ಲೋಕದರ್ಶನ ವರದಿ
ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯವು ಪೂರ್ಣಗೊಂಡಿದ್ದು. ಭತ್ತವು ಈಗ ಸರಿಸುಮಾರು 45 ರಿಂದ 60ದಿನದ ಬೆಳವಣಿಗೆ ಹಂತದಲ್ಲಿದೆ. ಈ ಹಂತದಲ್ಲಿ ಭತ್ತಕ್ಕೆ ಸಾಮಾನ್ಯವಾಗಿ ದುಂಡಾಣು ಅಂಗಮಾರಿರೋಗ ಮತ್ತು ಕಂದುಜಿಗಿ ಹುಳವು ಕಂಡುಬರುವುದರಿಂದ ರೈತರು ಹತೋಟಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ದುಂಡಾಣು ಅಂಗಮಾರಿ ರೋಗವು ಸಾಮಾನ್ಯವಾಗಿ ಭತ್ತದ ಎಲೆಗಳ ಅಂಚು ಮತ್ತು ತುದಿಗಳಲ್ಲಿ ಕಂಡುಬರುತ್ತದೆ. ಮೊದಲು ರೋಗವು ಹಳದಿ ಬಣ್ಣದ ಮಚ್ಚೆಯಂತೆ ಅಲೆಯಾಕಾರದ ಅಂಚಿನಿಂದ ಕೂಡಿದ್ದು ನಂತರ ಎಲೆಯ ತುದಿಯಿಂದ ಎಲೆಯ ಬುಡದ ಕಡೆಗೆ ಪಸರಿಸುತ್ತದೆ. ಕೊನೆಗೆ ಎಲೆಯು ಸಂಪೂರ್ಣವಾಗಿ ಒಣಗಿ ಬೆಳೆಯು ನಾಶವಾಗುತ್ತದೆ.ವಾತಾವರಣವು ಮೊಡದಿಂದಕೂಡಿದ್ದರೆ ಈ ರೋಗದ ತೀವ್ರತೆ ಜಾಸ್ತಿಯಾಗಿ ತುಂಬ ಬೇಗವಾಗಿ ಗದ್ದೆಯಿಂದಗದ್ದೆಗೆ ಹಳ್ಳಿಯಿಂದ ಹಳ್ಳಿಗೆ ಹರಡುತ್ತದೆ.
ಹತೋಟಿ ಕ್ರಮಗಳು: ದುಂಡಾಣುರೋಗದ ನಿರ್ವಹಣೆಗಾಗಿರೋಗದ ಲಕ್ಷಣಕಂಡತಕ್ಷಣ 0.05 ಗ್ರಾಂ. ಸ್ಟ್ರೇಪ್ಟೋಸೈಕ್ಲಿನ್ ಮತ್ತು 0.05 ಗ್ರಾಂ.ಮೈಲುತುತ್ತೆ (ಸಿಒಸಿ) ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಪ್ರತಿಎಕರೆ ಸುಮಾರು 250 ಲೀ.ಸಿಂಪರಣಾ ದ್ರಾವಣವನ್ನು ಬಳಸಬೇಕು.
