ನೀರಿನ ಸಮಸ್ಯೆ ಸಾಧ್ಯತೆ: ಕೆರೆಯಲ್ಲಿ ನೀರು ಸಂಗ್ರಹ ಮಾಡಲು ಆಗ್ರಹ

ನೀರಿನ ಸಮಸ್ಯೆ ಸಾಧ್ಯತೆ: ಕೆರೆಯಲ್ಲಿ ನೀರು ಸಂಗ್ರಹ ಮಾಡಲು ಆಗ್ರಹ Possible water problem: Demand to store water in the lake

            ಸಂಬರಗಿ, 03 : ಗಡಿ ಪ್ರದೇಶದ 35 ಕೆರೆಗಳು ಮಳೆಯ ಮೂಲಕ ನದಿ ನೀರಿನಿಂದ ತುಂಬಿವೆ ಆದರೆ ನೀರನ್ನು ಕೃಷಿಗೆ ಬಳಸುತ್ತಿರುವುದರಿಂದ, ಸರೋವರದ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ಸಮಸ್ಯೆ ಸಾಧ್ಯತೆ ಇದೆ ಒಟ್ಟು 36 ಕೆರೆಗಳು ಅದರಲ್ಲಿ 35 ತುಂಬಿವೆ.  

          ಬೇಸಿಗೆಯಲ್ಲಿ ಬರುವ ನೀರಿನ ಕೊರತೆ ನಿವಾರಣೆಯಾಗುತ್ತದೆ, ಆದರೆ ಬೇಕದೇಶಿರ್ ಸರೋವರದಲ್ಲಿನ ನೀರನ್ನು ಕೃಷಿಗೆ ಬಳಸುತ್ತಿರುವುದರಿಂದ, ನೀರಿನ ಮಟ್ಟ ಕಡಿಮೆಯಾಗುತ್ತಿದೆ, ಪ್ರತಿ ವರ್ಷ ಗಡಿಭಾಗದಲ್ಲಿ ಇರುವ ಜಕಾರಟ್ಟಿ, ಅರಳೆಹಟ್ಟಿ, ಅನಂತಪುರ ಮಲಬಾದ, ಬೇವಿನೂರು ಗುಂಡೇವಾಡಿ ಬಳಿಗೆರೆ ಪಾರ್ಥನ ಹಳ್ಳಿ ಇನ್ನಿತರ ಸೇರಿ 35 ಕೆರೆ ತುಂಬಿವೆ ಆದರೆ ದಿನಕ್ ದಿನ ನೀರಿನ ಪ್ರಮಾಣ ಕಡಿಮೆ ಆಗ್ತಾ ಇದೆ ಕಾರಣ ರಾತ್ರಿಯಲಿ ಕೆರೆಯ ನೀರನ್ನು ರೈತರು ತಮ್ಮ ಜೆಮಿನಿಕೆ ಬಳಸಿಕೊಂಡು ಕಾರಣ ನೀರಿನ ಮಟ್ಟ ಕಡಿಮೆ ಆಗ್ತಾ ಇದೆ ಬೇಸಗೆ ಅವಧಿಯಲ್ಲಿ ನೀರಿನ ಸಮಸ್ಯೆ ತಡೆಹಿಡಿಬೇಕಾದರೆ ಕೇರೆಯಲ್ಲಿ ನೀರು ಸಂಗ್ರ ಇರಬೇಕು ಅಂದರೆ ಸುತ್ತಮುತ್ತ ಇರುವ ತೆರೆದ ಬಾವಿ ಕೊಳವೆ ಬಾವಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ ಒಂದು ವೇಳೆ ಕೆರೆಯಿಂದ ಬೆಳೆಗಳಿಗೆ ನೀರು ಹರಿಸಿದ್ರಿ ಕೆರೆ ಬತ್ತಿ ಹೋಗುತ್ತವೆ ಬೇಸಿಗೆಯಲ್ಲಿ ಮತ್ತು ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಬೇಸ್ಗೆ ಮುಕ್ತಾಯಗೊಳ್ಳುವವರೆಗೆ ಕೆರೆಯಲ್ಲಿ ನೀರು ಸಂಗ್ರಹ ಮಾಡಬೇಕು ಎಂದು ಅಗ್ರಹಿಸಿದ್ದಾರೆ. 

