ಗಡಿಭಾಗದ ಕನ್ನಡ ಶಾಲೆಗಳ ದುಸ್ಥಿತಿ; ಶಾಲೆ ಪುನರಾರಂಭಕ್ಕೆ ಆಗ್ರಹ

ಗಡಿಭಾಗದ ಕನ್ನಡ ಶಾಲೆಗಳ ದುಸ್ಥಿತಿ; ಶಾಲೆ ಪುನರಾರಂಭಕ್ಕೆ ಆಗ್ರಹ Poor condition of Kannada schools on the border; Demand for reopening of schools

ಲೋಕದರ್ಶನ ವರದಿ 

ಸಂಬರಗಿ 23 : ರಾಜ್ಯದಲ್ಲಿ ಜೂನ್ 01 ರಿಂದ ಪ್ರಾಥಮಿಕ ಶಾಲೆ ಪ್ರಾರಂಭವಾಗಿದ್ದು, ಪ್ರಾರಂಭದ ದಿನದಿಂದ ಶಾಲೆಗಳು ಸ್ಥಗಿತಗೊಂಡಿದ್ದಾವೆ. ಗಡಿಭಾಗದ ಶಾಲೆಗಳಿಗೆ ಸರಕಾರ ನಿರ್ಲಕ್ಷ್ಯ ತೋರುತ್ತಿದ್ದು, ಭವಿಷ್ಯದಲ್ಲಿ ಕನ್ನಡ ಶಾಲೆಗಳು ಬೀಗ ಬೀಳುವ ಸಾಧ್ಯತೆಇದ್ದು, ಮಹಾರಾಷ್ಟ್ರದ ಗಡಿಭಾಗದ ಕನ್ನಡ ಶಾಲೆಗಳು ಭರದಿಂದ ಸಾಗುತ್ತಿದ್ದಾವೆ. ಸರಕಾರ ಇತ್ತಕಡೆ ಗಮನಹರಿಸಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂಬ ಮಾತು ಮಾತಿಗಷ್ಟೆ ಇದ್ದಂತೆ ಕಾಣುತ್ತಿದೆ. ಅಥಣಿ ತಾಲ್ಲೂಕಿನ ಗಡಿಭಾಗ ರಾಜ್ಯಧಾನಿಯಿಂದ1000 ಕಿ.ಮೀ, ಬೆಳಗಾವಿ ಜಿಲ್ಲೆಯಿಂದ300 ಕಿ.ಮೀ ಇದ್ದು, ಜಿಲ್ಲೆಯಿಂದ ಯಾವುದೇ ಅಧಿಕಾರಿ ಗಡಿಭಾಗದ ಕೊನೆಯ ಹಳ್ಳಿಗೆ ಶಿಕ್ಷಣ ಇಲಾಖೆ ಯಾವುದೇ ಅಧಿಕಾರಿಗಳು ಭೆಟ್ಟಿ ನೀಡಿಲ್ಲ. ಜಿಲ್ಲೆಯ ಕೊನೆಯ ಹಳ್ಳಿಗೆ ಹೋಗಿ ಮರಳಬೇಕಾದರೆ ಪೂರ್ತಿಒಂದು ದಿನ ಕಳೆದುಹೋಗುತ್ತದೆ.

ಈ ಕಾರಣದಿಂದ ಯಾವುದೇ ಇಲಾಖೆಯಜಿಲ್ಲಾ ಅಧಿಕಾರಿಗಳು ಗಡಿಭಾಗದ ಕೊನೆಯ ಹಳ್ಳಿಗಳಾದ ಖೋತವಾಡಿ, ಪಾಂಡೇಗಾಂವ, ಅನಂತಪೂರ ಗ್ರಾಮಗಳಿಗೆ ಭೇಟಿ ನೀಡಿಲ್ಲಾ. ಯಾರಾದರು ರಾಜಕೀಯ ನಾಯಕರು, ಸಚಿವರು ಬರುತ್ತಿದ್ದರೆ ಆವಾಗ ಮಾತ್ರ ಅಧಿಕಾರಿಗಳು ಕಾಣಿಸಿಕೊಳ್ಳುತ್ತಾರೆ. ಶಿಕ್ಷಣ ಇಲಾಖೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹಲವಾರು ಸಮಸ್ಯೆಗಳ ಕಡೆ ಗಮನ ಸೆಳೆದರೂ ಸಹ ಯಾವುದೇ ಅಧಿಕಾರಿಗಳು ಬರುತ್ತಿಲ್ಲ. ಹೀಗಾಗಿ ಭವಿಷ್ಯದಲ್ಲಿ ಈ ಭಾಗದ ಶಾಲೆಗಳು ಮುಚ್ಚುವ ಅಂಚಿನಲ್ಲಿಇದ್ದು, ಈ ಭಾಗದಲ್ಲಿ ಕನ್ನಡಕಲಿಯುತ್ತಿರುವ ವಿದ್ಯಾರ್ಥಿಗಳು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ವಜ್ರವಾಡ ಗೂಗವಾಡ, ಬಿಳ್ಳೂರ, ಉಮರಾಣಿ, ಸಂಕ, ಗುಡ್ಡಾಪೂರ ಈ ಗ್ರಾಮದ ಶಾಲೆಗಳಲ್ಲಿ ತಮ್ಮ ಬೀಗರ ಮನೆಯಲ್ಲಿ ಶಾಲೆ ಕಲಿಯಲು ಪಾಲಕರು ಕಳುಹಿಸುತ್ತಿದ್ದಾರೆ. ಈ ಭಾಗದ ಜನರಲ್ಲಿ ಕನ್ನಡದ ಬಗ್ಗೆ ಗೌರವ ಇದ್ದರೂ ಕನ್ನಡ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.