ಹಾರೂಗೇರಿ ಲೀಲಾಮಠದಲ್ಲಿ ಜಾತ್ರೋತ್ಸವಕ್ಕೆ ಸಿದ್ಧತೆ
Preparations for the fair at Harugeri Leelamath
ಹಾರೂಗೇರಿ, 24 : ಇಲ್ಲಿನ ಆರಾಧ್ಯ ದೈವ ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ಫೆ.9 ರಿಂದ 17ರವರೆಗೆ ನಡೆಯಲಿರುವ 100ನೇ ವರ್ಷದ ಮಹಾಶಿವರಾತ್ರಿ ಸಪ್ತಾಹ (ಓಂ ನಮಃ ಶಿವಾಯ) ತಾರಕ ಮಂತ್ರದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲೀಲಾಮಠದ ಸದ್ಭಕ್ತ ಮಂಡಳಿ ಭರದ ಸಿದ್ಧತೆ ಕೈಗೊಂಡಿದೆ.
ದೇಗುಲದ ಗೋಪುರ, ಮಹಾದ್ವಾರಗಳಿಗೆ ಅಲಂಕಾರಿಕ ಬಣ್ಣ, ಮಠದ ಆವರಣದಲ್ಲಿ ಇನ್ನೀತರ ಸಿದ್ಧತೆ ಕಾರ್ಯಗಳು ಚುರುಕುಗೊಂಡಿವೆ. ಇಂಚಲ ಶ್ರೀ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗುವ ಫೆ.9 ಮತ್ತು 10 ರಂದು ಶತಮಾನೋತ್ಸವ ಕಾರ್ಯಕ್ರಮಕ್ಕೆ ದೇಶದ ನಾನಾ ಭಾಗಗಳಿಂದ ನೂರಾರು ಸ್ವಾಮೀಜಿಗಳಿಂದ 2 ದಿನ ವೇದಾಂತ ವೇದಿಕೆಯಲ್ಲಿ ಪ್ರವಚನ, ಪಶ್ಚಿಮ ದಿಕ್ಕಿನಲ್ಲಿ ನಿರ್ಮಾಣಗೊಂಡ ಬೃಹತ್ ಮಹಾದ್ವಾರದ ಉದ್ಘಾಟನೆ, 1001 ಸುಮಂಗಲೆಯರಿಂದ ಕುಂಭೋತ್ಸವ ಸೇರಿದಂತೆ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶುಕ್ರವಾರ ಶ್ರೀ ಚನ್ನವೃಷಭೇಂದ್ರ ಲೀಲಾಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಸಿದ್ಧತೆ ಕುರಿತು ಮಾತನಾಡುತ್ತ ಭಕ್ತರ ಇಷ್ಟಾರ್ಥ ಸಿದ್ಧಿಸುವ ಪುಣ್ಯಕ್ಷೇತ್ರ ಹಾರೂಗೇರಿ ಲೀಲಾಮಠವು 1926 ರಂದು ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಪ್ರಾರಂಭಿಸಿದ ಮಹಾಶಿವರಾತ್ರಿ ಓಂ ನಮಃ ಶಿವಾಯ ಸಪ್ತಾಹಕ್ಕೆ 100 ವರ್ಷ ತುಂಬಲಿದೆ. ಜತೆಗೆ ದೇವರಕೊಂಡಜ್ಜನವರು ಹೊತ್ತಿಸಿದ ಅಗ್ನಿಕುಂಡವೂ ನೂರು ವರ್ಷ ಪೂರೈಸಲಿದ್ದು, ನಾನಾ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ನೇಮಣ್ಣ ಕೊತ್ತಲಗಿ, ರಾಜು ಕರ್ಣವಾಡಿ, ವಿಠ್ಠಲ ಬಂತಿ, ಬಾಬು ಪರಮಗೌಡರ, ಲಾಲಸಾಬ ಜಮಾದಾರ, ಶ್ರೀಶೈಲಗೌಡ ಉಮರಾಣಿ, ಸಿದ್ದಪ್ಪ ಗವಣ್ಣವರ, ಮಹಾದೇವ ಲುಡುಬುಡೆ, ಚಂದ್ರಶೇಖರ ಉಮರಾಣಿ, ಲಕ್ಷ್ಮಣ ಮೊಕಾಸಿ, ಸತ್ಯೆಪ್ಪ ಚೌಗಲಾ, ದತ್ತಾ ಮುನಸೆ, ಬಿ.ಎ.ಶಿವಾಪೂರ, ಅಪ್ಪಾಸಾಬ ಹಿಡಕಲ್ಲ, ಸುರೇಶ ಠಕ್ಕಣ್ಣವರ, ಅಣ್ಣಪ್ಪ ಹಿಡಕಲ್ಲ ಮತ್ತೀತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 