ಯುಎನ್‍ಐ ಸುದ್ದಿ ಸಂಸ್ಥೆಯ ಮಾಜಿ ವರದಿಗಾರ ಬ್ರಹ್ಮ ಕಂಚಿಬೋಟ್ಲಾ ನಿಧನಕ್ಕೆ ಪ್ರಧಾನಿ ಸಂತಾಪ
ನವದೆಹಲಿ, ಏ 08, ರಾಷ್ಟ್ರೀಯ ಸುದ್ದಿ ಸಂಸ್ಥೆ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ಮಾಜಿ ವರದಿಗಾರ ಬ್ರಹ್ಮ ಕಂಚಿಬೋಟ್ಲಾ ನಿಧನಕ್ಕೆ ಪ್ರಧಾನ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಬ್ರಹ್ಮ ಕಂಚಿಬೋಟ್ಲಾ ಅವರು ಕೊರೋನಾ ಸೋಂಕಿನಿಂದಾಗಿ ಸೋಮವಾರ ನ್ಯೂಯಾರ್ಕ್ ನಲ್ಲಿ ಕೊನೆಯುಸಿರೆಳೆದರು. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ‘ಭಾರತೀಯ-ಅಮೆರಿಕನ್ ಪತ್ರಕರ್ತ ಬ್ರಹ್ಮ ಕಾಂಚಿಬೋಟ್ಲಾ ಅವರ ನಿಧನದಿಂದ ತೀವ್ರವಾಗಿ ದುಃಖವಾಗಿದೆ. ಅವರ ಉತ್ತಮ ಕೆಲಸ ಮತ್ತು ಭಾರತ ಮತ್ತು ಅಮೆರಿಕವನ್ನು ಹತ್ತಿರಕ್ಕೆ ತರುವ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿದೆ. ಓಂ ಶಾಂತಿ” ಎಂದು ಸಂತಾಪ ಸೂಚಕ ಸಂದೇಶ ರವಾನಿಸಿದ್ದಾರೆ.
ಬ್ರಹ್ಮ ಕಂಚಿಬೋಟ್ಲಾ (66) ನ್ಯೂಯಾರ್ಕ್ ನ ಆಸ್ಪತ್ರೆಯಲ್ಲಿ ಸೋಮವಾರ ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದರು. ಕಳೆದ ವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಕಾಂಚಿಬೋಟ್ಲಾ ಅವರಲ್ಲಿ ಮಾರ್ಚ್ 23 ರಂದು ಕೋವಿಡ್-19 ನ ಸೋಂಕು ದೃಢಪಟ್ಟಿತ್ತು. ದೇಹಸ್ಥಿತಿ ಹದಗೆಟ್ಟ ನಂತರ ಮಾರ್ಚ್ 28 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಾರ್ಚ್ 31 ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಸ್ಟ್ರಿಂಜರ್ ಆಗಿ ಕೆಲಸ ಮಾಡುವುದರ ಜೊತೆಗೆ, ಹಣಕಾಸು ಪ್ರಕಟಣೆಯಾದ ವಿಲೀನ ಮಾರುಕಟ್ಟೆಗಳ ವಿಷಯ ಸಂಪಾದಕರಾಗಿಯೂ ಕಾಂಚಿಬೋಟ್ಲಾ ಕೆಲಸ ಮಾಡಿದ್ದರು. ಅವರು ನ್ಯೂಸ್ ಇಂಡಿಯಾದೊಂದಿಗೂ ಕಾರ್ಯನಿರ್ವಹಿಸಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 