ಸಂಜಯ ಮತ್ತು ಪ್ರಿಯಾ ಆರ್. ಹೊರಡಿ ಹಾಗೂದಿ. ಪ್ರೊ. ಆರ್. ವಿ. ಹೊರಡಿ ದತ್ತಿ, ಪ್ರತಿಭಾ ಪುರಸ್ಕಾರ ಸಮಾರಂಭ
Pratibha Puraskar Ceremony: Dharwad News
ಧಾರವಾಡ 19 : ಕರ್ನಾಟಕ ವಿದ್ಯಾವರ್ಧಕ ಸಂಘವು, ಸಂಜಯ ಮತ್ತು ಪ್ರಿಯಾ ಆರ್. ಹೊರಡಿ ಹಾಗೂ ದಿ. ಪ್ರೊ. ಆರ್. ವಿ. ಹೊರಡಿ ದತ್ತಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿ: 20-8-2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಏರಿ್ಡಸಿದೆ.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು.ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಸುರೇಶ ಹುಲ್ಲಣ್ಣವರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕರ್ನಾಟಕ ಪ. ಪೂ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ದೀಪಾ ಎಚ್. ಮತ್ತು ಕು. ಆಂಜನೇಯ ಎಲ್. ಮಡಿವಾಳರ ಅವರಿಗೆ ಸಂಜಯ ಮತ್ತು ಪ್ರಿಯಾ ಆರ್. ಹೊರಡಿ ಪ್ರತಿಭಾ ಪುರಸ್ಕಾರ ನೀಡುವರು.
ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ 2ನೇ ವರ್ಷ ರಾಜಕೀಯಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕು. ಕಾವ್ಯಾ ಕಡ್ಲಿಗೌಡರ ಮತ್ತು ಕು. ಕಾಡಪ್ಪ ಎಸ್. ಅಮಾತಿ ಅವರಿಗೆ ದಿ. ಪ್ರೊ. ಆರ್. ವಿ. ಹೊರಡಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು.
ಸಾಹಿತಿಗಳು, ಲೇಖಕರು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ದತ್ತಿ ಕುರಿತುಪ್ರೊ. ಆರ್.ವ್ಹಿ. ಹೊರಡಿಯವರು ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಖ್ಯಾತ ಬೋಧಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಅಮೋಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಪ್ರೊ. ಆರ್. ವ್ಹಿ. ಹೊರಡಿ ಪ್ರಸಿದ್ಧ ಬರಹಗಾರರು ಮತ್ತು ಸಾಮಾಜಿಕ ಚಿಂತಕರು. ಪ್ರಭಾವತಿ ಆರ್. ಹೊರಡಿ ಮತ್ತು ಪ್ರೊ. ಆರ್. ವ್ಹಿ ಹೊರಡಿಯವರ ಮಗನಾದ ಸಂಜಯ ಆರ್. ಹೊರಡಿ, ಸಾಪ್ಟವೇರ ಇಂಜೀನೀಯರಾಗಿದ್ದರು ಮತ್ತು ಮಗಳಾದ ಪ್ರಿಯಾ ಆರ್. ಹೊರಡಿ ಆರ್ಕಿಟೆಕ್ಟ್ ಆಗಿದ್ದರು. ಸಂಜಯ ಹಾಗೂ ಪ್ರಿಯಾ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದರು ಮತ್ತು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ್ದರು. ಆ ಪ್ರಯುಕ್ತ ಇವರ ನೆನಪಿನಲ್ಲಿ ಶ್ರೀ ಆರ್. ವ್ಹಿ. ಹೊರಡಿ ದಂಪತಿಗಳು ಪ್ರತಿ ವರ್ಷ ಸಂಘದಲ್ಲಿ ದತ್ತಿ ಕಾರ್ಯಕ್ರಮ ಆಯೋಜಿಸಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿ.ಯು.ಸಿ. (ವಿಜ್ಞಾನ) ಅಧ್ಯಯನ ಮಾಡಿದ ಹಾಗೂ ಆ ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿಗೆ “ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಲಾಗುತ್ತಿದೆ. ಅದೇ ರೀತಿ ದಿನಾಂಕ 20-08-2020 ರಂದು ದಿ. ಪ್ರೊ. ಆರ್. ವ್ಹಿ. ಹೊರಡಿ ಅವರ ನಿಧನ ನಂತರಪ್ರಭಾವತಿ ಆರ್. ಹೊರಡಿ ಅವರು ಪತಿಯ ಹೆಸರಿನಲ್ಲಿ ದತ್ತಿ ಪ್ರಾರಂಭಿಸಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಬಿ.ಎ. ಎರಡನೇ ವರ್ಷ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿಗೆ “ಪ್ರತಿಭಾ ಪುರಸ್ಕಾರ' ಪ್ರದಾನ ಮಾಡಿ ಪ್ರೋತ್ಸಾಹಿಸಿ ಗೌರವಿಸಬೇಕೆಂಬ ಸದಾಶಯದ ದತ್ತಿ ಇರಿಸಿದ್ದಾರೆ. ಆ ನಿಮಿತ್ತ ಈ ವರ್ಷ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ,
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 