ಲೋಕದರ್ಶನವರದಿ
ಹೊಸಪೇಟೆ28: ನಗರದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜುಲೈ 02ರಂದು ನಡೆಯಲಿರುವ ಪ್ರತಿಜ್ಞಾ ಪದಗ್ರಹಣ ಕಾರ್ಯಕ್ರಮದ ಭಾಗವಾಗಿ ಸಿದ್ದತೆಯ ಬಗ್ಗೆ ಕುರಿತು ಚಚರ್ಿಸಲು ದಿ.27ರಂದು ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತ್ರತ್ವದಲ್ಲಿ ಪ್ರತಿಜ್ಞಾ ದಿನದ ಪೂರ್ವ ಸಿದ್ಧತಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಕೆ.ಪಿ.ಸಿ.ಸಿ.ಯ ಹೊಸಪೇಟೆ ಉಸ್ತುವಾರಿಗಳಾದ ಶ್ರೀ ಅಮ್ಜದ್ ಪಟೇಲ್ ರವರು ಮಾತನಾಡಿ ಜುಲೈ 02 ರಂದು ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ .ಕೆ.ಶಿವಕುಮಾರ್, ಕಾಯರ್ಾಧ್ಯಕ್ಷರುಗಳಾಗಿ ಸಲೀಮ್ ಅಹಮ್ಮದ್, ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆಯವರು ಪದಗ್ರಹಣ ಹೊಂದಲಿದ್ದು, ಇಡೀ ವಿಶ್ವಾದ್ಯಂತ ಕೋವಿಡ್- 19 ವೈರಸ್ ನಂತಹ ರೋಗವಿರುವುದರಿಂದ ಬೃಹತ್ ಜನಸಂಖ್ಯೆಯೊಂದಿಗೆ ಸಮಾರಂಭ ಮಾಡದೇ ಸರಳವಾಗಿ ಬೆಂಗಳೂರಿನಲ್ಲಿ ನಡೆಯುವ ಪದಗ್ರ ಹಣದ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪ್ರತಿ ವಾರ್ಡ, ಗ್ರಾಮ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೇ ನೇರ ಪ್ರಸಾರವಾಗಿ ವಿದ್ಯುನ್ಮಾದ್ಯಮಗಳಲ್ಲಿ ಹಾಗೂ ಜೂಮ್ ವಿಡಿಯೋಗಳ ಮೂಲಕ ಸಮಾರಂಭದಲ್ಲಿ ಭಾಗವಹಿಸಿ ಪಕ್ಷದ ಬಲವರ್ಧನೆಗೆ ಪ್ರತಿಜ್ಞಾ ದಿನವಾಗಿ ಆಚರಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಸಭೆಯನ್ನುದ್ದೇಶಿಸಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಪಕ್ಷದ ನೂತನ ಸಾರಥಿಯಾಗಿ ಡಿ.ಕೆ.ಶಿವಕುಮಾರ್ ರವರು ಪದಗ್ರಹಣ ಹೊಂದಲಿರುವುದನ್ನು ರಾಜ್ಯದಲ್ಲಿ ಏಕ ಕಾಲಕ್ಕೆ 12000 ಸಾವಿರ ಕಡೆ ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಲಿದ್ದಾರೆ, ಹಾಗೂ ಅಧ್ಯಕ್ಷರ ನಾಯಕತ್ವದಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಭದ್ರವಾಗಿ ಸಂಘಟಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಲು ವಿಫಲವಾದ ಸಕರ್ಾರಗಳನ್ನು ಕಿತ್ತೊಗೆದು ಕಾಂಗ್ರೆಸ್ ಸಕರ್ಾರ ರಚಿಸುವ ಹುಮ್ಮಸ್ಸು ಇರುವುದರಿಂದ ನಾವುಗಳು ಪಕ್ಷಕ್ಕೆ ನಿಷ್ಠೆಯಿಂದ ದುಡಿದು ಅವರ ಕೈ ಬಲಪಡಿಸಬೇಕಾಗಿದೆ ದೇಶಕ್ಕಾಗಿ ತ್ಯಾಗ ಬಲಿದಾನ ನೀಡಿದ ಇತಿಹಾಸ ಇರುವ ಈ ಪಕ್ಷಕ್ಕೆ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು ಹಾಗೂ ಪದಗ್ರಹಣ ಕಾರ್ಯಕ್ರಮ ದಿನದಂದು ಕಾರ್ಯಕರ್ತರು ಎಲ್ಲಾ ಕಡೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳ್ಳಿಸುವಂತೆ ಹೇಳಿದರು. ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಗುಜ್ಜಲ್ ನಾಗರಾಜ, ಫಹೀಮ್ನಿಂ ಭಾಷಾ, ನಿಂಬಗಲ್ ರಾಮಕೃಷ್ಣ, ಕೆಪಿಸಿಸಿ ಕಮಲಾಪುರ ಉಸ್ತುವಾರಿ ಕಣೆಕಲ್ ಮಾಬುಸಾಬ್ ಕಮಲಾಪುರ ಬ್ಲಾಕ್ ಅಧ್ಯಕ್ಷ ಸೋಮಪ್ಪ, ವೀರಸ್ವಾಮಿ. ತಮ್ಮಳೆಪ್ಪ, ಸತ್ಯನಾರಾಯಣ, ತೇಜಾನಾಯ್ಕ, ಮಾರೆಣ್ಣ, ಗಣೇಶ, ಜೆ.ಡಿ.ಮಂಜುನಾಥ, ಕಾಳಿದಾಸ್, ಮುನ್ನಿ ಖಾಸಿಂ, ನೂರೂನ್ನಿಸಾ, ಶಾಷಾವಲಿ,ಲಿಯಾಕತ್, ಶ್ರೀನಿವಾಸ, ಬಸವರಾಜ್ , ತಿಮ್ಮಪ್ಪ, ಇತರೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.