ರಾಜಕೀಯ ನಿರಾಶ್ರಿತರ ಸಮಾವೇಶ ವಿಫಲ: ಈರಗೊಂಡ ಬಿರಾದಾರ
Political refugee conference fails: Irgonda Biradaar
ವಿಜಯಪುರ 30. ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಉದ್ದೇಶದಿಂದ ಏರಿ್ಡಸಿದ್ದ ಸಮಾವೇಶ ವಿಫಲಗೊಂಡಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.ನಿನ್ನೆ ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಬಬಲೇಶ್ವರ ಗುರುಪಾದೇಶ್ವರ ಮಹಾಸ್ವಾಮಿಜಿಗಳು, ಶಾಂತವೀರ ಅಪ್ಪಗಳವರ ಪುಣ್ಯಕ್ಷೇತ್ರವಾಗಿರುವ ಬಬಲೇಶ್ವರದಲ್ಲಿ ಬಸವಾದಿ ಶರಣರ ಆಶಯದಂತೆ ಎಲ್ಲ ಜಾತಿ ಜನಾಂಗದವರು ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡು ಪ್ರೀತಿಯಿಂದ ಬಾಳುವ ಇವರ ಮಧ್ಯೆ ಧರ್ಮದ ಹೆಸರಿನಲ್ಲಿ ಕಿಡಿ ಹಚ್ಚಿ, ರಾಜಕಾರಣದ ಮೂಲಕ ತಮ್ಮ ಬೆಳೆ ಬೆಯಿಸಲು ಕನ್ಹೇರಿ ಶ್ರೀಗಳು ಮಾಡಿದ ಬಯಲಾಟ ಪ್ರೇಕ್ಷರಿಲ್ಲದೆ ನಿಂತುಹೋಗಿದೆ ಎಂದರು.ಬಿಜೆಪಿಯಿಂದ ಉಚ್ಚಾಟಿತರು, ಪರಾಜೀತ ಅಭ್ಯರ್ಥಿಗಳು, ಟಿಕೆಟ್ ವಂಚಿತರು, ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಒಂದಡೆ ಸೇರಿಸಿ, ಸಮಾವೇಶವನ್ನು ಮಾಡುವ ಮೂಲಕ ಈ ಸ್ವಾಮೀಗಳು ಅಧೀಕೃತವಾಗಿ ಬಿಜೆಪಿ ನಿರಾಶ್ರಿತರ ಗುಂಪಿನಲ್ಲಿ ಸೇರಿಕೊಂಡಿದ್ದಾರೆ.
ಜಿಲ್ಲೆಯ ಮತ್ತು ರಾಜ್ಯದಲ್ಲಿ ಮಠ-ಮಂದಿರಗಳನ್ನು ಕಟ್ಟಿದ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ಸಮಾಜಮುಖಿ ಕಾಯಕ ಮತ್ತು ದಾಸೋಹ ಮಾಡುತ್ತಿರುವ, ಜನಮಾನಸದಲ್ಲಿ ಪ್ರಭಾವ ಹೊಂದಿರುವ ಯಾವುದೇ ಮಠಾಧೀಶರು ಈ ಸಮಾವೇಶದಲ್ಲಿ ಭಾಗಿಯಾಗದೆ ಇರುವುದನ್ನು ನೋಡಿದರೆ ಇವರ ಬಯಲಾಟ ಎಲ್ಲರಿಗೂ ಅರ್ಥವಾಗಿದೆ ಎಂದು ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 