ಡಾರ್ಲಿಂಗ್ ಕೃಷ್ಣ ‘ಲೋಕಲ್ ಟ್ರೈನ್’ ಹಾಡುಗಳಿಗೆ ‘ಪವರ್ ಹಸಿರು ನಿಶಾನೆ

ಬೆಂಗಳೂರು, ಜ 24, ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಚಿತ್ರದ ಮೂರು ಸುಂದರ ಹಾಗೂ ಕಲರ್‍ಫುಲ್ ಹಾಡುಗಳು ಬಿಡುಗಡೆಯಾಗಿವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಲೋಕಲ್ ಟ್ರೈನ್ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದರು .‘ಪುನೀತ್ ರಾಜ್‍ಕುಮಾರ್ ನನ್ನ ದೊಡ್ಡಣ್ಣನ ಹಾಗೆ  ಮುಂಚಿನಿಂದಲೂ ನನ್ನೆಲ್ಲ ಸಿನೆಮಾಗಳಿಗೆ ಪ್ರೋತ್ಸಾಹ ನೀಡುತ್ತ   ಬಂದಿದ್ದಾರೆ’ ಎಂದ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವೆ  ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ ರೈಲಿನಲ್ಲಿ ಬರುತ್ತಿರುತ್ತಾನೆ ಚಿತ್ರದ ಬಹುತೇಕ ದೃಶ್ಯಗಳು ರೈಲಿನಲ್ಲೇ ನಡೆಯುವ ಕಾರಣ ‘ಲೋಕಲ್ ಟ್ರೈನ್’ ಅಂತ  ಹೆಸರಿಟ್ಟಿದ್ದೇವೆ ಟ್ರೈನ್ ಲೋಕಲ್ ಆದ್ರೂ ಪ್ರೊಡಕ್ಷನ್ ಹೈ ಕ್ಲಾಸ್  ಇಬ್ಬರು ನಾಯಕಿಯರಿದ್ದಾರೆ ಎಂದರು. ಚಿತ್ರಕ್ಕೆ ರುದ್ರಮಣಿ ನಿರ್ದೇಶನವಿದೆಯಾದರೂ, ಕೆಲ ಭಿನ್ನಾಭಿಪ್ರಾಯಗಳಿಂದಾಗಿ   ಅವರು ಚಿತ್ರತಂಡದಿಂದ ಹೊರನಡೆದರು   ಹೀಗಾಗಿ ಪೋಸ್ಟ್ ಪ್ರೊಡಕ್ಸನ್ ಕೆಲಸದ ಹೊಣೆಯನ್ನು ನಿರ್ದೇಶಕ ಮಾರುತಿ ವಹಿಸಿಕೊಂಡಿದ್ದಾರೆ ಎಂದು ನಿರ್ಮಾಪಕ ಸುಬ್ರಾಯ ವಾಲ್ಕಿ ತಿಳಿಸಿದರು.ಇದು ಸ್ವಮೇಕ್ ಚಿತ್ರವಾಗಿದ್ದು, ಬಂಡವಾಳ ಹೂಡಿರುವ ಸುಬ್ರಾಯ ವಾಲ್ಕಿಯವರೇ   ಕಥೆ ಬರೆದಿದ್ದಾರೆ.  5 ಹಾಡುಗಳಿದ್ದು, ಅರ್ಜುನ್   ಜನ್ಯ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ಡಾರ್ಲಿಂಗ್ ಕೃಷ್ಣ, ಮೀನಾಕ್ಷಿ ದೀಕ್ಷಿತ್,  ಈಸ್ಟಾರ್ ನರೋನ, ಭಜರಂಗಿ ಲೋಕಿ, ಸಾಧು   ಕೋಕಿಲ, ಮೈಸೂರು ಗೋಪಿ ಮೊದಲಾದವರಿದ್ದಾರೆ.