2020ಕ್ಕೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಅಂತಿಮ ಹಂತದ ಸಿದ್ಧತೆ

ನಾಗರಾಜ ಹರಪನಹಳ್ಳಿ

ಕಾರವಾರ, 16:ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೊದಲ ಬ್ಯಾಚ್ 2020ಕ್ಕೆ ಪದವಿ ಪಡೆದುಕೊಂಡು ಹೊರಬರಲಿದ್ದು, ಮೆಡಿಕಲ್ ಕಾಲೇಜಿನ ಕೊನೆ ವರ್ಷದ ಮಾನ್ಯತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವಿಧಿಸಿದ್ಧ ಶರತ್ತಾದ  450 ಹಾಸಿಗೆಗಳ ನೂತನ ಆಸ್ಪತ್ರೆಯ ನಿಮರ್ಾಣಕ್ಕೆ ನೀಲನಕಾಶೆ ಸಿದ್ಧವಾಗಿದೆ. ಹೊಸ ಆಸ್ಪತ್ರೆಯ  ಕಟ್ಟಡ ನಿಮರ್ಾಣಕ್ಕೆ ಅನುಮತಿ ಪಡೆಯಲು ಅಂತಿಮ ಹಂತದ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆಯುತ್ತಿದೆ. 125 ಕೋಟಿ ರೂ.ಗಳನ್ನು ರಾಜ್ಯ ಸಕರ್ಾರ ಬಜೆಟ್ನಲ್ಲಿ ನೀಡಿದ್ದು, ಹಣಕಾಸು ಇಲಾಖೆ 450 ಹಾಸಿಗೆಯ ಆಸ್ಪತ್ರೆ ನಿಮರ್ಾಣಕ್ಕೆ  ಆಡಳಿತಾತ್ಮಕ ಅನುಮೋದನೆಯನ್ನು ನೀಡಲು ಮುಂದಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಕಾರವಾರ ಜನರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಆಸ್ಪತ್ರೆ ನಿರ್ಮಣದ ಕನಸು ಇದೀಗ ನನಸಾಗುತ್ತಿದೆ. ಜೊತೆಗೆ ಎಂಬಿಬಿಎಸ್ ವಿದ್ಯಾಥರ್ಿಗಳ ಸಂಖ್ಯೆ ಇದೇ ಶೈಕ್ಷಣಿಕ ವರ್ಷ 300 ತಲುಪಲಿದ್ದು, ಪುರುಷ ಮತ್ತು ಮಹಿಳಾ ವಿದ್ಯಾಥರ್ಿಗಳ ಹಾಸ್ಟೆಲ್ನ ಮತ್ತೊಂದು ಮಹಡಿ ನಿಮರ್ಿಸಲು ಸಕರ್ಾರ ಹೆಚ್ಚುವರಿಯಾಗಿ 25 ಕೋಟಿ ರೂ. ಮಂಜೂರಿಮಾಡಿದೆ. ಮಳೆಗಾಲ ಮುಗಿಯುತ್ತಿದ್ದಂತೆ ನೂತನ ಆಸ್ಪತ್ರೆ ಕಟ್ಟಡ ನಿಮರ್ಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. 

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮನಗೆಲ್ಲಲು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಾರವಾರ ಮೆಡಿಕಲ್ ಕಾಲೇಜು ನಿದರ್ೇಶಕರು ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಸಕರ್ಾರದ ಪರವಾಗಿ ಎಂಸಿಎ ಎದುರು ಕಾರವಾರ ಮೆಡಿಕಲ್ ಕಾಲೇಜಿನ ಪ್ರಗತಿ ಮತ್ತು ಸೌಲಭ್ಯಗಳನ್ನು ವಿವರಿಸಿದ್ದಾರೆ. 

ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೂರನೇ ವರ್ಷದಿಂದ ಮೊದಲ ವರ್ಷದತನಕ 450 ವಿದ್ಯಾಥರ್ಿಗಳು ಕಲಿಯುತ್ತಿದ್ದಾರೆ. 7 ಪ್ಯಾರಾ ಮೆಡಿಕಲ್ ಕೋರ್ಸಗಳು ನಡೆಯುತ್ತಿದ್ದು, 140 ವಿದ್ಯಾಥರ್ಿಗಳು ಕಲಿಯುತ್ತಿದ್ದಾರೆ. ಪ್ರತಿ ವರ್ಷ 60 ವಿದ್ಯಾಥರ್ಿನಿಯರು ನಸರ್ಿಂಗ್ ಕಲಿಯುತ್ತಿದ್ದಾರೆ. 2016 ರಿಂದ ನಸರ್ಿಂಗ್ ವಿದ್ಯಾಥರ್ಿಗಳು ಕಲಿತು ಹೊರ ಬರುತ್ತಿದ್ದಾರೆ. 100 ಜನ ವೈದ್ಯರು ಮೆಡಿಕಲ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ ಸಾವಿರ ದಾಟಿದೆ. 300  ಜನ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಎಕ್ಸರೇ, ಬ್ಲಡ್ ಬ್ಯಾಂಕ್, ಪ್ರಯೋಗಾಲಯ, ಟ್ರೋಮೊ ಸೆಂಟರ್(ಮೊದಲ ಹಂತ) ಉನ್ನತೀಕರಣ ಗೊಂಡಿವೆ. ಅಪರೇಶನ್ ಥೇಟರ್ ಸಂಖ್ಯೆ 3 ರಿಂದ 5 ಕ್ಕೆ ಹೆಚ್ಚಿಸಲಾಗಿದೆ. ಔಷಧಿ ಸಂಗ್ರಹ ಉಗ್ರಾಣ ನವೀಕರಣವಾಗಿದೆ.

