ಪವರ್ ಬಿ.ಐ. ಓದ್ಯೋಗಿಕ ಕ್ಷೇತ್ರದ ಆಶಾಕಿರಣ : ರೇಖಾ ಗುರವ್ವಗೋಳ

Power BI is a ray of hope for the industrial sector: Rekha Guruvagol

ಪವರ್ ಬಿ.ಐ. ಓದ್ಯೋಗಿಕ ಕ್ಷೇತ್ರದ ಆಶಾಕಿರಣ : ರೇಖಾ ಗುರವ್ವಗೋಳ 

ಬೆಳೆಗಾವಿ   22  : ಸಣ್ಣ ಸ್ಟಾರ್ಟಪ್ ಗಳಿಂದ ಹಿಡಿದು ದೊಡ್ಡ ಗಾತ್ರದ ಉದ್ಯಮಗಳ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುವ ಪವರ್ ಬಿ.ಐ. ಓದ್ಯೋಗಿಕ ಕ್ಷೇತ್ರದ ಆಶಾಕಿರಣವಾಗಿದೆ ಎಂದು ದತ್ತಾಂಶ ಕಂಪನಿಯ ಅಧಿಕಾರಿ ರೇಖಾ ಗುರವ್ವಗೋಳ ಅಭಿಮತ ವ್ಯಕ್ತಪಡಿಸಿದರು. ಇತ್ತೀಚೆಗೆ ಎಸ್‌. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಡೇಟಾ ಅನಾಲಿಟಿಕ್ಸ್‌ ಮತ್ತು ಪವರ್ ಬಿ.ಐ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಮುಂದುವರೆದು ಮಾತನಾಡಿದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿಯ ನಂತರ ಪವರ್ ಬಿಐ ಅಧ್ಯಯನ ಮಾಡಲು ಅಂತರಾಜ್ಯ ಹಾಗು ವಿದೇಶಗಳಿಗೆ ತೆರಳುವ ಬದಲು ತಂತ್ರಜ್ಞಾನ ಬಳಸಿ ಪದವಿ ಹಂತದಲ್ಲಿಯೇ ಪವರ್ ಬಿ ಐ ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ಎಂದರು.  

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್‌. ಪಟಗುಂದಿ ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚಿಸಲು ಕಾಲೇಜಿನಿಂದ ವಿವಿಧ ತರಬೇತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು . ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ತ್ವರಿತವಾಗಿ ಬೆಳೆಯುತ್ತಿರುವ ಉದ್ಯೋಗಕ್ಷೇತ್ರದಲ್ಲಿ ಡೇಟಾ ಅನಾಲಿಟಿಕ್ಸ್‌ ಮತ್ತು ಪವರ್  ಪಾತ್ರವು ಮಹತ್ವ ಪಡೆದಿದೆ. ಎಲ್ಲರೂ ಆಸಕ್ತಿಯಿಂದ ಈ ಆಧುನಿಕ ತಂತ್ರಜ್ಞಾನವನ್ನು ಕಲಿಯಬೇಕು ಎಂದರು. ಕಾರ್ಯಾಗಾರದಲ್ಲಿ ಪವರ್ ಬಿ.ಐ. ಡೆಸ್ಕ್‌ಟಾಪ್ ಡ್ಯಾಕ್ಸ ಫಂಕ್ಷನ್‌ಗಳು ಡೇಟಾ ಮಾಡೆಲಿಂಗ್ ರಿಪೋರ್ಟ್‌ ವಿಸುಲೈಸೇಶನ್ ಇಂಟರಾಕ್ಟಿವ್ ಡ್ಯಾಶ್‌ಬೋರ್ಡ್‌ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವತಂತ್ರ ಪ್ರಾಜೆಕ್ಟ್‌ ನೀಡಿ ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಾಧ್ಯಾಪಕರಾದ ಅನಿತಾ ಪಾಟೀಲ್ ಸುಜಯ್ ಗೆಜ್ಜಿ ಪ್ರತೀಕ ಬಡಗವಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಅನಿತಾ ಪಾಟೀಲ ವಂದಿಸಿದರು.