ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಉಂಟಾಗುತ್ತದೆ

ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಉಂಟಾಗುತ್ತದೆ  Pollution caused by the use of plastic

ಹೂವಿನ ಹಡಗಲಿ 17:   ತ್ಯಾಜ್ಯಗಳ ಸಮರ​‍್ಕ ನಿರ್ವಹಣೆ ಎಲ್ಲರ ಜವಾಬ್ದಾರಿ ಎಂದು ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸ್ವಚ್ಛ್‌ ಭಾರತ್ ಮಿಷನ್ 2ಯೋಜನೆ ಅನುಷ್ಠಾನದ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಘನ ತ್ಯಾಜ್ಯ ವಸ್ತು ನಿರ್ವಹಣೆ ಶಾಲಾ ಮಕ್ಕಳ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಉಂಟಾಗುತ್ತದೆ.  

ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲವನ್ನು ಬಳಸುವುದು ಒಳ್ಳೆಯದು ಎಂದು ಹೇಳಿದರು. ಆಹಾರದ ಪೊಟ್ಟಣ ಸೇರಿದಂತೆ ಇತರೆ ಘನ ತ್ಯಾಜ್ಯ ವಸ್ತುಗಳನ್ನು ಎಲ್ಲೆಡೆ ಬಿಸಾಡಬಾರದು. ಮನೆ ಓಣಿ ಶಾಲೆ ಉದ್ಯಾನವನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯ ನಿರ್ವಾಹಕ ಅಧಿಕಾರಿ ಜಿ ಪರಮೇಶ್ವರ​‍್ಪ ಪರಿಸರ ಸಂರಕ್ಷಣೆ ಕುರಿತು ಶಾಲಾ ಮಕ್ಕಳು ಜಾಗೃತಿ ವಹಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಘನ ತ್ಯಾಜ್ಯ ವಸ್ತುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಬಹುದು.

ಮೆಕ್ಕೆಜೋಳ ಮಾತ್ರವಲ್ಲದೆ ಬೇರೆ ಸಸ್ಯಗಳಿಂದ ವಿಶೇಷ ಉಡುಗೊರೆ ನೀಡಬಹುದಾದ ವಸ್ತುಗಳನ್ನು ತಯಾರಿಸಿ ಉದ್ಯೋಗ ಸೃಷ್ಟಿ ಮಾಡಬಹುದು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಬ್ ಮಾತನಾಡಿ ಪುರಸಭೆ ವತಿಯಿಂದ ಸಂಗ್ರಹಿಸುವ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಿ ಮಲ್ಲಿಗೆ ನಾಡಿನಿಂದ ಕಾಫಿ ನಾಡು ಕೊಡಗಿಗೆ ಕಳಿಸಲಾಗುತ್ತದೆ ಎಂದು ಹೇಳಿದರು. ಇದರಿಂದ ಪುರಸಭೆಗೆ ಆದಾಯ ಬರುತ್ತದೆ ಎಂದರು.ಪಟ್ಟಣದ ಮೌಂಟ್ ಕಾರ್ಮೆಲ್ ಜ್ಞಾನಗಂಗಾ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆ ಲಿಟಲ್ ಚಾಂಪ್ಸ್‌ ಜಿ ಪಿ ಜಿ ತುಂಗಭದ್ರಾ ಪ್ರೌಢಶಾಲಾ ವಿದ್ಯಾರ್ಥಿಗಳು ಮೇಳದ ಪ್ರಯೋಜನ ಪಡೆದುಕೊಂಡರು.