ವಿಜ್ಞಾನ ಕಲಿಕೆಗೆ ಆದ್ಯತೆ ನೀಡಿ- ಎಸ್ ಎಸ್ ಪಾಟೀಲ್
Prioritize learning science - SS Patil
ವಿಜ್ಞಾನ ಕಲಿಕೆಗೆ ಆದ್ಯತೆ ನೀಡಿ- ಎಸ್ ಎಸ್ ಪಾಟೀಲ್
ಹೂವಿನ ಹಡಗಲಿ 14: ಮೂಲಭೂತ ವಿಜ್ಞಾನ ಕಲಿಕೆಗೆ ಆದ್ಯತೆ ನೀಡಿರಿ ಎಂದು ಪ್ರಾಚಾರ್ಯರಾದ ಪ್ರೊ ಎಸ್ ಎಸ್ ಪಾಟೀಲ್ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಜಿ ಬಿ ಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಮಂಗಳವಾರ ಪ್ರಥಮ ಬಿ ಎಸ್ ಸಿ ಹಾಗೂ ಬಿ ಸಿ ಎ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಪರಿಚಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಓದಿಗೆ ಸೀಮಿತರಾಗದೆ ಹೊಸ ವಿಜ್ಞಾನದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿರಿ ಎಂದು ಹೇಳಿದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿದರು.ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸುರೇಶ ಅಂಗಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಜ್ಞಾನಿಗಳ ಸಂಶೋಧನೆ ಬದುಕು ಆದರ್ಶ ಆಗಬೇಕು. ಮೇಡಂ ಕ್ಯೂರಿ ಐಸಾಕ್ ನ್ಯೂಟನ್ ಆಲ್ಫ್ರಡ್ ನೊಬೆಲ್ ಸಿ ವಿ ರಾಮನ್ ಎಡಿಸನ್ ಶ್ರೇಷ್ಠ ವಿಜ್ಞಾನಿಗಳು ಜನ ಸಾಮಾನ್ಯರ ಒಳಿತಿಗಾಗಿ ಸಂಶೋಧನೆ ಮಾಡಿದ್ದಾರೆ ಎಂದು ತಿಳಿಸಿದರು .ಉಪನ್ಯಾಸಕ ಚಂದ್ರಬಾಬು, ಬಿ ಸಿ ಎ ವಿಭಾಗದ ಮಹಿಮಾ ಜ್ಯೋತಿ.ಅಕ್ಷತಾ ಮಾತನಾಡಿದರು. ಉಪನ್ಯಾಸಕರಾದ ಸಂದೀಪ್, ಹರ್ಷ ಕೆ ಎಂ, ಕುಸುಮ ಶ್ವೇತಾ ಮಹೇಶ್, ಚಂದನ, ಅಂದವ್ವ ಇತರರು ಇದ್ದರು.ಅನುಷಾ, ನಂದೀಶ್, ರೋಹಿತ್ ಕುಮಾರ್, ಅಕ್ಷತಾ ಕೆ ಎಸ್ ನಿರ್ವಹಿಸಿದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 