ಮುಂಬೈ, ಮಾ 26 ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು 2021 ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಎಂಟನೇ ಒಲಿಂಪಿಕ್ ಪ್ರದರ್ಶನಕ್ಕಾಗಿ ತಮ್ಮ ವೃತ್ತಿ ಜೀವನವನ್ನು ಮತ್ತೊಂದು ವರ್ಷ ವಿಸ್ತರಿಸುವ ಚಿಂತನೆಯಲ್ಲಿದ್ದಾರೆ.
ಜೂನ್ ನಲ್ಲಿ 47ನೇ ವಸಂತಕ್ಕೆ ಕಾಲಿಡಲಿರುವ ಪೇಸ್, ಕಳೆದ ವರ್ಷ, 2020 ತಮ್ಮ ವೃತ್ತಿಬದುಕಿನ ಬೀಳ್ಕೊಡುಗೆ ವರ್ಷ ಎಂದು ಘೋಷಿಸಿದ್ದರು. 1992ರ ಬಾರ್ಸಿಲೋನಾ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಕಿರೀಟ ಗೆದ್ದ ನಂತರ ಏಳನೇ ಬಾರಿ ರಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿದ್ದರು."ಇದು ನನ್ನ ಮತ್ತು ನನ್ನ ತಂಡವು ತುಂಬಾ ಕಠಿಣವಾಗಿ ಯೋಚಿಸುತ್ತಿರುವ ನಿರ್ಧಾರ," ಎಂದು ಪೇಸ್ ಇಎಸ್‌ಪಿಎನ್‌ಗೆ ತಿಳಿಸಿದ್ದಾರೆ. ನನ್ನ ತಂದೆ ನನ್ನನ್ನು ಹೆಚ್ಚು ಸಮಯ ಆಡಲು ಬಯಸುತ್ತಿದ್ದಾರೆ. ಅವರು ನನ್ನನ್ನು ಚೆನ್ನಾಗಿ ಅರಿತವರಾಗಿದ್ದಾರೆ. ನಾನು ಒಮ್ಮೆ ನಿವೃತ್ತಿಯಾದ ನಂತರ ಅಲ್ಲಿಗೆ ಮುಗಿಯಿತು. ಮತ್ತೆ ಹಿಂದಿರುಗುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ, ಎಂದು ಪೇಸ್
ನುಡಿದಿದ್ದಾರೆ. ಫಿಟ್ನೆಸ್ ಇನ್ನೂ ಇದೆ, ಆದ್ದರಿಂದ ಮಾನಸಿಕ ಸಾಮರ್ಥ್ಯ ಮತ್ತು ಟೆನಿಸ್ ಕೂಡ ಇದೆ. ನನ್ನ ತರಬೇತಿಯನ್ನು ಸರಿಹೊಂದಿಸಿಕೊಳ್ಳುವತ್ತ ನಾನು ಗಮನ ಹರಿಸಬೇಕಾಗಿದೆ. ಈಗ ದೀರ್ಘ ವಿರಾಮವಿರಲಿದ್ದು, ಈ ಸಮಯದಲ್ಲಿ ನಾನು ಈ ಬಗ್ಗೆ ಉಲ್ಲಾಸಭರಿತ ನೋಟವನ್ನು ನೀಡಬಹುದಾಗಿದೆ, ಎಂದು 47 ವರ್ಷದ ಪೇಸ್ ತಮ್ಮ ಹಿಂದಿನ ನಿವೃತ್ತಿ ನಿರ್ಧಾರವನ್ನು ಮುಂದಕ್ಕೆ ಹಾಕುವ ಯೋಜನೆಯಲ್ಲಿಜದ್ದಾರೆ.