ಕಂದುಜಿಗಿ ಹುಳವು ಕಂಡು ಬಂದಲ್ಲಿ ಈ ಕೆಳಗಿನ ಹಾನಿಯ ಲಕ್ಷಣಗಳನ್ನು ಕಾಣಬಹುದು :ಫ್ರೌಡ ಮತ್ತು ಮರಿ ಹುಳುಗಳು ಕಾಂಡವನ್ನು ನೀರಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಆವರಿಸಿ ರಸವನ್ನು ಹೀರುವುದರಿಂದಪೈರಿನ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಸುಟ್ಟಂತೆ ಕಾಣುತ್ತವೆ. ಈ ಕೀಟದ ಬಾಧೆಯಿಂದಒಂದು ವಾರದಲ್ಲಿ ಇಡಿ ಬೆಳೆಯೇ ನಾಶವಾಗುತ್ತದೆ. ಇದರ ಬಾಧೆಯುತೆನೆ ಬರುವ ಸಮಯದಲ್ಲಿ ತೀವ್ರವಾಗಿ ಕಂಡುಬರುತ್ತವೆ. ಈ ಹಾನಿಯ ಲಕ್ಷಣಕ್ಕೆಜಿಗಿ ಹುಳುವಿನ ಸುಡುಎನ್ನುತ್ತಾರೆ.ಇದರ ಬಾಧೆಯು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕೀಟದ ನಿರ್ವಹಣೆಗಾಗಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಸಾರಜನಕಯುಕ್ತ ಗೊಬ್ಬರಗಳನ್ನು ಬಳಸಬೇಕು. ವಾರಕ್ಕೊಮ್ಮೆ ಗಿಡಗಳ ಬುಡದಲ್ಲಿ ಈ ಕೀಟದಇರುವಿಕೆಯನ್ನು ಗಮನಿಸಬೇಕು.ಪ್ರೈರಿಥ್ರೈಡ್ ಗುಂಪಿಗೆ ಸೇರಿದ ಕೀಟನಾಶಕಗಳನ್ನು ಪದೇ ಪದೇ ಬಳಸಬಾರದು. ಪರೋಪಕಾರಿ ಕೀಟಗಳಾದ ಮಿರಿಡ್ತಿಗಣೆ, ಜೇಡಗಳ ಸಂಖ್ಯೆ ಜಾಸ್ತಿಯಿದ್ದಾಗ ಕೀಟನಾಶಕಗಳನ್ನು ಬಳಸಬಾರದು. ಸರದಿ ಪ್ರಕಾರ ನೀರು ಹಾಯಿಸುವುದು ಮತ್ತು ಗದ್ದೆಯನ್ನು ಒಣಗಿಸುವುದನ್ನು ಮಾಡಬೇಕು. ಅವಶ್ಯಕತೆ ಗಣುಗುಣವಾಗಿ ಶೇ.5ರ ಬೇವಿನ ಕಷಾಯವನ್ನು ಪಯರ್ಾಯ ಸಿಂಪರಣೆಯಾಗಿ ಸಿಂಪಡಿಸಬೇಕು.ರಸಾಯನಿಕ ಕೀಟಗಳ ಸಂಖ್ಯೆ ಜಾಸ್ತಿಯಿದ್ದಲ್ಲಿ ರಸಾಯನಿಕ ಕೀಟನಾಶಕಗಳಾದ ಬ್ರುಪ್ರೋಫೆಜಿನ್ 25 ಎಸ್.ಸಿ. 1ಮಿ. ಅಥವಾ ಇಮಿಡಾಕ್ಲೋಫ್ರಿಡ್ 17.8 ಎಸ್.ಎಲ್. 0.5 ಮಿ.ಲೀ ಅಥವಾ ಡೈನೋಟಿಪ್ಯೂರಾನ್20% ಎಸ್.ಜಿ0.4 ಗ್ರಾಂ. ಅಥವಾ ಪೈಮೆಟ್ರೋಜಿನ್50 ಡಬ್ಲ್ಯೂ. ಜಿ0.6 ಗ್ರಾಂ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿಎಕರೆಗೆ 200 ರಿಂದ 250 ಲೀಟರ್ ಸಿಂಪರಣಾ ದ್ರಾವಣ ಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪಕರ್ಿಸಿ: ಡಾ: ಪ್ರಮೇಶ ಡಿ., ವಿಜ್ಞಾನಿಗಳು (ಸಸ್ಯರೋಗಶಾಸ್ತ್ರ), ಅಖಿಲ ಭಾರತ ಸಂಯೋಜಿತ ಭತ್ತಅಭಿವೃದ್ಧಿಯೋಜನೆ, ಗಂಗಾವತಿ (ಮೋ. ನಂ. 9008709050), ರಾಘವೆಂದ್ರಎಲಿಗಾರ, ವಿಜ್ಞಾನಿಗಳು (ಕೃಷಿ ಕೀಟಶಾಸ್ತ್ರ), ಕೃಷಿ ವಿಜ್ಞಾನಕೇಂದ್ರ, ಗಂಗಾವತಿ(ಮೋ. ನಂ. 8217440909), ಡಾ. ಸುಜಯ ಹುರಳಿ., ವಿಜ್ಞಾನಿಗಳು (ಕೃಷಿ ಕೀಟಶಾಸ್ತ್ರ),ಅಖಿಲ ಭಾರತ ಸಂಯೋಜಿತ ಭತ್ತಅಭಿವೃದ್ಧಿಯೋಜನೆ, ಗಂಗಾವತಿ (ಮೋ. ನಂ. 8105427775) ಸಂಪಕರ್ಿಸಬಹುದು.