ಗುಣಮಟ್ಟದ ವಸ್ತು ಖರೀದಿಗೆ ಆದ್ಯತೆ ನೀಡಿ: ದುರಗೇಶ

ಹಾವೇರಿ01:ಜಾಹೀರಾತುಗಳನ್ನು ನಂಬದೇ ಗುಣಮಟ್ಟದ ವಸ್ತುಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಸುನಂದಾ ದುರಗೇಶ ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತುಗ್ರಾಹಕರ ವ್ಯವಹಾರಗಳ ಇಲಾಖೆ ಹಾವೇರಿ, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇಧಿಕೆ ಹಾವೇರಿ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾವೇರಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಗ್ರಾಹಕ ಮಾಹಿತಿ ಕೇಂದ್ರ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ಜಾನುವಾರು ಮಾರುಕಟ್ಟೆಯಲ್ಲಿ ಆಯೋಜಿಸಲಾಗಿದ್ದ  "ಗ್ರಾಹಕ ಹಕ್ಕು ಕಾಯ್ದೆ ಹಾಗೂ ಆನ್ಲೈನ್ ವಂಚನೆ ಮತ್ತು ಜಾಹೀರಾತಿನಿಂದಾಗುವ ದುಷ್ಪರಿಣಾಮಗಳ ಕುರಿತ ಬೀದಿ ನಾಟಕ" ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕ  ಆಥರ್ಿಕ ವ್ಯವಹಾರದ ಈ ಸನ್ನಿವೇಶದಲ್ಲಿ ವಸ್ತುವಿನ ಗುಣಮಟ್ಟಕ್ಕಿಂತ ಅಬ್ಬರದ ಪ್ರಚಾರ, ವಸ್ತುಗಳನ್ನು ಖರೀದಿಸಲು ಪ್ರಚೋದಿಸಲಾಗುತ್ತಿದೆ. ಗ್ರಾಹಕನು ತನಗೆ ಬೇಕಾದ ವಸ್ತುಗಳನ್ನು ಪಡೆಯುವುದಕ್ಕೂ ಮುನ್ನ ಆ ವಸ್ತುವಿನ ಬೆಲೆ ಹಾಗೂ ಗುಣಮಟ್ಟ ಪರಿಶೀಲಿಸಿ ಖರೀದಿಸಬೇಕು ಹಾಗೂ ಜಾಹಿರಾತುಗಳಿಗೆ ಮಾರು ಹೋಗಬಾರದು ಎಂದು  ಎಚ್ಚರಿಸಿದರು.

ಗ್ರಾಹಕರ ಹಿತರಕ್ಷಣಾ ಕಾಯ್ದೆ ಅನ್ವಯ "ಅಪಾಯವನ್ನುಂಟು ಮಾಡುವ ಸರಕುಗಳ ವಿರುದ್ಧ ರಕ್ಷಣೆ ಪಡೆಯುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಶೋಷಣೆಗೆ ಒಳಪಡುವುದರ ವಿರುದ್ಧ ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣ ಪಡೆಯುವ ಹಕ್ಕು"ಗಳನ್ನು  ಗ್ರಾಹಕರಿಗೆ ನೀಡಲಾಗಿದೆ. ಈ ಹಕ್ಕುಗಳನ್ನು ಎಲ್ಲ ಸಾರ್ವಜನಿಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

       ವಸ್ತುಗಳ ಗುಣಮಟ್ಟ ಹಾಗೂ ಸೇವೆಯ ನ್ಯೂನ್ಯತೆ ಕುರಿತಂತೆ ಗ್ರಾಹಕರು ತಮಗಾದ ನಷ್ಟದ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರೆ ನ್ಯಾಯ ದೊರಕಿಸಿಕೊಡಲಾಗುವುದು. 

  ಯಾವುದೇ ಶುಲ್ಕ ಇಲ್ಲದೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಆದರೆ ತಾವು ಖರೀದಿಸಿದ ಪ್ರತಿ ವಸ್ತುವಿಗೂ ಕಡ್ಡಾಯವಾಗಿ ರಶೀದಿ ಪಡೆಯಬೇಕು. ಒಂದೊಮ್ಮೆ ವಂಚನೆಯಾದರೆ ಈ ರಶೀದಿಯೊಂದಿಗೆ ದೂರು ದಾಖಲಿಸುವಂತೆ ಮನವಿ ಮಾಡಿಕೊಂಡರು. ಮುಖ್ಯ ಅತಿಥಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಹೆಚ್.ಮಜೀದ್  ಭಾಗವಹಿಸಿದ್ದರು.

    ಸಾರಥ್ಯ ಕಲಾತಂಡದ ಕೆ.ಆರ್.ಹಿರೇಮಠ ಅವರ ನಿದರ್ೆಶನದಲ್ಲಿ  ನಗರದ ಜಾನುವಾರು ಮಾರುಕಟ್ಟೆ ಮತ್ತು ಎಂ.ಎಂ.ಸರ್ಕಲ್ನಲ್ಲಿಗ್ರಾಹಕರೇಎಚ್ಚರ"ಬೀದಿನಾಟಕ ಪ್ರದಶರ್ಿಸಲಾಯಿತು.