ನವದೆಹಲಿ, ಆಗಸ್ಟ್ 5 ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 35 ಎ ವಿಧಿ ರದ್ಧು ಪಡಿಸುವ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊರಡಿಸಿದ್ದಾರೆ. ಸಂವಿಧಾನದ 370 ಕಲಂ ಸೆಕ್ಷನ್ ಎ ನಡಿ ಪ್ರದತ್ತವಾಗಿರುವ ಅಧಿಕಾರದಡಿ ರಾಷ್ಟ್ರಪತಿ, ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ 1954 ಸಂವಿಧಾನದ ಆದೇಶ 35 ಎ ವಿಧಿಯನ್ನು ರದ್ದುಪಡಿಸಿ ಅಧಿಸೂಚನೆ ಹೊರಡಿಸಿದ್ದಾರೆ. ಇನ್ನೂಮುಂದೆ, ಜಮ್ಮು ಕಾಶ್ಮೀರದ ಸಂವಿಧಾನದ ಸ್ಥಾನದಲ್ಲಿ 2019ರ ಆದೇಶ ಅನ್ವಯವಾಗಲಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಕಲಂ 35 ಎ ರಾಜ್ಯದ ಜನರ ಗುರುತು ಹಾಗೂ ವಿಶೇಷ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ. ಸಂವಿಧಾನದ ವಿಧಿ 370 ಹಾಗೂ 35 "ಎ" ವಿಧಿ ರದ್ಧುಪಡಿಸುವ ನಿರ್ಧಾರವನ್ನು ಇಂದು ಬೆಳಗ್ಗೆ ಪ್ರಧಾನ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು