ಬಾಗಲಕೋಟೆ 14: ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಾದಂತೆ ಕ್ರಮಕೈಗೊಂಡು ಪ್ರಥಮ ಆದ್ಯತೆ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ತುಷಾರ ಗಿರಿನಾಥ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಬರ ನಿರ್ವಹಣಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ತೀವ್ರ ತೊಂದರೆಯಾದಲ್ಲಿ ಟ್ಯಾಂಕರ್ ಮೂಲಕ ನೀರುವ ಪೂರೈಸುವ ಕೆಲಸವಾಗಬೇಕು. ಕುಡಿಯುವ ನೀರಿಗಾರಿ ಕೈಗೊಂಡ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಐಹೊಳೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತು ಕಳೆದ ಸಭೆಯಲ್ಲಿ ನೀಡಿದ ನಿದರ್ೇಶನದಂತೆ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂನಿಂದ ದೃಢೀಕರಣ ಪಡೆದು ಟ್ರೈಲ್ ರನ್ ಮಾಡಲಾಗಿದೆ. ಸೂಳೇಬಾವಿ, ಐಹೊಳೆ, ಕಳ್ಳಿಗುಡ್ಡ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಉಳಿದ 11 ಗ್ರಾಮಗಳಿಗೆ ಟ್ರೈಯಲ್ ರನ್ ಮಾಡಲು ಜಮೀನಿನಲ್ಲಿ ಬೆಳೆ ಇರುವದರಿಂದ ಅವಕಾಶ ನೀಡದಿರುವದರಿಂದ ಆ ಗ್ರಾಮಗಳಿಗೆ ಜನವರಿ ಅಂತ್ಯಕ್ಕೆ ನೀರು ಸರಬರಾಜು ಮಾಡಲಾಗುವುದೆಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸಭೆಗೆ ತಿಳಿಸಿದರು. ಪ್ರಸಕ್ತ ಸಾಲಿನ ಹಿಂಗಾರು, ಬೇಸಿಗೆ ಹಂಗಾಮಿಗೆ ಬೆಳೆ ಹಾನಿಯಾದ ಕ್ಷೇತ್ರಕ್ಕೆ ಆದ್ಯತೆ ನೀಡಿ 4 ಲಕ್ಷ ಹೆಕ್ಟೇರ್ ವರೆಗೆ ಪಯರ್ಾಯ ಬೆಳೆ ಯೋಜನೆ ಕಾರ್ಯಕ್ರಮ ರೂಪಿಸಿದಿ ಅದಕ್ಕೆ ಬೇಕಾಗುವ ಕೃಷಿ ಪರಿಕರಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಯರ್ಾಯ ಬೆಳೆ ಯೋಜನೆ ಪ್ರಕಾರ ಇದುವರೆಗೆ ಗ್ರಾಮವಾರು ಬಿತ್ತನೆಯಾದ ಮತ್ತು ಬಿತ್ತನೆಯಾಗದೇ ಉಳಿದ ಕ್ಷೇತ್ರ ಹಾಗೂ ಇನ್ನೂ ಬಿತ್ತನೆಯಾಗಬಹುದಾದ ಬೆಳೆಗಳವಾರು ಕ್ಷೇತ್ರದ ಮಾಹಿತಿಯನ್ನು ಜಿ.ಪಂ ಸಿಇಓ ಅವರಿಗೆ ಸಲ್ಲಿಸಲಾಗಿದೆ ಎಂದು ಕೃಷಿ ಜಂಟಿ ನಿದರ್ೇಶಕರು ಸಭೆಗೆ ತಿಳಿಸಿದರು.
ಬೆಳೆ ಹಾನಿ ಪ್ರದೇಶಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗುರಿ ಮಾರ್ಪಡಿಸಿ ಹೆಚ್ಚುವರಿ ಕ್ರೀಯಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿ.ಪಂ ಸಿಇಓ ತಿಳಿಸಿದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಬೆಳೆ ಕಟಾವಿನ 3222 ಪ್ರಯೋಗಗಳ ಪೈಕಿ 2950 ಪ್ರಯೋಗಗಳ ಪೂರ್ಣಗೊಂಡಿವೆ. ಆದರೆ ರೈತರು ಮೂಲ ಕಾರ್ಯಕರ್ತರಿಗೆ ತಿಳಿಸದೇ ಕಟಾವು ಮಾಡಿರುವದರಿಂದ ಇದುವರೆಗೆ 38 ಕಟಾವು ಪ್ರಯೋಗಗಳು ನಷ್ಟವಾಗಿರುತ್ತವೆ ಎಂದು ಸಭೆಗೆ ತಿಳಿಸಲಾಯಿತು.
