ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಉತ್ನಾಳಶ್ರೀ

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ: ಉತ್ನಾಳಶ್ರೀ Prioritize eco-friendly Ganesha idols: Utnalashri

  ದೇವರಹಿಪ್ಪರಗಿ 25: ಗಣೇಶೋತ್ಸವದಲ್ಲಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳ ಬಳಕೆ ನಿರ್ಬಂಧಿಸಿ, ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಬಳಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಉತ್ನಾಳ ಹಿರೇಮಠದ ಸಂಗಮೇಶ್ವರ ಮಹಾಸ್ವಾಮಿಗಳು ಹೇಳಿದರು.  ತಾಲೂಕಿನ ಯಾಳವಾರ ಗ್ರಾಮದ ಗ್ರಾ.ಪಂ ಆವರಣದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನ, ವಿಜಯಪುರ ಹಾಗೂ ಬಸವ ಹಸಿರು ಬಳಗ ದೇವರಹಿಪ್ಪರಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಮೃತ ಹಸ್ತದ ಮಣ್ಣಿನ ಗಣೇಶ ಪರಿಸರ ಸ್ನೇಹಿ ಗಣಪತಿ ಶಿಬಿರ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಉತ್ಸವಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ   ಹಲವು ವರ್ಷಗಳಿಂದ ಜಾಗೃತಿಯ ಜತೆಗೆ ಮಣ್ಣಿನ ಗಣಪತಿ ಮೂರ್ತಿಗಳನ್ನು ರಾಜ್ಯದ ಪ್ರತಿಷ್ಠಿತ ಕಲಾವಿದರ ತಂಡ ಶಿಬಿರದಲ್ಲಿ ಪಾಲ್ಗೊಂಡು ಗ್ರಾಮದ ಬಸವ ದಳದ ಯುವಕರು ರಾಜ್ಯದ ಸುಮಾರು 125 ಗ್ರಾಮಗಳ ಜನರಿಗೆ ತಲುಪಿಸುತ್ತಿದೆ ಉಡುವುದು ಶ್ಲಾಘನೀಯ. ಇದೇ ರೀತಿ ಎಲ್ಲ ಕಡೆ ಸ್ವದೇಶಿ ಜಾಗರಣೆಯನ್ನು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಗಣೇಶ ಮಂಡಳಿ ಹಾಗೂ ಮೂರ್ತಿ ತಯಾರಕರಲ್ಲಿ  ಹೆಚ್ಚಿನ ಅರಿವು ಮೂಡಿಸಬೇಕು ಒತ್ತಾಯಿಸಿದರು.  

ಸಾನ್ನಿಧ್ಯವನ್ನು ಯಾಳವಾರ ಗ್ರಾಮದ ಪುರಾಣಿಕರಾದ ಬಸಯ್ಯ ಶಾಸ್ತ್ರಿಗಳು ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹ ಗಣೇಶೋತ್ಸವ ಆಚರಣೆಗೆ ಸಂಕಲ್ಪ ಮಾಡಲಾಗಿದೆ. ಯುವಕರು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಕಾಳಜಿಯ ಸಂದೇಶವನ್ನು ಸಮಾಜಕ್ಕೆ ಸಾರಲಿದ್ದಾರೆ.

ಒಳ್ಳೆಯ ಆಶಯದೊಂದಿಗೆ ನಿಮ್ಮ ಸಂಕಲ್ಪ ಕೈಗೊಳ್ಳಲಿ, ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.   ಅಧ್ಯಕ್ಷತೆಯನ್ನು ವಹಿಸಿದ್ದ ಬಹಬ ಗೌರವಾಧ್ಯಕ್ಷ ಎಸ್‌.ಎಸ್‌.ಗಡೇದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ಹಾಗೂ ಆರೋಗ್ಯ ಸ್ನೇಹಿ ಹಬ್ಬ ಆಸ್ವಾದಿಸುವ ಸಲುವಾಗಿ ಸುಮಾರು 125 ಗ್ರಾಮಕ್ಕೆ ಅಮೃತ ಹಸ್ತದ ಮಣ್ಣಿನ ಗಣೇಶ ಮೂರ್ತಿಗಳನ್ನು ತಲುಪಿಸುವ ಸಂಕಲ್ಪ, ಪರಿಸರದ ಕಾಳಜಿ ಜೊತೆಗೆ ಭಕ್ತಿ ಬಿಂಬಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ ಕಾರ್ಯವನ್ನು ಸ್ಲಯಾಘಿಸಿದ  ಯುವ ಪಡೆಯೊಂದಿಗೆ ಡುಮುಕುತ್ತಿರುವ ಯುವ ಜೋಡಿಗಳು ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವದರ ಮೂಲಕ ಸಮಾಜದ ಯುವಕರಿಗೆ ಮಾದರಿಯಾಗಿದೆ ಬೇರೆ ಬೇರೆ ಜಿಲ್ಲೆಯ ಕಲಾವಿದರನ್ನು ಗುರುತಿಸಿ ಕರೆಸಿ ಪರಿಸರ ಸ್ನೇಹಿ ಗಣೇಶ ನ ಮೂರ್ತಿ ಹಸ್ತ ಕೌಶಲ್ಯದ ಮೂಲಕ ಮಾಡಿಸುವದು ನಿಜಕ್ಕೂ ಕಷ್ಟದ ಕೆಲಸ ಇಂತಹ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದರು.   

ಉದ್ಘಾಟನೆ ನೆರವೇರಿಸಿದ ಚಿತ್ರ ಕಲಾ ಪ್ರಾಂಶುಪಾಲ ರಮೇಶ ಸಾಸನೂರ ಕಾಲಶಿಕ್ಷಣದ ಬಗ್ಗೆ ಮಾತನಾಡಿದರು. ಕಲಾವಿದ ಕೆಂಚಪ್ಪ ಬಡಿಗೇರ ಮಣ್ಣಿನಿಂದ ಕ್ಷಣಾರ್ಧದಲ್ಲಿ ಗಣ್ಯರ ಮುಂದೆ ಗಣೇಶ ಮೂರ್ತಿ ಪ್ರಾತ್ಯಕ್ಷತೆ ನೀಡಿದರು.    ನಿರೂಪಣೆ ಚಿತ್ರಕಲಾ ಶಿಕ್ಷಕ ಎಸ್‌. ಎಸ್‌.ಬಂಟನೂರ, ಎಚ್‌.ಟಿ.ಕರಡಿ ಅವರು ಸ್ವಾಗತಿಸಿ ವಂದಿಸಿದರು.  ಕಾನಿಪ ತಾಲೂಕು ಅಧ್ಯಕ್ಷ ಸಂಗಮೇಶ ಉತ್ನಾಳ, ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪಿಡಿಓ ಎಮ್‌. ಎಸ್‌. ಕತ್ತಿ, ಮುಖಂಡರುಗಳಾದ ಭೀಮನಗೌಡ ಗುಣಕನಾಳ, ಸತೀಶ ಕೇಮಶೆಟ್ಟಿ, ಎಸ್‌.ಎಂ.ದೋಡಮನಿ, ನಾಗಯ್ಯ ವಸ್ತ್ರದ, ಅಶೋಕ್ ಕುಂಟೋಜಿ, ಮೌನೇಶ ಯಾಳಗಿ, ಭಾಗೇಶ್, ಆಕಾಶ ನಾರಾಯಣ ಪಡಿಯಪ್ಪನವರ ಇದ್ದರು.