ ಮೂಲ ಸೌಕರ್ಯಗಳು ಬಗ್ಗೆ ಸಾರ್ವಜನಿಕರ ಅನಿಸಿಕೆ ಕುರಿತಂತೆ ಮೌಲ್ಯಮಾಪನ ಮಾಡಿ ಅಂಕ ನೀಡಲಿದೆ. ಈ ಅಂಕಗಳನ್ನು ಆಧರಿಸಿ ರ್ಯಾಂಕ್ ನೀಡಲಿದೆ. ಜಿಲ್ಲೆಗೆ ಉತ್ತಮ ರ್ಯಾಂಕ್ ದೊರಕಬೇಕಾದರೆ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದ ಅಗತ್ಯವಾಗಿದೆ ಎಂದು ತಿಳಿಸಿದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಎಂ.ಉದಾಸಿ ಅವರು ಮಾತನಾಡಿ, ವೆಚ್ಚಮಾಡಿದ ಹಣ ಸದುಪಯೋಗವಾಗಬೇಕಾದರೆ ಸಾರ್ವಜನಿಕರು ಸದ್ಬಳಕೆಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶೌಚಾಲಯಕ್ಕಾಗಿ ವಿನಿಯೋಗಿಸಿದ ಹಣ ಸಾರ್ಥಕವಾಗಬೇಕಾದರೆ ಫಲಾನುಭವಿಗಳು ಶೇ.100ರಷ್ಟು ಶೌಚಾಲಯ ಬಳಸುವಂತಾಗಬೇಕು. ಈ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮಪರ್ಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರನ್ನು ನಿಲ್ಲಿಸಿ ಈ ನೀರನ್ನು ಕೃಷಿ ಮತ್ತು ಜನ-ಜಾನುವಾರುಗಳ ಉಪಯೋಗಕ್ಕಾಗಿ ಬಳಕೆಮಾಡುವ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಹೆಚ್ಚು ಕೆರೆಗಳಿದ್ದು ಈ ಕೆರೆಗಳ ಪುನರುಜ್ಜೀವನಕ್ಕೆ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಕೆಮಾಡಿಕೊಳ್ಳಲಾಗುವುದು ಹಾಗೂ ವಿಶೇಷವಾಗಿ ಶಾಲೆಗಳಿಗೆ ಆವರಣಗೋಡೆ, ಶೌಚಾಲಯ, ಬಿಸಿಯೂಟದ ಅಡುಗೆ ಕೋಣೆ ನಿಮರ್ಾಣಕ್ಕೆ ಆದ್ಯತೆ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.