ಯುವಕರಿಗೆ ವಿವಾಹ ಪೂರ್ವ ತಿಳುವಳಿಕೆ ಕಾರ್ಯಾಗಾರ

ಯುವಕರಿಗೆ ವಿವಾಹ ಪೂರ್ವ ತಿಳುವಳಿಕೆ ಕಾರ್ಯಾಗಾರ   Pre-marital awareness workshop for youth

ಯಮಕನಮರಡಿ 03:  ಯ.ವಿ ಸಂಘದ ಪದವಿ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಮಾರ್ಗದರ್ಶನ ಘಟಕ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಮತ್ತು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ   ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವಕ-ಯುವತಿಯರಿಗಾಗಿ ವಿವಾಹ ಪೂರ್ವ ತಿಳುವಳಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.  

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಎಸ್ ಯರಗಟ್ಟಿಯ ಪ್ರಾಚಾರ್ಯರಾದ ಕಿರಣ್ ಎಂ. ಚೌಗಲಾ ಅವರು,   ವಿವಾಹ ಪೂರ್ವ ತಿಳುವಳಿಕೆ ಅತ್ಯಂತ ಮಹತ್ವದ ವಿಷಯವಾಗಿದ್ದು, ವಿವಾಹವು ಜೀವನಪೂರ್ಣ ಹೊಣೆಗಾರಿಕೆಯ ಸಂಬಂಧವಾಗಿದೆ. ಈ ಹಿನ್ನೆಲೆಯಲ್ಲಿ ಸಂವಹನ ಕೌಶಲ್ಯವು ಅತ್ಯಗತ್ಯವಾಗಿದ್ದು, ಒಬ್ಬರೊಂದಿಗೆ ಮತ್ತೊಬ್ಬರು ಮಾತುಕತೆ ನಡೆಸುವುದು ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದು ಮುಖ್ಯ. ಜೊತೆಗೆ, ವಿವಾಹ ಜೀವನದಲ್ಲಿ ಎದುರಾಗುವ ಬದಲಾವಣೆಗಳಿಗೆ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ತಿಳಿಸಿದರು.  

ಇನ್ನೋರ್ವ ಅತಿಥಿಯಾಗಿ ಮಾತನಾಡಿದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ   ರೇಡಿಯೋ ನಿರೂಪಕರಾದ ಚೇತನ ಕುಲಕರ್ಣಿ ಅವರು, “ರೇಡಿಯೋ ಒಂದು ಅದ್ಭುತ ಮತ್ತು ಆರೋಗ್ಯಕರ ಮಾಧ್ಯಮ. ಇದು ಶ್ರವಣ ಮಾಧ್ಯಮವಾಗಿದ್ದು, ಇತರ ಕೆಲಸಗಳನ್ನು ನಿರ್ವಹಿಸುತ್ತಾ ಕೂಡ ಕೇಳಬಹುದಾಗಿದೆ,” ಎಂದು ವಿವರಿಸಿದರು. ಅವರು ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಇರುವ ವಿವಿಧ ವೃತ್ತಿ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿದರು.  

ಈ ಕಾರ್ಯಕ್ರಮದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಜಾಗೃತಿಯುತ ಸಂಬಂಧಗಳನ್ನು ನಿರ್ಮಿಸುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು. ಭಾಗವಹಿಸಿದವರು ಸಂವಹನ ಕೌಶಲ್ಯ, ಕುಟುಂಬ ಮೌಲ್ಯಗಳು ಹಾಗೂ ಸಂಘರ್ಷ ನಿರ್ವಹಣೆ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದರು.  

ಈ ಸಂದರ್ಭದಲ್ಲಿ ಯ.ವಿ ಸಂಘದ ಪದವಿ ಪೂರ್ವ ಹಾಗೂ ಪದವಿ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ.ಎಸ್‌. ಗುತ್ತಿ, ಯ.ವಿ ಸಂಘದ ಕಾರ್ಯದರ್ಶಿ ಜೆ.ಎನ್‌. ಅವಾಡೆ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಸಂಯೋಜಕರಾದ ಶಂಕರ್ ಕತ್ತಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಎಂ.ಬಿ. ಪೂಜೇರಿ ಅವರು ನಿರೂಪಿಸಿದರು. ವಿ.ಜಿ. ಮೇದಾರ್ ಅವರು ವಂದಿಸಿದರು.