ಅರಣ್ಯ ನಾಶ ತಡೆಗಟ್ಟಿ : ಹಿರೇಗೌಡರ

ಅರಣ್ಯ ನಾಶ ತಡೆಗಟ್ಟಿ : ಹಿರೇಗೌಡರ Prevent forest destruction: Hire Gowda

ಲೋಕದರ್ಶನ ವರದಿ 

ಪರಿಸರವು ನಮ್ಮ ಜೀವನದ ಆಧಾರವಾಗಿದೆ. ಶುದ್ಧ ಗಾಳಿ, ನೀರು, ಮಣ್ಣು, ಮರಗಳು ಮತ್ತು ಜೀವಜಲಗಳು ನಮ್ಮ ಬದುಕಿಗೆ ಅತ್ಯಗತ್ಯ ಎಂದು ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಹಿರೇಗೌಡರ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಅರಣ್ಯ ನಾಶ, ವಾಯು ಮಾಲಿನ್ಯ,

ಜಲ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗಳಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ಪ್ರಕೃತಿ ಸಮತೋಲನ ಹದಗೆಡುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ, ವಿದ್ಯಾರ್ಥಿಗಳು ಇಂದಿನಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಿದರೆ, ಭವಿಷ್ಯದ ಪೀಳಿಗೆಗೆ ಉತ್ತಮ ಭೂಮಿಯನ್ನು ನೀಡಬಹುದು. ಪರಿಸರವನ್ನು ಕಾಪಾಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ, ನಮ್ಮ ದೈನಂದಿನ ಜೀವನದ ಭಾಗವಾಗಬೇಕು ಎಂದರು. 

ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ ಮಾತನಾಡಿ ಪರಿಸರವನ್ನು ರಕ್ಷಿಸಲು ನಾವು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು. ಹೆಚ್ಚು ಮರಗಳನ್ನು ನೆಡುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರನ್ನು ಮಿತವಾಗಿ ಬಳಸುವುದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು ಕಾರ್ಯಕ್ರಮದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ಶರಣ ನಾವಲಗಿ, ಸಂಗಮೇಶ ಗುಡ್ಡದ, ಚಂದ್ರಶೇಖರ ಜಿಗಜಿನ್ನಿ, ಶಶಿಧರ ಬೆಂಬಳಗಿ, ಶಂಕ್ರ​‍್ಪಯಾದವಾಡ, ರವೀಂದ್ರ ಸಾವಳಗಿಮಠ, ಪ್ರಾಚಾರ್ಯರಾದ ಎಸ್‌.ಆರ್‌.ಮೂಗನೂರಮಠ ಇದ್ದರು.