ಕೇಂದ್ರ ಬಿಜೆಪಿ ಸರಕಾರದ ಬೆಲೆ ಎರಿಕೆ ಖಂಡಿಸಿ ವಲಯವಾರು ಪ್ರತಿಭಟನೆ ಪೂರ್ವಭಾವಿ ಸಭೆ
Preparatory meeting for zone-wise protests condemning the price hike by the central BJP government
ಗದಗ 19 : ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿನ ಗದಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೇಂದ್ರ ಬಿಜೆಪಿ ಸರಕಾರದ ಬೆಲೆ ಎರಿಕೆ ಖಂಡಿಸಿ ವಲಯವಾರು ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ ನೇತೃತ್ವದಲ್ಲಿ ಏಪ್ರಿಲ್ 22ರಂದು ಸಂಜೆ 5ಕ್ಕೆ ಪೂರ್ವಭಾವಿ ಸಭೆ ಜರುಗಲಿದೆ.
ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಜಿ ಎಸ್ ಪಾಟೀಲ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಶಾಸಕರುಗಳು, ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ, ಗ್ರಾಮ ಪಂಚಾಯತ, ಎಪಿಎಂಸಿ ಪಕ್ಷದ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಗೂ ನಗರಸಭೆ ಪಟ್ಟಣ ಪಂಚಾಯ್ತಿ ಪುರಸಭೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಹಿಂದುಳಿದ ವರ್ಗ, ಸಾಮಾಜಿಕ ಜಾಲತಾಣ, ರಾಜೀವಗಾಂಧಿ ಪಂಚಾಯತ ಸಂಘಟನೆ, ಮಾಜಿ ಸೈನಿಕರ ವಿಭಾಗ, ಮೀನುಗಾರ ವಿಭಾಗ, ಕಾರ್ಮಿಕರ ವಿಭಾಗ, ಐ,ಎನ್,ಟಿ,ಯು,ಸಿ, ಕಾನೂನು ಮತ್ತು ಮಾನವ ಹಕ್ಕು ವಿಭಾಗ, ಕಿಸಾನ್ ಮತ್ತು ಖೆತ್ ಮಜದೂರ ವಿಭಾಗ, ಮಾಜಿ ಸೈನಿಕರ ವಿಭಾಗ, ವೈದ್ಯರ ವಿಭಾಗ, ವೃತ್ತಿಪರ ವಿಭಾಗ, ಪದವಿಧರ ಹಾಗೂ ಶಿಕ್ಷಕರ ವಿಭಾಗ, ನೀತಿ ಮತ್ತು ಸಂಶೋಧನೆ ತರಬೇತಿ ವಿಭಾಗ, ವಿಕಲಚೇತನರ ವಿಭಾಗ, ಲಿಗಲ್ ರೀಪಾರ್ಮ್ಸ್ ವಿಭಾಗ, ಐ,ಟಿ, ಮತ್ತು ಡಾಟಾ ವಿಭಾಗ ಮಾಧ್ಯಮ ಮತ್ತು ಸಂಪರ್ಕ ಇಲಾಖೆ ವಿಭಾಗ, ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಪಕ್ಷದ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು *ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ವಿ ಬಿ ಸೋಮನಕಟ್ಟಿಮಠ ಗದಗ-ಬೆಟಗೇರಿ ಶಹರ ಕಾಂಗ್ರೇಸ್ ಸಮಿತಿ ಅದ್ಯಕ್ಷರಾದ ಬಿ.ಬಿ. ಅಸೂಟಿ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ ಕೆ ಮಂದಾಲಿ ವಿನಂತಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 