ನ.30ರ ಒಳಗೆ ಗ್ರಾಮಸಭೆ ಮೂಲಕ ನರೆಗಾ ಕ್ರಿಯಾ ಯೋಜನೆ ಮಾಡಿ: ತಾ.ಪಂ ಇಓ ಭಾರತಿ ಚಲುವಯ್ಯ
Prepare NAREGA action plan through Gram Sabha by November 30
ದೇವರ ಹಿಪ್ಪರಗಿ 24: ನರೆಗಾ ಯೋಜನೆಯು 2026ಹಿ27 ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಸಂಯೋಜನೆಗಾಗಿ ಪ್ರತಿ ಗ್ರಾಮ ಪಂಚಾಯಿತಿಯು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನವೆಂಬರ್ 30ರ ಒಳಗಾಗಿ ನಡೆಸುವುದು ಕಡ್ಡಾಯವಾಗಿದೆ ಎಂದು ದೇವರ ಹಿಪ್ಪರಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಚಲುವಯ್ಯ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಗ್ರಾ.ಪಂ ಕ್ರಿಯಾ ಯೋಜನೆಯ ಹಣವನ್ನು ಸರಿಯಾಗಿ ಬಳಕೆಯಾಗುವಂತೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು ಯೋಜನೆ, ಚೆಕ್ ಡ್ಯಾಂಗಳು, ನಾಲೆ ಕಾಮಗಾರಿಗಳು, ಗ್ರೀನ್ ವಾಲ್ ಯೋಜನೆ, ಬಂಡೆಗಳು, ನೀರು ಸಂಗ್ರಹಣೆ ಸೇರಿದಂತೆ ಪರಿಸರ ಸಂರಕ್ಷಣೆಯ ಯೋಜನೆಗಳಿಗೆ ಆದ್ಯತೆ ನೀಡಬೇಕು ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ನೀರು ಮೂಲಗಳ ಅಭಾವ ಇರುವ ಪ್ರದೇಶಗಳಲ್ಲಿ ಶಾಶ್ವತ ನೀರು ಮೂಲಗಳ ರಚನೆ, ಗ್ರೀನ್ ವಾಲ್ ರೂಪಿಸುವುದು, ಬಂಡೆಗಳು ನಿರ್ಮಾಣ ಮಾಡುವುದು ಹಾಗೂ ಹನಿಗವನಗಳ ರಕ್ಷಣೆ ಮಾಡುವುದು ಮುಖ್ಯ ಗುರಿಯಾಗಿರಬೇಕು.ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆ, ಆದ್ಯತೆ ಹಾಗೂ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ದಾಖಲಿಸಬೇಕು ಎಂದು ತಿಳಿಸಿದ್ದಾರೆ.ನಂತರ ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಮಾತನಾಡಿ,ತಾಲೂಕು ಮಟ್ಟದ ಯೋಜನೆ ಅಡಿಯಲ್ಲಿ ಎಲ್ಲಾ 14 ಗ್ರಾಮ ಪಂಚಾಯಿತಿಗಳಿಂದ ಬಂದ ಸಮಗ್ರ ಯೋಜನೆ ಸಂಗ್ರಹಣೆ ಮಾಡಲಾಗುವುದು. 266 ಬೇಡಿಕೆಗಳನ್ನು “ಕ್ರಿಯೆಗಳು” ಎಂದು ದಾಖಲಿಸಲಾಗುವುದು.ಗ್ರಾಮಸಭೆ ಪ್ರಕ್ರಿಯೆಯಲ್ಲಿ ತಪ್ಪದೇ 100 ದಿನಗಳ ಕೆಲಸ, ಕುಡಿಯುವ ನೀರು, ನಾಲಾ ಕಾಮಗಾರಿಗಳು, ರಸ್ತೆ ಸುಧಾರಣೆ, ಪರಿಸರ ಸಂರಕ್ಷಣೆ ಹಾಗೂ ಗ್ರೀನ್ ವಾಲ್ ನಿರ್ಮಾಣಕ್ಕೆ ಸಂಬಂಧಿಸಿದ ಸಲಹೆಗಳು ಮತ್ತು ಬೇಡಿಕೆಗಳನ್ನು ಗ್ರಾಮಸ್ಥರು ನೀಡಬೇಕು, ಉದ್ಯೋಗ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬಕ್ಕೆ100 ದಿನಗಳ ಕೆಲಸ ನೀಡಬೇಕು ಎಂದು ತಿಳಿಸಿದ್ದಾರೆ.
ಐ.ಇ.ಸಿ ಸಂಯೋಜಕ ಸಿದ್ದು ಕಾಂಬಳೆ ಮಾತನಾಡಿ, ಮನರೇಗಾ ಯೋಜನೆ ಬಗ್ಗೆ ಪ್ರತಿ ಕುಟುಂಬವು ಯೋಜನೆ ಅಡಿಯಲ್ಲಿ ಬಂದು ವರ್ಷದಲ್ಲಿ ನೂರು ದಿನಗಳ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಯಾವ ಕುಟುಂಬವು ವಲಸೆ ಹೋಗದಂತೆ ಜಾಗೃತಿ ಮೂಡಿಸುತ್ತಿದ್ದು ಇದರ ಬಗ್ಗೆ ತಾಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.ಇದೇ ಸಂದರ್ಭದಲ್ಲಿ ತಾ.ಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 