ಧಾರವಾಡ 22: ಮಹಿಳೆ ಸದಾ ಸಂವೇದನಾಶೀಲಳು. ಅವಳು ಸದಾ ಸಾಮಾಜಿಕ ವ್ಯವಸ್ಥೆಯ ಭದ್ರತೆಗೆ ಶ್ರಮಿಸುತ್ತಾಳೆ ಅವಳು ತನ್ನೊಳಗಿನ ನೋವನ್ನು ಸಾಹಿತ್ಯದ ಸಾಧನೆಯ ಮೂಲಕ ಸಂಭ್ರಮಿಸಲು ಮುಂದಾದಾಗ ಸರಿಯಾದ ವಿಮಶರ್ೆಯಾಗದೆ ಮಹಿಳಾ ಸಾಹಿತ್ಯ ಸೊರಗಿ ಹೋಯಿತೆಂದು ಸಾಹಿತಿ ಡಾ. ಶಾಂತಾ ಇಮ್ರಾಪೂರ ತಿಳಿಸಿದ್ದಾರೆ.
ಅವರು ಧಾರವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ನಿಂಗಯ್ಯ ಮಾಸ್ತಮರಡಿ ರುದ್ರಾಪೂರ ಮತ್ತು ಶಿವಲಿಂಗ ಪ್ರಭು ದೇಸಾಯಿ ದತ್ತಿ, ದಿ. ಪ್ರೇಮಾ ನಾಗೇಶ ಸ್ಮಾರಕ ದತ್ತಿ ಹಾಗೂ ಗಣಪತಿ ವಾಸುದೇವ ಶೆಟ್ಟಿ ದತ್ತಿ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಮಹಿಳೆ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.
ನಾಡಿನಲ್ಲಿ ಹಲವಾರು ಜನ ಮಹಿಳಾ ಸಾಹಿತಿಗಳು ಅನುಭಾವದ ನೆಲೆಯಲ್ಲಿ ಸಾಹಿತ್ಯದ ಅಭಿವೃದ್ದಿಗೆ ಶ್ರಮಿಸಿದರು ಸಾಹಿತ್ಯ ಲೋಕ ಅದಕ್ಕೆ ಪ್ರೇರಣೆ ಮತ್ತು ಪ್ರೊತ್ಸಾಹವನ್ನು ನೀಡದಿರಲು ಈವರೆಗೆ ಅದು ಹೆಣ್ಣು ಮಕ್ಕಳ ಸಾಹಿತ್ಯವೆಂದೆ ಪಟ್ಟಗಟ್ಟಿ ಆ ಸಾಹಿತ್ಯವನ್ನು ಕಳಾಹೀನಗೊಳಿಸಿದರೆಂದು ನೊಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎಚ್.ಎಮ್. ಬೀಳಗಿ ನಮ್ಮ ಸಮಾಜ ಮಹಿಳಾ ಸಾಹಿತ್ಯದ ವಿಚಾರದಲ್ಲಿ ಅವಳಿಗೆ ಹೊನ್ನು, ಮಣ್ಣಿನಂತಹ ನಶ್ವರದ ಪದಗಳಿಗೆ ಹೆಣ್ಣನ್ನು ಹೋಲಿಸಿ ಅವಳ ಅಂತರಾಳದ ಸಾಹಿತ್ಯದ ಪದಗಳಿಗೆ ಪ್ರೋತ್ಸಾಹ ನೀಡದಿರಲು ಮಹಿಳಾ ಸಾಹಿತ್ಯ ಅಭಿವೃದ್ದಿಯತ್ತ ಸಾಗಲೇ ಇಲ್ಲ. ಮಹಿಳೆಯನ್ನು ಸಮಾಜದ ಬೇರೆ ಬೇರೆ ವಿಷಯಗಳಿಗೆ ಸಾಮಾನ್ಯೀಕರಿಸಿ ಅವಳ ಪ್ರತಿಭೆಯತ್ತ ಗಮನ ಹರಿಸಲೇ ಇಲ್ಲ. ಈ ನಿಟ್ಟಿನಲ್ಲಿ ಅವಳ ಅಂತರಾಳದಿಂದ ಹೊರ ಹೊಮ್ಮಿದ ಸಾಹಿತ್ಯಕ್ಕೆ ನಾವೆಲ್ಲ ಪ್ರೋತ್ಸಾಹ ನೀಡಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶರ್ಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಜಿನದತ್ತ ಹಡಗಲಿಯವರು ಕನರ್ಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡ ಪ್ರಯುಕ್ತ ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ. ಕೆ.ಎಸ್. ಕೌಜಲಗಿ, ಪ್ರೊ. ಎಸ್.ಎಸ್. ದೊಡಮನಿ, ಡಾ. ಶಿವಾನಂದ ಟವಳಿ, ಎ.ಬಿ. ಸಬರದ. ಮಹಾಂತೇಶ ನರೇಗಲ್, ಎಸ್.ಎಮ್. ದಾನಪ್ಪ ಗೌಡರ ಚಂದ್ರಶೇಖರ ಪಾಟೀಲ, ಪ್ರಮೀಳಾ ಜಕ್ಕಣ್ಣವರ, ಜಯಶ್ರೀ ಜಾತಿಕರ್ತ, ವ್ಹಿ.ಎಮ್. ಹೊಸಮನಿ, ನಾಗರತ್ನ ನಾಗಶೆಟ್ಟಿ, ಸಿ.ಎಮ್. ಕೆಂಗಾರ, ಬಿ.ಎನ್. ಗೊರವರ, ಜಿ.ಟಿ. ದೊಡ್ಡಮನಿ, ಜೆ.ಎಮ್. ಗಾಮನಗಟ್ಟಿ, ಪಿ.ಬಿ. ಕುರಬೆಟ್ಟ, ಎನ್.ಎಸ್. ಕಮ್ಮಾರ, ಮುಕುಂದ ಕುಲಕಣರ್ಿ, ಹಾಜರಿದ್ದರು.
ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ತಾಲೂಕಾ ಕಸಾಪ ಅಧ್ಯಕ್ಷ ಎಫ್.ಬಿ. ಕಣವಿ ಸ್ವಾಗತಿಸಿದರು ಚಂದ್ರಶೇಖರ ಕುಂಬಾರ ವಂದಿಸಿದರು. ಆರತಿ ದೇವ ಶಿಖಾಮಣಿ ನಿರೂಪಿಸಿದರು ಸ್ನೇಹರಂಗ ಕಲಾ ಬಳಗದ ಕಲಾವಿದರು ತತ್ವ ಪದಗಳನ್ನು ಹಾಡಿದರು.