ಇಂದಿನಿಂದ ಆರಂಭ ಜಗದ್ಗುರು ಫಕ್ಕೀರೇಶ್ವರ ಮಠದ 2026ರ ಜಾತ್ರೆ ಮಹೋತ್ಸವದ ಸಿದ್ಧತೆಗಳು ಹಾಗೂ ವಿವಿಧ ಆಚರಣೆಗಳು
Preparations and various celebrations for the 2026 fair and festival of Jagadguru Fakireshwar Mutt b
ಶಿರಹಟ್ಟಿ: ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಯ ಪುಣ್ಯಕ್ಷೇತ್ರವಾಗಿರುವ ಶಿರಹಟ್ಟಿಯ ಶ್ರೀ ಜಗದ್ಗುರು ಫಕೀರೇಶ್ವರ ಮಠದ 2026 ನೇ ಸಾಲಿನ ಜಾತ್ರಾ ಮಹೋತ್ಸವವು ಏಪ್ರಿಲ್ 17 ರಿಂದ ಅದ್ಧೂರಿಯಾಗಿ ಚಾಲನೆ ಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ವೈವಿಧ್ಯಮಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಿಂಗಳ ಪರ್ಯಂತ ಶ್ರೀ ಮಠದಲ್ಲಿ ಸಂಭ್ರಮ ಮನೆಮಾಡರಲಿದೆ.
ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟಗಳು ಜಾತ್ರೆಯ ಸಂಭ್ರಮವು ಏಪ್ರಿಲ್ 17ರ ಅಕ್ಷತ್ತದಗಿ ಅಮವಾಸೆಯಂದು ’ತೇರಿನಗಡ್ಡಿ ಹೊರಹಾಕುವ’ ಶಾಸ್ತ್ರದೊಂದಿಗೆ ಆರಂಭವಾಗಿದೆ. ನಂತರ ಹರಿಪುರ ಯಾತ್ರೆ ಮತ್ತು ಕಳಸಾರೋಹಣ: ಏಪ್ರಿಲ್ 22 ರಂದು ಶ್ರೀ ಜಗದ್ಗುರುಗಳು ಮೆರವಣಿಗೆಯ ಮೂಲಕ ಹರಿಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದು ಸಾಯಂಕಾಲ 5:00 ಗಂಟೆಗೆ ಅದ್ಧೂರಿಯಾಗಿ ತೇರಿನ ಕಳಸಾರೋಹಣ ನೆಡೇಯಲಿದೆ.
ಲಕ್ಷ್ಮೇಶ್ವರ ಹಾಗೂ ವಿವಿಧ ಗ್ರಾಮಗಳ ಭಿಕ್ಷೆ: ಏಪ್ರಿಲ್ 27 ರಂದು ಲಕ್ಷ್ಮೇಶ್ವರ ನಗರದಲ್ಲಿ ಭಿಕ್ಷಾ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 28 ರಂದು ಕೋಳಿವಾಡ ಗ್ರಾಮದ ದ್ಯಾಮವ್ವ ದೇವಿಗೆ ಉಡಿ ತುಂಬುವ ವಿಶೇಷ ಧಾರ್ಮಿಕದ ವಿಧಿವಿಧಾನ ನೆಡೆಯಲಿದೆ. ನಂತರದ ದಿನಗಳಲ್ಲಿ ಖಾನಾಪುರ ಹಾಗೂ ಹರಿಪುರಗಳಲ್ಲಿ ಭಿಕ್ಷಾ ಕಾರ್ಯಕ್ರಮಗಳು ನಡೆಯುತ್ತವೆ. ಮಹಾ ರಥೋತ್ಸವದ ಸಂಭ್ರಮ ಆಗಿ ಹುಣ್ಣಿಮೆಯ ದಿನವಾದ ಮೇ 01, ಶುಕ್ರವಾರ ಜಾತ್ರೆಯ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ, ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಗಳು ಹರಿಪುರದಿಂದ ಶಿರಹಟ್ಟಿಗೆ ಪುರ ಪ್ರವೇಶ ಮಾಡಿ, ಉಚ್ಚಾಯ ಎಳೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಾಯಂಕಾಲ 5:00 ಗಂಟೆಗೆ ಭಕ್ತಸಾಗರದ ನಡುವೆ ಭವ್ಯ ರಥೋತ್ಸವ ನೆರವೇರಲಿದ್ದು, ನಂತರ ಧರ್ಮಸಭೆ ಜರುಗಲಿದೆ.
ಮೇ 02: ಬೆಳಿಗ್ಗೆ ಗುಡಾರ ಬಿನ್ನಾಯ ಹಾಗೂ ಸಾಯಂಕಾಲ 5:00 ಗಂಟೆಗೆ ರೋಚಕ ’ಕಡುಬಿನ ಕಾಳಗ’ ಮತ್ತು ಧರ್ಮಸಭೆ ನಡೆಯಲಿದೆ. ಮೇ 03: ಸಂಗೀತ ಪ್ರೇಮಿಗಳಿಗಾಗಿ ಮುಂಜಾನೆ 10:00 ಗಂಟೆಯಿಂದ ಭವ್ಯ ಸಂಗೀತ ಕಚೇರಿ ಆಯೋಜಿಸಲಾಗಿದೆ. ಮೇ 06 (ಗಣಾರಾಧನೆ ಮತ್ತು ಫಕೀರ ವೇಷ): ಈ ದಿನದ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ರಾತ್ರಿ 9:15 ಕ್ಕೆ ಜಗದ್ಗುರುಗಳು ಫಕೀರರ ವೇಷದಲ್ಲಿ ನಗಾರಿ ಖಾನಿಗೆ ದಯಮಾಡಿಸಿ, ಊದು ಹಾಕಿ, ಕುರಾನ್ ಪಠಣ ಮಾಡಿಸುವ ಮೂಲಕ ಸೌಹಾರ್ದತೆಯ ಸಂದೇಶ ಸಾರಲಿದ್ದಾರೆ. ಈ ಮಹಾ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನೀರೀಕ್ಷೆಯಿದ್ದು, ಮಠದ ವತಿಯಿಂದ ಪ್ರಸಾದ ಹಾಗೂ ವಸತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 