ವಿಠ್ಠಲ-ರುಕ್ಷ್ಮಿಣಿ ಲಕ್ಷ ದೀಪೋತ್ಸವಕ್ಕೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಚಾಲನೆ
President Yellana Gowda Patil inaugurates the Vitthal-Rukmini Laksha Deepotsava
ಮಹಾಲಿಂಗಪುರ: ನ. 1ರಿಂದ ಜರುಗುತ್ತಿರುವ ಸ್ಥಳೀಯ ಬುದ್ಧಿಪಿಡಿಯ ವಿಠ್ಠಲ-ರುಕ್ಮಿಣಿ ಹರಿನಾಮ ಸಪ್ತಾಹ, ಲಕ್ಷ ದೀಪೋತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮದ ನಾಲ್ಕನೇ ದಿನವಾದ ಮಂಗಳವಾರ ಸಂಜೆ ಸ್ಥಳೀಯ ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಜ್ಯೋತಿ ಬೆಳಗುವುದರೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸದ್ಭಕ್ತರು ಲಕ್ಷ ಜ್ಯೋತಿಗಳನ್ನು ಬೆಳಗಿಸಿದರು.
ಬೆಳಗ್ಗೆಯಿಂದ ಕಾಕಡಾರತಿ, ಮಹಾವಿಷ್ಣುಯಾಗ, ಪ್ರವಚನ, ಭಜನೆ, ಕೀರ್ತನೆ, ಹರಿಪಾಠ, ಮಹಾಪ್ರಸಾದ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು.
ತಾಪಂ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ತಟ್ಟಿಮನಿ, ಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಸ್ಥಳೀಯ ಪುರಸಭಾ ಮುಖ್ಯಾಧಿಕಾರಿ ನಾಮದೇವ ಲಮಾಣಿ, ವಿಜುಗೌಡ ಪಾಟೀಲ, ಹನಮಂತ ಬಡಿಗೇರ, ಪಾಪಾ ನಾಲಬಂದ ಇವರನ್ನು ಗೌರವಿಸಲಾಯಿತು.
ವಿಠ್ಠಲ ರುಕ್ಮಿಣಿ ದೇವಸ್ಥಾನ ಆಡಳಿತ ಮಂಡಳಿಯ ಕೃಷ್ಣಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಮಲ್ಲಪ್ಪ ಅಂಬಣ್ಣಗೋಳ, ರಾಜು ಮುದುಕಪ್ಪಗೋಳ, ಸದಾಶಿವ ಶೇಗುಣಿಸಿ, ಕುಮಾರ ಪವಾರ, ಮೌನೇಶ ದಾದನಟ್ಟಿ, ಶ್ರೀನಿವಾಸ ಪಾಟೀಲ, ಮಹಾಲಿಂಗಗೌಡ ಹೊಸಕೋಟಿ, ವಿಠ್ಠಲಗೌಡ ಪಾಟೀಲ, ಗಿರಿಮಲ್ಲ ಯಾದವಾಡ, ಅರುಣ ವಾಘ್ಮೋರೆ, ಬೇಬವ್ವ ಯಾದವಾಡ ಇತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 