ಎಬಿಡಿ ಫೌಂಡೇಶನ್ ಬಳಗದಿಂದ ಪ್ರಸಾದ ಸೇವೆ
Prasada Seva by the ABD Foundation team
ತಾಳಿಕೋಟಿ 29: ಪಟ್ಟಣದ ಐತಿಹಾಸಿಕ ಶ್ರೀ ಖಾಸ್ಗತೇಶ್ವರ ಮಠದ ಜಾತ್ರಾ ಮಹೋತ್ಸವದ ಕೊನೆಯ ದಿನದ ವಿಶೇಷ ಕಾರ್ಯಕ್ರಮಗಳಾದ ಆನೆ ಅಂಬಾರಿ ಹಾಗೂ ಮಹಾ ರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಮುಖಂಡ ಆನಂದ ದೊಡ್ಡಮನಿ ನೇತೃತ್ವದ ಎಬಿಡಿ ಫೌಂಡೇಶನ್ ಹಾಗೂ ಕುಚುಕು ಗೆಳೆಯರ ಬಳಗದ ವತಿಯಿಂದ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಸೋಮವಾರ ಬೆಳಿಗ್ಗೆ 9 ಘಂಟೆಯಿಂದ ಆರಂಭವಾದ ಈ ಮಹಾಪ್ರಸಾದ ಸೇವಾ ಕಾರ್ಯಕ್ರಮಕ್ಕೆ ಫೌಂಡೇಶನ್ ಅಧ್ಯಕ್ಷ ಆನಂದಗೌಡ ದೊಡ್ಡಮನಿ ಬಳಗದ ಸದಸ್ಯರ ಜೊತೆಗೂಡಿ ಚಾಲನೆ ನೀಡಿದರು.
ಆನಂದಗೌಡ ದೊಡ್ಡಮನಿ ಅವರು ಮಾತನಾಡಿ ಕಳೆದ 8 ವರ್ಷಗಳಿಂದ ನಮ್ಮ ಎಬಿಡಿ ಫೌಂಡೇಶನ್ ಹಾಗೂ ಕುಚುಕು ಗೆಳೆಯರ ಬಳಗದ ವತಿಯಿಂದ ಅಜ್ಜನ ಜಾತ್ರೆಗೆ ಬರುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ವಿಶೇಷ ಆಹಾರ ಪದಾರ್ಥಗಳಾದ ಶಿರಾ ಹಾಗೂ ಪಲಾವ್ ಸಿದ್ಧಪಡಿಸಲಾಗಿದೆ. ಭಕ್ತರು ದಯವಿಟ್ಟು ಶಾಂತರೀತಿಯಿಂದ ಪ್ರಸಾದವನ್ನು ಸ್ವೀಕರಿಸಿಕೊಂಡು ಹೋಗಬೇಕೆಂದು ನಾವು ಕೇಳಿಕೊಳ್ಳುತ್ತೇವೆ ಎಂದರು. ಬಳಗದ ಪದಾಧಿಕಾರಿಗಳಾದ ಶ್ರೀಶೈಲ ಸಜ್ಜನ, ಬಿ ಎಚ್ ವಠಾರ, ಶೇಖಪ್ಪ ಇಜೇರಿ, ಸೋಮು ಬಂಟನೂರ, ರಾಜುಗೌಡ ಪಾಟೀಲ, ಯಲಗುರೇಶ ಚಬನೂರ, ಗಜಾನನ ಸೋನಾರ, ರಾಘವೇಂದ್ರ ಶೆಟ್ಟಿ, ಮಲ್ಲು ಕೋರಿ ಮಲ್ಲು ದೇವಶೆಟ್ಟಿ, ವೀರಭದ್ರ್ಪ ಸಿಲುವಂತ, ಗುರು ಹೊಳಿ ಹಾಗೂ ಬಳಗದ ಪದಾಧಿಕಾರಿಗಳು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 