ಬೆಟಗೇರಿಯಲ್ಲಿ 30ನೇ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ

ಬೆಟಗೇರಿಯಲ್ಲಿ 30ನೇ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ  Preparations for 30th birthday celebration in Betageri

ಲೋಕದರ್ಶನ ವರದಿ  

ಬೆಟಗೇರಿ, ಆ. 23: ಗದಗ ಜಿಲ್ಲೆ ಅಸ್ತಿತ್ವಕ್ಕೆ ಬಂದು 29 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, 30ನೇ ಹುಟ್ಟುಹಬ್ಬವನ್ನು ಸೋಮವಾರ (ಆ. 24) ಆಚರಿಸಲು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ನಿರ್ಧರಿಸಿದೆ.  ಬೆಟಗೇರಿ ಕೆ.ಸಿ. ಪಾರ್ಕ್ನಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ 30ನೇ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಮನವಿ ಮಾಡಿದ್ದಾರೆ.