ಜಿಲ್ಲೆಯ ಸಮಗ್ರ ಅಭಿವೃಧ್ದಿಯ ಯೋಜನೆ ತಯಾರಿಸಿ : ಸಚಿವ ಮಂಕಾಳ ವೈದ್ಯ

ಜಿಲ್ಲೆಯ ಸಮಗ್ರ ಅಭಿವೃಧ್ದಿಯ ಯೋಜನೆ ತಯಾರಿಸಿ : ಸಚಿವ ಮಂಕಾಳ ವೈದ್ಯ  Prepare a comprehensive development plan for the district: Minister Mankala Vaidya

               ಕಾರವಾರ 17: ಜಿಲ್ಲೆಯ ಸಮಗ್ರ ಅಭಿವೃಧ್ದಿಯ ಕುರಿತಂತೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳು ಮತ್ತು ಜನತೆಗೆ ಒದಗಿಸಬೇಕಾದ ಸೌಲಭ್ಯಗಳ ಕುರಿತಂತೆ ಸಮಗ್ರವಾದ ವರದಿಯನ್ನು ತಯಾರಿಸುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಸೂಚಿಸಿದರು.  ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಯೋಜನಾ ಸಮಿತಿ ರಚನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   

             ಜಿಲ್ಲೆಯ ಸಮಗ್ರ ಅಭಿವೃಧ್ದಿಗೆ, ಜನತೆಯ ಆಶೋತ್ತರಗಳನ್ನು ಒಳಗೊಂಡ ಯೋಜನೆಗಳನ್ನು ರೂಪಿಸಬೇಕು, ಈ ಯೋಜನೆಯಲ್ಲಿ ಸ್ಥಳೀಯ ಅಂಗನವಾಡಿ, ಶಾಲೆ, ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ಪ್ರಾರಂಭಗೊಂಡು ಅತ್ಯಂತ ಅಗತ್ಯವಿರುವ ದೊಡ್ಡ ಯೋಜನೆಗಳನ್ನೂ ಕೂಡಾ ಸೇರಿಸಬೇಕು. ಈ ಎಲ್ಲಾ ಯೋಜನೆಗಳನ್ನು ಒಳಗೊಂಡ ಇಲಾಖಾವಾರು ಬೇಡಿಕೆಯ ಸಮಗ್ರ ಯೋಜನಾ ವರದಿಯನ್ನು ನವೆಂಬರ್ 25 ರೊಳಗೆ ಸಲ್ಲಿಸುವಂತೆ ಸೂಚಿಸಿದರು.   

            ಯೋಜನೆಯಲ್ಲಿ ಸಾರ್ವಜನಿಕರ ಬೇಡಿಕೆಯನುಸಾರ ಕಾಮಗಾರಿಗಳನ್ನು ಸೇರೆ​‍್ಡ ಮಾಡುವ ಮೂಲಕ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ತಾವು ಮಾಡುವ ಉತ್ತಮ  ಕೆಲಸಗಳಿಂದ ಸಾರ್ವಜನಿಕರು ತಮ್ಮನ್ನು ನೆನೆಸುವಂತಾಗಬೇಕು ಎಂದರು.  

             ಜಿಲ್ಲಾಧಿಕಾರಿ   ಮಾತನಾಡಿ, ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಬೇಡಿಕೆಗಳ ವರದಿಯನ್ನು ನಿಗಧಿತ ಅವಧಿಯೊಳಗೆ ಜಿಲ್ಲಾ ಪಂಚಾಯತ್ಗೆ ಸಲ್ಲಿಸುವಂತೆ ಹಾಗೂ ಯೋಜನೆ ಸಿದ್ದಪಡಿಸುವಲ್ಲಿ ಗೊಂದಲಗಳಿದ್ದಲ್ಲಿ ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು.  

             ಯೋಜನಾ ವರದಿಯನ್ನು ತಯಾರಿಸುವ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳ ಅಭಿಪ್ರಾಯ ಪಡೆದು, ಸಭೆಯಲ್ಲಿ ಚರ್ಚಿಸಿ ವರದಿಯನ್ನು ಸಲ್ಲಿಸಬೇಕು ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ದೀಲೀಷ್ ಶಶಿ ಹೇಳಿದರು.   

           ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್‌ಎಂ.ಎನ್, ಉಪ ವಿಭಾಗಾಧಿಕಾರಿ ಪಿ. ಶ್ರವಣ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಮುಖ್ಯಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.