ನವದೆಹಲಿ: ಸುಮಧುರ ಕಂಠದ ಹಿರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ನಿವಾಸಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇದರಿಂದ ಸಂತಸಗೊಂಡಿರುವ ಗಾಯಕಿ, ರಾಷ್ಟ್ರಪತಿಗಳ ಭೇಟಿಯಿಂದ ಅತ್ಯಂತ ಖುಷಿಯಾಗಿದ್ದು, ಅತಿ ದೊಡ್ಡ ಗೌರವ ದೊರೆತಂತಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮಸ್ಕಾರ. ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಮ್ಮ ಮನೆಗೆ ಬಂದು ಭೇಟಿಯಾಗಿರುವುದು ಅತ್ಯಂತ ಸಂತಸ ತಂದಿದೆ. ಇದು ಅತಿ ದೊಡ್ಡ ಗೌರವ. ನೀವು ನಮ್ಮಲ್ಲಿ ಹೆಮ್ಮೆಯ ಭಾವನೆ ತಂದಿದ್ದೀರಿ. ನಿಮಗೆ ನಾನು ಆಭಾರಿ ಎಂದಿದ್ದಾರೆ.
ಲತಾ ಮಂಗೇಶ್ಕರ್ ಅವರು ರಾಷ್ಟ್ರಪತಿಗಳೊಂದಿಗಿನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