ಆಲಮೇಲದಲ್ಲಿ ಪ್ರಜಾ ಸೌಧ ಕಟ್ಟಡ ಭೂಮಿ ಪೂಜೆ
Praja Soudha building ground worship in Alamela
ಆಲಮೇಲದಲ್ಲಿ ಪ್ರಜಾ ಸೌಧ ಕಟ್ಟಡ ಭೂಮಿ ಪೂಜೆ
ಆಲಮೇಲ 03: ಪಟ್ಟಣದ ಸೋಮವಾರ ಲೋಕೋಪಯೋಗಿ ಇಲಾಖೆಯಿಂದ ಸುಮಾರು 8.60 ಕೋಟಿಗಳ ವೆಚ್ಚದಲ್ಲಿ ಪ್ರಜಾ ಸೌಧ ಕಟ್ಟಡ ಭೂಮಿ ಪೂಜೆಯನ್ನು ಸಿಂದಗಿ ಜನಪ್ರಿಯ ಶಾಸಕ ಅಶೋಕ ಮನಗೂಳಿ ನೆರವೇರಿಸಿದರು.
"ನಮ್ಮ ನಡೆ ಅಭಿವೃದ್ಧಿ ಕಡೆ" ಎಂಬ ವಾಕ್ಯಗಳೊಂದಿಗೆ ಆಲಮೇಲ ಮಹಾ ಜನತೆಗೆ ಸಂದೇಶ ನೀಡಿದ ಆಲಮೇಲ ತಾಲೂಕು ಆದುದರಿಂದ ಇಲ್ಲಿ ಹಂತ ಹಂತವಾಗಿ ಕೆಲಸ ಕಾರ್ಯಗಳು ನಡೆಯುತ್ತಿರುತ್ತವೆ. ಈಗಾಗಲೇ ನಾಲ್ಕು ಕೆಲಸಗಳು ಪ್ರಗತಿಯಲ್ಲಿವೆ. 3ಎಕರೆ 03 ಗುಂಟೆಯಲ್ಲಿ ಪ್ರಜಾ ಸೌಧ ಕಟ್ಟಡ ಸುಮಾರು 8.60 ಕೋಟಿ ವೆಚ್ಚದಲ್ಲಿ ಇವತ್ತು ಭೂಮಿ ಪೂಜೆ ನೆರವೇರಿಸಿದ್ದೇವೆ.1 ಎಕರೆ ಜಾಗದಲ್ಲಿ ಫೈರ್ ಸ್ಟೇಷನ್ 3ಕೋಟಿ ಮಂಜೂರು ವಾಗಿದೆ. 6 ಎಕರೆ 20 ಗುಂಟೆಯಲ್ಲಿ ತಾಲೂಕು ಕ್ರೀಡಾಂಗಣ 3 ಕೋಟಿ ಮಂಜೂರಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸುತ್ತೇನೆ ಇನ್ನು ಉಳಿದ ಒಂದು ಕೆಲಸ ನ್ಯಾಯಲಯ್ (ಕೋಟ್) ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ 15 ರಿಂದ 20 ಕೋಟಿ ರೂಪಾಯಿ ಬೇಕಾಗಿರುವುದರಿಂದ. ಮೂರು ಅಂತಸ್ತು ಇರುವುದರಿಂದ ಅದನ್ನು ಕೂಡ ಮಂಜೂರಿ ಮಾಡಿಸುತ್ತೇನೆ ಎಂದು ಹೇಳಿದರು.
ಈ ವೇದಿಕೆಯ ಮುಖಾಂತರ ಮಾಜಿ ಶಾಸಕರಾದ ರಮೇಶ ಭೂಸನೂರ ನೇರವಾಗಿ ಸವಾಲ ಹಾಕಿದ ಹಾಲಿ ಶಾಸಕ ಅಶೋಕ್ ಮನಗೂಳಿ ನನಗೆ 10 ಕಿ.ಮೀ ಸಿಂದಗಿ ಮತಕ್ಷೇತ್ರದಲ್ಲಿ ಡಾಂಬರೀಕರಣ ಮಾಡಿಲ್ಲ ಎಂದು ಹೇಳಿದ್ದಾರೆ ಅವರು ಬಹಿರಂಗವಾಗಿ ಎಲ್ಲೇ ಕರೆದರೂ ನಾನು ಆ ಕೆಲಸ ಮಾಡಿದ್ದು ತೋರಿಸುತ್ತೇನೆ ಎಂದು ಹೇಳಿದರು.