            ನೀರು ಬ್ಯಾಸ್ಕಿ ಅವಧಿ ವರೆಗೆ ಸಂಗ್ರಹ ಇರಬೇಕಾದರೆ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಆದ್ದರಿಂದ ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆಪ್ರತಿ ವರ್ಷ, ಡಿಸೆಂಬರ್ ನವೆಂಬರ್ ದಿಂದ ಗ್ರಾಮೀಣ ಪ್ರದೇಶದಲ್ಲಿ ಗ್ರಾಮದೇವತೆ ಜಾತ್ರೆಯನ್ನು ನಡಿತಿದೆ ಆಗಲೇ ನೀರಿನ ಸಮಸ್ಯೆ ಬರುಬಾರದು ಕಾರಣದಿಂದ ಗ್ರಾಮದಲ್ಲಿ ಹರಿಯುತ್ತಿರುವ ನೀರು ಬಿಟ್ಟನಂತರ ಭಕ್ತರಿಗೆ ಅನುಕೂಲವಾಗುತ್ತದೆ ಉದಾಹರಣೆವಾಗಿ ಕೊಕಟನೂರ ಯಾತ್ರೆ ಪ್ರಾರಂಭವಾದಾಗ, ಪ್ರತಿ ವರ್ಷ ನೀರಿನ ಕೊರತೆ ಅನುಭವಿಸಲು ಪ್ರಾರಂಭಿಸುತ್ತದೆ.  

              ಈ ವರ್ಷ, ಶಾಸಕ ಲಕ್ಷ್ಮಣ ಸವದಿ ಇವರು ಪ್ರಯತ್ನದಿಂದ ಕೃಷ್ಣಾ ನದಿಯಲ್ಲಿ ಪೈಪ್‌ಲೈನ್ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿದ್ದಾರೆ. ಈ ವರ್ಷ, ಎಲ್ಲಾ ಕೆರೆಗಳು ತುಂಬಿವೆ. ಮಳೆಯ ಪ್ರಮಾಣ ಕಡಿಮೆಯಾಗಿದೆ, ಆದರೆ ಕೆರೆಗಳು ತುಂಬಿರುವುದರಿಂದ, ಕೆರೆಗಳ ಪ್ರದೇಶದ ನೂರಾರು ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಪ್ರಸ್ತುತ, ಕೆರೆಗಳು ತುಂಬಿವೆ. ಪ್ರಕೃತಿ ಬೆಂಬಲ ನೀಡದಿದ್ದರೂ, ಅಂತಿಮವಾಗಿ, ನದಿಯಿಂದ ನೀರು ತರುವ ಮೂಲಕ ಅವುಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯು ಕೇವಲ ಒಂದು ಕೆರೆ ಮಾತ್ರ ಒಣಗಿದೆ, ಆದರೆ ಒಟ್ಟು 35 ಕೆರೆಗಳು ತುಂಬಿವೆ. ವರ್ಷ ಬೇಸಿಗೆಯಲ್ಲಿ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಸ್ಪಷ್ಟವಾಯಿತು.

            ಈ ಕುರಿತು ಚಿಕ್ಕ ನೀರಾವರಿ ಇಲಾಖೆ ಅಭಿಯಂತರದ ಪ್ರವೀಣ್ ಪಾಟೀಲ್ ಇವರನ್ನು ಸಂಪರ್ಕಿಸಿದಾಗ ಮಳೆ ಕಡಿಮೆಯಾದರೂ ನದಿಯಿಂದ ಶಾಸಕರಾದ ಲಕ್ಷ್ಮಣ ಸವದಿ ನೀರು ತಂದು ಕೆರೆಗಳನ್ನು ತುಂಬಿಸಲಾಗಿದ್ದು, ಈ ವರ್ಷ ಯಾವುದೇ ಸಮಸ್ಯೆ ಇರುವುದಿಲ. ಅಥಣಿ ತಾಲೂಕಿನ ಚಮಕೇರಿ ಕೆರೆ ಮಾತ್ರ ಖಾಲಿಯಾಗಿದೆ. ಕೆರೆಯಲ್ಲಿರುವ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಯಾರಾದರೂ ಕೃಷಿಗೆ ಬಳಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಂದು ಹೇಳಿದರು.