ಸಮುದಾಯ ಭವನ ಕಾಮಗಾರಿಗಳ ಪೂಜಾ ಕಾರ್ಯಕ್ರಮ

ಬೈಲಹೊಂಗಲ :       ನಮ್ಮ ಸರ್ಕಾರ ಇರುವುದರಿಂದ, ಮಂತ್ರಿಗಳನ್ನು ಸಂಪರ್ಕಿಸಿ ಮತಕ್ಷೇತ್ರದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟಿಲ ಹೇಳಿದರು.

ಅವರು ಬುಧವಾರ ತಾಲೂಕಿನ ನಯಾನಗರ ಗ್ರಾಮದಲ್ಲಿ ತಾಪಂ ಅನುದಾನದಡಿ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ತಮ್ಮ ವಿಶೇಷ ಪ್ರಯತ್ನದಿಂದ ಗ್ರಾಮಕ್ಕೆ ಮಂಜೂರಾದ ಒಟ್ಟು 39 ಲಕ್ಷ ರೂಗಳ ಸಿಮೆಂಟ ಕಾಂಕ್ರಿಟ ರಸ್ತೆ, ಶ್ರೀಮಠದ ಮುಂದೆ ಪ್ಲೇವರ್ಸ್, ಬಸವೇಶ್ವರ ಗುಡಿ ಹತ್ತಿರ ಸಮುದಾಯ ಭವನ ಕಾಮಗಾರಿಗಳ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜನರು ಸಂಕುಚಿತ ಮನೋಭಾವನೆಯಿಂದ ಹೊರಬಂದು ನೇರವಾಗಿ ನನ್ನನ್ನು ಸಂಪರ್ಕಿಸಿ ಜನಪರ ಕಾರ್ಯಗಳನ್ನು ಈಡೇರಿಸಿಕೊಳ್ಳಬೆಕೆಂದು ಕರೆ ನೀಡಿದರು.

       ಸುಖದೇವಾನಂದ ಪುಣ್ಯಾಶ್ರಮದ ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಅಧಿಕಾರ ಇರಲಿ ಇರದೆ ಇರಲಿ ಜನಪ್ರತಿನಿಧಿಗಳಾದವರು ಗ್ರಾಮಗಳ ಅಭಿವೃದ್ದಿ ಕನಸು ಕಟ್ಟಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘಣೀಯ ಎಂದರು.

ತಾಪಂ ಅಧ್ಯಕ್ಷೆ ನೀಲವ್ವ ಫಕ್ಕಿರನ್ನವರ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. 

ಗ್ರಾಂ.ಪಂ ಮಾಜಿ ಅಧ್ಯಕ್ಷ ದೇಮನಗೌಡ ಶೀಲವಂತರ, ನಾಗಪ್ಪ ಫಕ್ಕಿರನ್ನವರ, ಗಂಗಯ್ಯ ಹಿರೇಮಠ, ಎ.ಪಿಎಂ.ಸಿ ಸದಸ್ಯ ಬಸವರಾಜ ಭಜಂತ್ರಿ, ಈರಣ್ಣಾ ಹೊಸಮನಿ, ಶ್ರೀಶೈಲ ಯಡಳ್ಳಿ, ನಾರಾಯಣ ನಲವಡೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಮತ್ತು ಗ್ರಾ.ಪಂ ಸದಸ್ಯ ಪ್ರಕಾಶ ಅಡಕಿ, ಪಿಕೆಪಿಎಸ್ ಅಧ್ಯಕ್ಷ ಮುದಕಪ್ಪಾ ತೋಟಗಿ, ವೀರನಗೌಡ ಹುಲ್ಲೆಪ್ಪನವರ, ಮಲ್ಲಪ್ಪ ಕಾಂಬಳೆ, ಎನ್.ಎ.ನಲವಡೆ, ರಾವಸಾಹೇಬ ಸೂರ್ಯವಂಶಿ, ಶಿವಾಜಿ ಕಲಾಲ, ಮಹಾಬಳೇಶ್ವರ ಮರೆಕ್ಕನವರ, ಮಂಜುನಾಥ ಕಲಾಲ, ಬೀಮಶಿ ಉಜ್ಜಿನಕೊಪ್ಪ, ಉಳವಯ್ಯ ಹಿರೇಮಠ, ಬಸವರಾಜ ಕಡಕೋಳ, ಸಿದ್ದನಗೌಡ ಸನ್ನಾಯ್ಕರ, ಬಸಲಿಂಗಯ್ಯ ಚಿಕ್ಕಮಠ, ಮಹಾಂತೇಶ ಪೂಜೇರ, ಮಲ್ಲೇಶ ಆದೆನ್ನವರ, ಮುಕ್ತುಮಸಾಬ ನದಾಪ ಹಾಗೂ ಗ್ರಾಮಸ್ಥರು ಇದ್ದರು.