ಚಳಿಗಾಲ ಅಧಿವೇಶನದ ಪೂರ್ವಬಾವಿ ಸಭೆ
ಬೆಳಗಾವಿ ಡಿ.06: ಕಳೆದ ವರ್ಷದಂತೆ ಈ ವರ್ಷವೂ ಸಹ ಚಳಿಗಾಲದ ಅಧಿವೇಶನ ಜಿಲ್ಲೆಯಲ್ಲಿ ಜರುಗುತ್ತಿದ್ದು, ಅಧಿವೇಶನದ ಸುಗಮ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತಿ ಹಾಗೂ ಅಧೀನ ಇಲಾಖೆಯ ಸಿಬ್ಬಂದಿ ವರ್ಗದವರು ಸಮನ್ವಯತೆ ಸಾಧಿಸುವ ಮೂಲಕ ತಮ್ಮ ಕಾರ್ಯ ನಿರ್ವಹಿಸಿ ಹಾಗೂ ಶಿಸ್ತು ಮತ್ತು ಸಮಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ರವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಚಳಿಗಾಲದ ಅಧಿವೇಶನದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ ಚಳಿಗಾಲದ ಅಧಿವೇಶನದ ಅಂಗವಾಗಿ ಸುವರ್ಣಸೌಧದಲ್ಲಿ ಹಂಚಿಕೆ ಮಾಡಿರುವ ಕೊಠಡಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಶಿಸ್ತು ಮತ್ತು ಸಮಯ ಪಾಲನೆ ಕಡ್ಡಾಯವಾಗಿ ಮಾಡಬೇಕು. ಲೈಸನ ಆಫೀಸರ ಆಗಿ ನಿಯೋಜನೆಗೊಂಡ ಅಧಿಕಾರಿಗಳು ರಾಜ್ಯ ಕಛೇರಿಯ ಅಧಿಕಾರಿಯ ವೈಯಕ್ತಿಕ ಸಹಾಯಕರೊಂದಿಗೆ(ಕಜಢಿಠಚಿಟ ಣಚಿಟಿಣ) ಸಂಪರ್ಕ ಸಾಧಿಸಿ, ಅವರುಗಳು ಬರುವ ದಿನವನ್ನು ಖಚಿತಪಡಿಸಿಕೊಂಡು ಯಾವುದೇ ಲೋಪ ಆಗದಂತೆ ಅವರುಗಳಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವುದು. ಅದೇ ರೀತಿ ಲೈಸನ್ ಅಧಿಕಾರಿಗಳು ತಮ್ಮ ಬಳಿ ಲ್ಯಾಪ್‌ಟಾಪ್ ಹಾಗೂ ಇಂಟರ್‌ನೆಟ್ ಸೌಲಭ್ಯ ಇಟ್ಟುಕೊಳ್ಳುವುದು ಕೆಲಸದ ಪ್ರಯುಕ್ತ ಮೇಲಾಧಿಕಾರಿಗಳ ಕೇಳಿದಲ್ಲಿ ಅವರುಗಳಿಗೆ ಹಸ್ತಾಂತರಿಸುವುದು.
ಐಂಕಿಗೆ ಸಂಬಂಧಿಸಿದಂತೆ ಮಾತನಾಡಿ ಉಪಕಾರ್ಯದರ್ಶಿ(ಆಡಳಿತ) ರವರು ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆಯವರಿಗೆ ಕಾರ್ಯಾಲಯದಲ್ಲಿ ಇರುವುದು ಯಾವುದೇ ಕಾರಣಕ್ಕೂ ಪ್ರಧಾನ ಕಛೇರಿಯನ್ನು ಅನುಮತಿಯಿಲ್ಲದೆ ಬಿಡುವುವಂತಿಲ್ಲ ಏಕೆಂದರೆ ಅಧಿವೇಶನದ ಪ್ರಯುಕ್ತ ಹಿರಿಯ ಅಧಿಕಾರಿಗಳು ಕಾರ್ಯಾಲಯಕ್ಕೆ ಬರುತ್ತಾರೆ. ಕೆಲವೊಂದು ಸಭೆಗಳನ್ನು ಜರುಗಿಸಲಾಗುವುದು ಎಂದು ಮಾನ್ಯರು ತಿಳಿಸಿದರು.
