ರಾಜಕಾರಣ ನಿಂತ ನೀರಲ್ಲ,ನಾನೂ ಹರಿವ ನೀರಾಗಬೇಕು : ಸಿ.ಎಚ್.ವಿಜಯ್ ಶಂಕರ್

ಮೈಸೂರು ,ಅ.27:    ನಾನು ರಾಜಕಾರಣದಲ್ಲಿ ಜೀವಂತಿಕೆ ಯಾಗಿರಬೇಕು.ತಟಸ್ಥವಾಗಿ ಬದುಕಲು ನನ್ನಿಂದ ಬಾಳಲು ಸಾಧ್ಯ ವಿಲ್ಲ.ನಾನು ರಾಜಕಾರಣದಲ್ಲಿ ಇರಬೇಕು.ರಾಜಕಾರಣದಲ್ಲಿ  ನಾನು ನಿಂತ ನೀರಾಗಬಾರದು.ಸದಾ ಹರಿಯುವ ನೀರಾಗಬೇಕು ಎನ್ನುವ ಮೂಲಕ ಮಾಜಿ ಶಾಸಕ ಸಿ.ಎಚ್.ವಿಜಯ್ ಶಂಕರ್ ಬಿಜೆಪಿ ಸೇರ್ಪಡೆಯನ್ನು ದೃಡಪಡಿಸಿದರು.      ನಗರದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗದವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ  ನಾನು ನಿಂತ ನೀರಾಗಬಾರದು.ಸದಾ ಹರಿಯುವ ನೀರಾಗಬೇಕು.

ನಿಂತ ನೀರಾದರೆ ವಾಸನೆ ಬಂದು ಮೂಗು ಮುಚ್ಚಿಕೊಳ್ಳುವ ಸ್ಥಿತಿ ನಿರ್ಮಾಣ ವಾಗುತ್ತದೆ.ಜನರ ಮುಂದೆ ಹೋಗಬೇಕಾದರೆ ನಾನು ಹರಿಯುವ ನಿರಾಗಬೇಕು ಎಂದರು    ಮಾಜಿ ಸಂಸದ ಆರ್ ಧೃವನಾರಾಯಣ್, ಜಿಲ್ಲಾಧ್ಯಕ್ಷ ಬಿ.ಜೆ ವಿಜಯಕುಮಾರ್. ನಗರಾಧ್ಯಕ್ಷ ಆರ್ ಮೂರ್ತಿ ಸೇರಿದಂತೆ ಹಲವು ಮುಖಂಡರು ನಗರದಲ್ಲಿರುವ ವಿಜಯ್ ಶಂಕರ್ ಅವರ ಮನೆಗೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ತೊರೆಯದಂತೆ ಮನವಿ ಮಾಡಿದರು.    

ವಿಜಯ್ ಶಂಕರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ  ಧೃವನಾರಾಯಣ್, ವಿಜಯಶಂಕರ್ ಒಂದು ವಾರ ದಿಂದ ಪಕ್ಷ ಬಿಡುತ್ತಾರೆ  ಎನ್ನುವ ಮಾಹಿತಿ ಇದೆ.ಪಕ್ಷ ಬಿಡದಂತೆ ಅವರಿಗೆ ಮನವಿ ಮಾಡಿದ್ದೇವೆ.ನೀವು ಪಕ್ಷದಲ್ಲೇ ಇರಬೇಕು.ಸರಳ ಸಜ್ಜನ ವ್ಯಕ್ತಿ.ಅಲ್ಲದೆ ಬಿಜೆಪಿ ನಾಯಕರು ವಿಜಯಶಂಕರ್ ಮೇಲೆ ಒತ್ತಡ  ಹೇರಿರುವ ಬಗ್ಗೆ ನಮಗೂ ಅನುಮಾನವಿದೆ. 

ಬಿಜೆಪಿಯವರು ದೇಶದಾದ್ಯಂತ ಇದೇ ಕೆಲಸದಲ್ಲಿ ತೊಡಗಿದ್ದಾರೆ.ಆಸೆ ಆಮಿಷದಿಂದ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯುತ್ತಿದ್ದಾರೆ.ಈ ರೀತಿ ಆಸೆ ಆಮಿಷಕ್ಕೆ ಬಲಿಯಾಗಿ ಯಾರು ಬಿಜೆಪಿಗೆ ಹೋಗಬಾರದು ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.    ಬಿಜೆಪಿ ನಾಯಕರು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೂ ಆಮಿಷ ಒಡ್ಡಿದ್ದರು.

ಅವರನ್ನು ಸೆಳೆಯುವ ತಂತ್ರ ರೂಪಿಸಿದ್ದರು. ಅದಕ್ಕೆ ಅವರು ಒಪ್ಪದಿದ್ದಾಗ ಅವರ ಮೇಲೆ  ಅನೇಕ ರೀತಿಯಲ್ಲಿ ಒತ್ತಡ ಹೇರಿದರು.ಆದರೆ ಅವರು ಒತ್ತಡಕ್ಕೆ ಮಣಿಯಲಿಲ್ಲ ಎಂದರು.     ಬಿಜೆಪಿಗೆ  ಮಹಾರಾಷ್ಟ್ರ ಹರಿಯಾಣ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ.ಬಿಜೆಪಿ ಅವರಿಗೆ ತತ್ವ ಸಿದ್ದಾಂತವಿಲ್ಲ ಪಾವಿತ್ರ್ಯತೆ ಇಲ್ಲ.ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. ಆಪರೇಷನ್ ಕಮಲದಂತಹ ಕೆಟ್ಟ ಪ್ರವೃತ್ತಿ ರಾಜ್ಯಕ್ಕೆ ತಂದರು.17 ಜನ ಅನರ್ಹರಿಗೂ ಮಹಾರಾಷ್ಟ್ರದ ಚುನಾವಣೆಯಂತೆಯೇ  ರಾಜ್ಯದ ಜನರು ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದರು.    ಎಚ್.ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ.ಬಿಜೆಪಿಯದ್ದು ಬಳಸಿ ಬಿಸಾಡುವ ಪಾಲಿಸಿ. ಇದು ಹೀಗಾಗಲೆ ಅನರ್ಹ ಶಾಸಕರ ಅನುಭವಕ್ಕೆ ಬರುತ್ತಿದೆ. 

ಅವರಿಗೆ ಪಕ್ಷ ಅನ್ಯಾಯ ಮಾಡಿರಲಿಲ್ಲ.ಅವರು ದುರಾಸೆಯಿಂದ ವಾಮ ಮಾರ್ಗದಿಂದ ಹೋಗಿದ್ದಾರೆ. ಕೆಲವರು ಐಟಿ ದಾಳಿಗೆ ಹೆದರಿ ಪಕ್ಷ ಹೋಗಿರಬಹುದು ಎಂದು ಅವರು ಹೇಳಿದರು.     ಬಿಜೆಪಿಯಲ್ಲಿದ್ದ  ವಿಜಯಶಂಕರ್ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.ಕಾಂಗ್ರೆಸ್ ನಾಯಕರ ವಿರೋಧದ ನಡುವೆ ಸಿದ್ದರಾಮಯ್ಯ ಮಾತಿಗೆ ಮಣಿದು ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಿತು.ಆದರೆ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಸೋಲಪ್ಪಿದ್ದರು.