ವಾಷಿಂಗ್ಟನ್, ಫೆಬ್ರವರಿ 8, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಧ್ಯಪ್ರಾಚ್ಯ ಮತ್ತು ಇತರೆ ಪ್ರಾದೇಶಿಕ ವಿಷಯಗಳ ಬಗ್ಗೆ ಯುರೋಪಿಯನ್ ವಿದೇಶಾಂಗ ವ್ಯವಹಾರ ಮತ್ತು ಭದ್ರತಾ ನೀತಿಯ ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ್ದಾರೆ.ಪೊಂಪಿಯೊ ಮತ್ತು ಬೊರೆಲ್ ಮಧ್ಯಪ್ರಾಚ್ಯ, ಯುರೋಪಿಯನ್ ವ್ಯಾಪಾರ ಸಂಬಂಧಗಳು ಮತ್ತು ಇರಾನ್ ಮತ್ತು ರಷ್ಯಾದಲ್ಲಿ ಶಾಂತಿ ಮತ್ತು ಭವಿಷ್ಯದ ಸ್ಥಿತಿ ಕುರಿತು ಚರ್ಚಿಸಿದ್ದಾರೆ ಎಂದೂ ವಿದೇಶಾಂಗ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇಬ್ಬರು ಉನ್ನತ ರಾಜತಾಂತ್ರಿಕರು ಶಾಶ್ವತ ಕದನ ವಿರಾಮಕ್ಕೆ ಬೆಂಬಲ ಮತ್ತು ಲಿಬಿಯಾ ಮತ್ತು ಸಿರಿಯಾದಲ್ಲಿ ರಾಜಕೀಯ ಪ್ರಕ್ರಿಯೆಗೆ ಸಹಜಸ್ಥಿತಿಗೆ ಮರಳುವ ಬಗ್ಗೆಯೂ ಮಾತುಕತೆ ಮಾಡಿದ್ದಾರೆ. ಇರಾನ್ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಾಗೂ ಈ ತಿಂಗಳ ಆರಂಭದಲ್ಲಿ, ಜನವರಿ ಅಂತ್ಯದಲ್ಲಿ ಟ್ರಂಪ್ ಆಡಳಿತ ಪ್ರಕಟಿಸಿದ ಮಧ್ಯಪ್ರಾಚ್ಯದ ಶಾಂತಿ ಯೋಜನೆ "ಅಂತಾರಾರಾಷ್ಟ್ರೀಯ ನಿಯಮಗಳಿಂದ ಹೊರಗುಳಿದಿದೆ ಎಂದೂ ಬೊರೆಲ್ ಹೇಳಿದ್ದಾರೆ.