ಮೆಡಿಕಲ್ ಕಾಲೇಜು ಸ್ಥಾಪನೆಯ ನಂತರ :

ಸ್ಪೆಶಲಿಸ್ಟ್ ತಜ್ಞ ವೈದ್ಯರ ಸೇವೆ ಒದಗಿಸುವ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು 2016 ರಿಂದ ಅನುಷ್ಠಾನಗೊಳಿಸಲಾಗಿದೆ. 7 ವಿಷಯಗಳಲ್ಲಿ ಸೂಪರ್ಸ್ಪೆಶಲಿಸ್ಟ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 4 ವಿಷಯಗಳಲ್ಲಿ ಪಿ.ಜಿ. ಕೋರ್ಸನ್ನು 2018ರಿಂದ  ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ದ್ವಿತಿಯ ಹಂತದ ಟ್ರಾಮಾಕೇಂದ್ರ 

ಸ್ಥಾಪನೆ ಕಾರ್ಯ ಅನುಮೋದನೆಯ ಹಂತದಲ್ಲಿದೆ. 2018 ರಿಂದ ವಿಮಾ ಕಾಮರ್ಿಕರಿಗೆ ತಜ್ಞ ಸೇವೆ ಒದಗಿಸುವ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.2017 ರಿಂದ ರೋಗಿಗಳ ಸಂಬಂಧಿಕರುಗಳಿಗೆ ಸ್ವಯಂ-ಸೇವಾ ಸಂಘದ ಮೂಲಕ ಉಚಿತ ಊಟ ವಿತರಿಸಲಾಗುತ್ತಿದೆ. ಸ್ವಯಂ ದೇಹದಾನ ಮಾಡಲು ಸಹಕಾರ ಸಂಘವನ್ನು ನೋಂದಾಯಿಸಲಾಗಿದೆ ಮತ್ತು  ಮೆಡಿಕಲ್ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಐ.ಎಂ.ಎ. ಘಟಕವನ್ನು ಸ್ಥಾಪಿಸಲಾಗಿದೆ. ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ರೇಡಿಯೋ ಕಾರ್ಯಕ್ರಮದ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಸುಲಭ ಶೌಚಾಲಯ, ಬಸ್ನಿಲ್ದಾಣ ಹಾಗೂ ಹಾಲು ವಿತರಣಾ ಫಟಕಗಳನ್ನು ಸ್ಥಾಪಿಸಲಾಗಿದೆ.  ಸುಸಜ್ಜಿತವಾದ 2 ಅಂಬ್ಯುಲೆನ್ಸ್ಗಳನ್ನು ಖರೀದಿ ಮಾಡಲು ಸಕರ್ಾರದ ಅನುಮತಿ ಕೇಳಲಾಗಿದೆ. 

ಉಚಿತ ಸಿ.ಟಿ. ಸ್ಕ್ಯಾನ್ ಸೇವೆ  ಪ್ರಾರಂಭ:

ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಬಿಪಿಎಲ್ ಸೇರಿದಂತೆ ಎಪಿಎಲ್ ಮತ್ತು ಶ್ರೀಮಂತರಿಗೂ ಸಹ ಉಚಿತವಾಗಿ ಸಿ.ಟಿ.ಸ್ಕ್ಯಾನ್ ಸೌಲಭ್ಯ ದೊರೆತಿದೆ. ಜನರು ತುತರ್ು ಸಂದರ್ಭದಲ್ಲಿ ಸಿ.ಟಿ.ಸ್ಕ್ಯಾನ್ ಸೌಲಭ್ಯ ಪಡೆಯ ಬಹುದಾಗಿದೆ. ಓಪಿಡಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದು ಸಾವಿರ ತಲುಪಿದೆ. ಇದಕ್ಕೆ ತಕ್ಕಂತೆ ವಾರ್ಡ ಸಂಖ್ಯೆ ಹೆಚ್ಚಿದ್ದು, 80 ಕ್ಕೂ ಹೆಚ್ಚು ವೈದ್ಯರು ಪಾಳಿಯ ಮೇಲೆ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ ಮೆಡಿಕಲ್ ಕಾಲೇಜಿನ ಪ್ರಯೋಜನ ನಿಧಾನಕ್ಕೆ ಜನರನ್ನು ತಲುಪತೊಡಗಿದೆ. ಕ್ಯಾನ್ಸರ್ ಆಸ್ಪತ್ರೆ ಘಟಕ ಸ್ಥಾಪನೆಗೆ ಸಕರ್ಾರ ಸಮ್ಮಿತಿಸಿದ್ದು, ಇದಕ್ಕಾಗಿ ಪ್ರತ್ಯೇಕ ವಾರ್ಡಗೆ 5 ಕೋಟಿ ರೂ. ಸಕರ್ಾರ ಬಿಡುಗಡೆ ಮಾಡಿದೆ.