ಮಕ್ಕಳ ವಿಜ್ಞಾನ ಹಬ್ಬದ ಪೂರ್ವಬಾವಿ ಸಭೆ

ಮೂಡಲಗಿ 13: ಮಗುವಿನಲ್ಲಿಯ ಸೂಪ್ತ ಪ್ರತಿಬೆಗೆ ಮುಕ್ತ ಅವಕಾಶ ಸಿಗಬೇಕಾದರೆ ಜ್ಞಾನಮಟ್ಟಕ್ಕನುಸಾರ ನಾವಿನ್ಯತೆಯುಳ್ಳ ಕಾರ್ಯಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಸುಲಲಿತವಾಗಿ ಕಲಿಕೆ ಯಶಸ್ಸಿಯಾಗಲು ಸಾಧ್ಯ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯರ್ಾಲಯದಲ್ಲಿ ಜರುಗಿದ ಮಕ್ಕಳ ವಿಜ್ಞಾನ ಹಬ್ಬದ ಪೂರ್ವಬಾವಿ ಸಭೆ ಹಾಗೂ ನಲಿ-ಕಲಿ ಸಮಗ್ರ ತರಭೇತಿ ಕಾಯರ್ಾಗಾರಕ್ಕೆ ಭೇಟಿ ನೀಡಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವು ಒಂದಾಗಿದೆ. 

ಮಕ್ಕಳಿಗೆ ಹೊರ ಪ್ರಪಂಚದ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ವಿಧವಾದ ಕಾರ್ಯ ಯೋಜನೆ ಸರಕಾರ ಹಮ್ಮಿಕೊಂಡಿದೆ. ಮಕ್ಕಳಲ್ಲಿರುವ ಏಕೆ? ಏನು? ಹೇಗೆ? ಎಂಬ ಆಂತರಿಕ ಪ್ರಶ್ನೆಗಳಿಗೆ ಪ್ರಾಯೋಗಿಕವಾಗಿ ಉತ್ತರ ನೀಡುವ ವಿಶೇಷ ಹಬ್ಬದ ರೀತಿಯಲ್ಲಿ ಏರ್ಪಡಿಸಿ ಯಶಸ್ವಿಗೋಳಿಸಬೇಕು. ಕಾರ್ಯಕ್ರಮವು ಮೂಡಲಗಿ ವಲಯ ವ್ಯಾಪ್ತಿಯ ಮೂರು ಸಮೂಹಗಳಲ್ಲಿ ವಿನೂತನ ರೀತಿಯಾಗಿ ಜರಗಿಸ ಬೇಕೆಂದು ಹೇಳಿದರು. 

ಸಿ.ಆರ್.ಪಿ ಮಂಜುನಾಥ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ವಿಜ್ಞಾನ ಹಬ್ಬದ ಕುರಿತು ವಿವರಿಸಿ ಎರಡು ದಿನಗಳ ಕಾರ್ಯಕ್ರಮಗಳು ಅದರ ತಯಾರಿ, ರೂಪ ರೇಷಗಳು, ಚಟುವಟಿಕೆಗಳು, ಸಮುದಾಯ, ಶಿಕ್ಷಕರ, ಶಾಲಾ ಪದಾಧಿಕಾರಿಗಳ,. ಚುನಾಯಿತ ಪ್ರತಿನಿಧಿಗಳ ಪಾತ್ರಗಳ ಕುರಿತು ವಿವರಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯರ್ಾಲಯದಲ್ಲಿ ಜರುಗಿದ ನಲಿಕಲಿ ಸಮಗ್ರ ತರಭೇತಿ, ನಲಿಕಲಿ ಗಣಿತ, ಕನ್ನಡ ವ್ಯಾಕರಣ ತರಭೇತಿ ಕಾಯರ್ಾಗಾರಗಳಿಗೆ ಬಿಇಒ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ ಕೆ.ಎಲ್ ಮೀಶಿ, ಪ್ರಧಾನ ಗುರುಗಳಾದ ಎಸ್.ಐ ಭಾಗೋಜಿ, ಎಮ್ ಮಂಜುನಾಥ, ಆರ್.ಬಿ ಶೆಕ್ಕಿ, ಸಂಪನ್ಮೂಲ ಶಿಕ್ಷಕರಾದ ಎಸ್.ಜಿ ಖೊಂಬಾರೆ, ಬಿ.ಎಸ್ ಬಾಳಪ್ಪಗೋಳ, ದಯಾಪ್ರಕಾಶ, ಆರ್.ಕೆ ಪಾಟೀಲ, ಎಸ್.ಎಮ್ ಮಂಗಿ, ಎಚ್ ಜಿ ದಡ್ಡಿಮನಿ, ಬಿ.ಎ ಪಾಟೀಲ, ಅಜೀತ ಐಹೊಳೆ, ತ್ಯಾರಾ ಮಲ್ಲೇಶ ಎಚ್, ಮಧುಸೂದನ, ಆರ್ ಎಸ್ ಜಾಧವ, ರೂಪಾ ಬಸಳಿಗುಂದಿ, ನಿರ್ಮಲಾ ರಾಮದುರ್ಗ, ರಾಖಿ ಕುಲಗೋಡೆ, ಮಂಜಾನಾಯಿಕ ಪಿ ಹಾಗೂ ಶಿಬಿರಾಥರ್ಿಗಳು ಹಾಜರಿದ್ದರು.