ಮುಂಗಾರು ಬೆಳೆ ನಷ್ಟದ ಹಿನ್ನಲೆಯಲ್ಲಿ ಜಿಲ್ಲೆಯ 5.14 ಲಕ್ಷ ಜಾನುವಾರುಗಳಿಗೆ ಸದ್ಯ 3.64 ಲಕ್ಷ ಮೆ.ಟನ್ ಮೇವು ಲಭ್ಯವಿದ್ದು, ಮುಂದಿನ 4 ರಿಂದ 5 ತಿಂಗಳ ವರೆಗೆ ಸಾಕಾಗಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಆಯುಕ್ತಾಲಯದಿಂದ ಸರಬರಾಜು ಮಾಡಲಾದ 19717 ಮೇವಿನ ಮಿನಿ ಕಿಟ್ಗಳನ್ನು ನೀರಾವರಿ ಹೊಂದಿದ ರೈತರಿಗೆ ಪೂರೈಸಲಾಗಿದೆ ಎಂದು ಪಶು ಇಲಾಖೆಯ ಉಪನಿದರ್ೇಶಕರು ಸಭೆಗೆ ತಿಳಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಂಡು ನಿಖರವಾದ ಅಂಕಿ ಅಂಶವನ್ನು ಪ್ರತಿ ಶಾಲೆಯಿಂದ ಪಡೆದು ಮುಖ್ಯ ವಾಹಿನಿಗೆ ತರಲು ಕಳೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಸೂಚಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹೊರಗುಳಿದ 1316 ಮಕ್ಕಳು ಹೊರಗುಳಿದ ಬಗ್ಗೆ ರಾಜ್ಯ ಕಚೇರಿಯಿಂದ ಆದೇಶ ನೀಡಲಾಗಿತ್ತು. ಅದರಂತೆ ಮನೆ ಮನೆ ಸಮೀಕ್ಷೆ ನಡೆಸಿ 1254 ಮಕ್ಕಳನ್ನು ಗುರುತಿಸಲಾಗಿದ್ದು, ಆ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಪರಿಹಾರ ಬೋಧನೆಗೆ 32443 ಮಕ್ಕಳನ್ನು ಗುರುತಿಸಲಾಗಿದೆ. ಎಲ್ಲ ತಾಲೂಕುಗಳಲ್ಲಿ ಬಿಆರ್ಸಿ, ಸಿಆರ್ಪಿ ಹಾಗೂ ಬಿಆರ್ಪಿ ಯವರು ಶಾಲೆಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆಂದು ಡಿಡಿಪಿಐ ಸಭೆಗೆ ತಿಳಿಸಿದರು.
ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳಿಗೆ ಒಂದೇ ರೀತಿಯ ಆಹಾರದ ಮೆನ್ಯೂ ಚಾರ್ಟ ಮತ್ತು ಡೈಯಟ್ ಚಾರ್ಟ ಅಳವಡಿಸಬೇಕು. ಉತ್ತಮವಾದ ಗುಣಮಟ್ಟದ ಆಹಾರ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಲು ತಿಳಿಸಲಾಯಿತು. ಅಲ್ಲದೇ ಕಳೆಸ ಸಭೆಯಲ್ಲಿ ನಿದರ್ೇಶಿಸಲಾದ ವಿಷಯಗಳ ಕುರಿತು ಪರಿಶೀಲನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹಾಗೂ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅವರು ಅನುಪಾಲನಾ ವರದಿಯನ್ನು ತಪ್ಪದೇ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಕೃಷಿ ಜಂಟಿ ನಿದರ್ೇಶಕ ರಾಜಶೇಖರ ಬಿಜಾಪೂರ, ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶಲೈ ಕಂಕಣವಾಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಜಗದೀಶ ಹೆಬ್ಬಳ್ಳಿ, ಅಲ್ಪಸಂಖ್ಯಾತರ ಇಲಾಖೆಯ ಉಪನಿದರ್ೇಶಕ ಎಂ.ಎನ್.ಮೇಲಿನಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.