ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರದ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ನಕಾರ


ನವದೆಹಲಿ, ಏ 26 ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರದ ಬಿಡುಗಡೆಗೆ  ಚುನಾವಣಾ ಆಯೋಗ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂಕೋರ್ಟ್  ನಿರಾಕರಿಸಿದೆ.  ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಂತದಲ್ಲಿ ಆಯೋಗದ ಆದೇಶಗಳಲ್ಲಿ ಸುಪ್ರೀಂಕೋಟರ್್ ಮಧ್ಯಪ್ರವೇಶಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂತರ್ಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.  ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಿರುವ ಆಯೋಗದ ತೀರ್ಪನ್ನು ಮಾರ್ಪಾಡು  ಮಾಡಲು ಕೂಡ ಪೀಠ ನಿರಾಕರಿಸಿದೆ.  ಬಾಲಿವುಟ್ ನಟ ವಿವೇಕ್ ಓಬೆರಾಯ್ ನಟನೆಯ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ 'ಪಿಎಂ-ನರೇಂದ್ರ ಮೋದಿ ' ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ವಿಪಕ್ಷಗಳು ಆಯೋಗದ ಮೊರೆ ಹೋಗಿದ್ದವು. ಚಿತ್ರ ವೀಕ್ಷಿಸಿದ್ದ ಆಯೋಗ, ಮೇ 19ರವರೆಗೆ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿತ್ತು.