ಅದೇ ತರಹ ಅಧಿವೇಶನದ ಕೆಲಸಕ್ಕಾಗಿ ನಿಯೋಜನೆಗೊಂಡ ಎಲ್ಲ ಜಿಲ್ಲಾ ಪಂಚಾಯತಿ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ತಮಗೆ ಹಂಚಿಕೆ ಮಾಡಿದ ಕೊಠಡಿಯಲ್ಲಿರುವುದು ಹಾಗೂ ಎಲ್ಲರು ಶಿಸ್ತಿನಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕೆಂದು. ಶನಿವಾರ ಮತ್ತು ರವಿವಾರದಂದು ಯಾವುದೇ ಸಿಬ್ಬಂದಿ ವರ್ಗದವರು ತಮ್ಮ ಮೊಬೈಲ್ ಸ್ವೀಚ್ ಆಫ್ ಮಾಡಕೂಡದು ಒಂದು ವೇಳೆ ಮಾಡಿದ್ದಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ(ಪಂಚಾಯತ ರಾಜ್) ಉಮಾ ಮಹಾದೇವನ್ ರವರು ಜಿಲ್ಲೆಯಲ್ಲಿ ಕ್ಷೇತ್ರ ಭೇಟಿ ಯಾವುದೇ ಸಂದರ್ಭದಲ್ಲಿ ಮಾಡಬಹುದು ಆದಕಾರಣ ಪಂಚಾಯತ ರಾಜ್ ಕಾಮಗಾರಿಗಳಾದ ಕೂಸಿನ ಮನೆ, ಡಿಜಿಟಲ್ ಲೈಬ್ರರರಿ, ರಸ್ತೆ ನಿರ್ಮಾಣ, ಓವರ ಹೆಡ್ ಟ್ಯಾಂಕ್, ಶಾಲೆ ಮತ್ತು ಅಂಗನವಾಡಿ, ಸ್ವ-ಸಹಾಯ ಗುಂಪುಗಳು ಮತ್ತು ಮೇಕೆ ಸಾಕಾಣಿಕೆ ಇವುಗಳ ಮೇಲೆ ನಿಗಾವಹಿಸಿ ಹಾಗೂ ಸಂಬಂಧಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿರಲು ಮಾನ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ದವಾದ ಅಕ್ಕಾ ಕೆಫೆ, ನೂತನ ಜಿಲ್ಲಾ ಪಂಚಾಯತಿ ಕಟ್ಟಡ ,ಸೈಯನ್ಸ ಪಾರ್ಕ್ ಮುಂತಾದವುಗಳ ಕಾಮಗಾರಿ ಕೆಲಸ ಅಲ್ಪ ಸ್ವಲ್ಪ ಬಾಕಿ ಇದ್ದಲಿ ಕೂಡಲೇ ಮುಕ್ತಾಯಗೊಳಿಸುವುದು. ಜಿಪಂ ಸಿಇಒ ಕೊನೆಯದಾಗಿ ಮಾತನಾಡಿ ಚಳಿಗಾಲದ ಅಧಿವೇಶನದ ಪೂರ್ವಬಾವಿ ಸಭೆಗೆ ಗೈರಾದ ಜಿಲ್ಲಾ ಪಂಚಾಯತ ಸಿಬ್ಬಂದಿ ಹಾಗೂ ಅಧಿವೇಶನ ಕೆಲಸಕ್ಕೆ ನಿಯೋಜನೆಗೊಂಡ ಇತರೆ ಅಧೀನ ಇಲಾಖೆಯ ಸಿಬ್ಬಂದಿಗಳಿಗೆ ನೋಟಿಸ ನೀಡಲು ಉಪಕಾರ್ಯದರ್ಶಿ(ಆಡಳಿತ) ರವರಿಗೆ ಮಾನ್ಯರು ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನ್ನವರ ಜಿಪಂ ಬೆಳಗಾವಿ, ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಕಾರ್ಯಪಾಲಕ ಅಭಿಯಂತರರು ಪಾಂಡುರಂಗ ರಾವ್ ಚಿಕ್ಕೋಡಿ ವಿಭಾಗ, ಕಾರ್ಯಪಾಕ ಅಭಿಯಂತರರು ಕೋಳಿ(ಪಂಚಾಯತರಾಜ್) ಬೆಳಗಾವಿ ವಿಭಾಗ, ಕಾರ್ಯಪಾಲಕ ಅಭಿಯಂತರರು ಪ್ರವೀಣ ಮಠಪತಿ (ಪಂಚಾಯತರಾಜ್) ಚಿಕ್ಕೋಡಿ ವಿಭಾಗ ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.