ಆಲಮೇಲ ಗುರುಸಂಸ್ಥಾನ ಚಂದ್ರಶೇಖರ್ ಶಿವಾಚಾರ್ಯರು ಹಿರೇಮಠ್ ಮಾತನಾಡಿ. ಆಲಮೇಲ ತಾಲೂಕು ಸೌಂದರ್ಯ ಕಟ್ಟಡ ನಾವು ಪ್ರಜಾ ಸೌಧ ಕಟ್ಟಡಕ್ಕೆ ಶಾಸಕರ ಪ್ರಯತ್ನ ಹಾಗೂ ಆಲಮೇಲ ಅಭಿವೃದ್ಧಿ ಕಡೆ ಧಾಪುಗಾಲು ಹಾಕುತ್ತಿರುವುದು ಸಂತೋಷದ ವಿಷಯವಾಗಿದೆ. ಪ್ರಜ್ಞಾವಂತರ ಮತ್ತು ಶಿಕ್ಷಣವಂತರು ಶಾಸಕರಾದ ಮಾತ್ರ ಈ ಕೆಲಸ ತರಲು ಸಾಧ್ಯ ಎಂದು ಹೇಳಿದರು.ನಾಗರಿಕ ವೇದಿಕೆಯ ಅಧ್ಯಕ್ಷರಾದ ರಮೇಶ್ ಬಂಟನೂರು ಮಾತನಾಡಿ. ಆಲಮೇಲ ತಾಲೂಕು ಮಾಡಲು ನಾಲ್ಕು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ ದಿವಂಗತ ಎಂ ಸಿ ಮನಗೂಳಿ ಅವರು ನಮ್ಮ ಹೋರಾಟದ ಫಲವಾಗಿ ನಮ್ಮ ತಾಲೂಕನ್ನಾಗಿ ಮಾಡಿದ್ದಾರೆ. ಆಲಮೇಲ ತಾಲೂಕು ಮಾಡಲು ಕಾರಣಕರ್ತರಾದ ಅಶೋಕ ಮನಗೂಳಿ ಅವರ ಕುಟುಂಬ ನಾವು ಆಲಮೇಲ ಜನತೆ ಧೈರ್ಯದಿಂದ ಹೇಳುತ್ತಿದ್ದೇವೆ. ಇದೇ ವೇಳೆ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸರ್ವ ಸದಸ್ಯರುಗಳಿಗೆ ಶಾಸಕರಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ್ ಸುಂಬುಡ, ಚಂದ್ರಶೇಖರ್ ಹಳಿಮನಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಅಶೋಕ್ ಕೊಳರಿ, ಬಸವರಾಜ್ ತೆಲ್ಲೂರು, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಶಶಿಧರ್ ಗಣಿಯರ, ಮುದುಕಪ್ಪ ಮೇಲಿನಮನಿ, ಈರಣ್ಣ ಕಲ್ಲೂರು, ಮೈಬೂಬ್ ಮಸೂಳಿ, ಭಾಗ್ಯವಂತ ಆಲಮೇಲಕರ, ಬಸಲಿಂಗಪ್ಪ ಕತ್ತಿ ಕಡಣಿ ಗ್ರಾಮ ಪಂಚಾಯತ್ ಅಧ್ಯಕ್ಷರ, ಆಲಮೇಲ ವಲಯದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸಂತೋಷ್ ಕ್ಷತ್ರಿ, ಡಾ.ಮಲ್ಲು ಪ್ಯಾಟಿ, ಆಲಮೇಲ ತಾಲೂಕ ದಂಡಾಧಿಕಾರಿ ಮಲ್ಲಿಕಾರ್ಜುನ ಅರಿಕೇರಿ ಸ್ವಾಗತಿಸಿದರು. ಶ್ರೀಶೈಲ್ ಮಡಪತಿ ನಿರೋಪಣೆ ಮಾಡಿದರು. ಶರಣಪ್ಪ ನಾಟಿಕಾರ ಈ ಕಾರ್ಯಕ್ರಮಕ್ಕೆ ಅನೇಕ ರಾಜಕೀಯ ಮುಖಂಡರು ಹಿರಿಯರು ಮಹಿಳೆಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 