ಗುಜನಟ್ಟಿ ಪಿಕೆಪಿಎಸ್‌ಗೆ ಬಂಡ್ರೋಳಿ ಅಧ್ಯಕ್ಷ, ಬ್ಯಾಕೋಡ ಉಪಾಧ್ಯಕ್ಷ
ಮೂಡಲಗಿ 10 : ತಾಲೂಕಿನ ಗುಜನಟ್ಟಿ-ಜೋಕಾನಟ್ಟಿ ಗ್ರಾಮಗಳ ಗುಜನಟ್ಟಿ ವಿವಿಧೋದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ಜರುಗಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬೆಮ್ಯೂಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಅಧ್ಯಕ್ಷರಾಗಿ ಡೊಂಕಪ್ಪ ಸಿದ್ದಪ್ಪ ಬಂಡ್ರೋಳ್ಳಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಚರಾಗಿ ಲಕ್ಕಪ್ಪ ಮಹಾದೇವ ಬ್ಯಾಕೋಡ ಅವರ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾಧಿಕಾರಿಗಳಾಗಿ ಸುರೇಶ ಬಿರಾದಾರಪಾಟೀಲ ಕಾರ್ಯ ನಿರ್ವಹಿಸಿದರು.
ಈ ಸಮಯದಲ್ಲಿ ಪಿಕೆಪಿಎಸ್ ನಿರ್ದೇಶಕರಾದ ಬಸಪ್ಪ ಬಂಡ್ರೋಳ್ಳಿ, ಅಶೋಕ ಗುಮಚನಮರಡಿ, ರುಕ್ಕಮ್ಮ ಕಂಬಳಿ, ಮಹಾದೇವಿ ಮುಸಪ್ಪಗೋಳ, ಜ್ಯೊತೇಪ್ಪ ಪಾಟೀಲ, ಗುರುಪಾದ ಮಾದರ ಹಾಗೂ ಮುಖಂಡರಾದ ತಾ.ಪಂ ಮಾಜಿ ಸದಸ್ಯ ಸಾಬಪ್ಪ ಬಂಡ್ರೋಳ್ಳಿ, ರಂಗಪ್ಪ ಬಂಡ್ರೋಳ್ಳಿ, ಸಿದ್ಧಾರೂಢ ಬಬಲಿ. ಸಿದ್ಧಾರೂಢ ಮುಕ್ಕನ್ನವರ, ಶಿವಪ್ಪ ಕುರಿಬಾಗಿ, ಬಸಪ್ಪ ಬಂಡ್ರೋಳಿ, ಕುಬೇಂದ್ರ ತೆಗ್ಗಿ, ಪರಮಾನಂದ ಬಿದರಿ, ಗುರು ಅಜ್ಜನ್ನವರ, ಬಸು ಮುಸಪ್ಪಗೋಳ, ಸಿದ್ದಪ್ಪ ಮೀಶಿ, ಮಲ್ಲಪ್ಪ ಬಂಡ್ರೋಳ್ಳಿ, ಸಿದ್ಧಲಿಂಗ ಕಂಕಣವಾಡಿ, ಸಿದ್ಧಪ್ಪ ಮೊಕಾಶಿ, ವಿಠ್ಠಲ ಮೊಕಾಶೀ, ಸಿದ್ಧಾರೂಡ ಸನದಿ, ಲಕ್ಕಪ್ಪ ಬಂಡ್ರೋಳ್ಳಿ, ಮುತ್ತಪ್ಪಾ ಅಜ್ಜನ್ನವರ, ನಿಂಗಪ್ಪ ದಂಡಿನವರ, ರಾಜು ಅರಭಾವಿ, ವಿಠ್ಠಲ ಅಗನೆಪ್ಪನವರ, ಲಕ್ಕಪ್ಪ ತೆಗ್ಗಿ, ಬಸವರಾಜ ಬಂಡ್ರೋಳ್ಳಿ, ಕಲ್ಲಪ್ಪ ತುಂಬುಚಿ, ಸುಭಾಸ ಗುಜನಟ್ಟಿ, ಶಂಕರ ಮಾದರ, ಭೀಮಪ್ಪ ಮಾದರ, ರಾಮಪ್ಪ ಬ್ಯಾಕೂಡ, ಲಗಮಪ್ಪ ಮೊಕಾಶಿ, ಲಕ್ಕಪ್ಪ ಮುಸಪ್ಪಗೋಳ, ಲಕ್ಕಪ್ಪ ಬ್ಯಾಕೂಡ, ಅಪ್ಪಯ್ಯ ಬಂಡ್ರೋಳ್ಳಿ, ಲಕ್ಕಪ್ಪ ತುಂಬಚಿ, ಸಿದ್ದಪ್ಪ ತುಂಬಚಿ, ಮಾಯಪ್ಪ ತುಂಬಚಿ, ಭೀಮಪ್ಪ ಆರೇರ, ಗೋಪಾಲ ಪಾಟೀಲ, ಮಾರುತಿ ಬಂಡ್ರೋಳ್ಳಿ, ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಮುಕ್ಕಣ್ಣವರ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರುನ್ನು ಪಿಕೆಪಿಎಸ್ ಸಂಘದಿಂದ ಹಾಗೂ ಬೆಂಬಲಿಗರು ಹೂ ಮಾಲೆ ಹಾಕಿ ಅಭಿನಂದಿಸಿದರು.