ಗೌರಿ ಗಣೇಶ, ಈದ್ ಮಿಲಾದ ಹಬ್ಬದ ನಿಮಿತ್ಯ ಪೊಲೀಸ್ ಪಥಸಂಚಲನ
Police procession on the occasion of Gauri Ganesha, Eid Mila
ಯರಗಟ್ಟಿ, 25 ; ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದಲ್ಲಿಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿಪಟ್ಟಣದ ಪೊಲೀಸ್ ಠಾಣೆ ಸಿಪಿಐ ಐ. ಎಂ. ಮಠಪತಿ ನೇತೃತ್ವದಲ್ಲಿಪೊಲೀಸರು ಸೋಮವಾರ ಪಥಸಂಚಲನ ನಡೆಸಿದರು.
ಸಿಪಿಐ ಐ ಎಂ ಮಠಪತಿ ಮಾತನಾಡಿ, ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿಯಾವುದೇ ಗಲಾಟೆ ಗದ್ದಲಕ್ಕೆ ಅವಕಾಶ ನೀಡಬಾರದು. ಸಂಜೆ ಮತ್ತು ರಾತ್ರಿ ನಿಗದಿಪಡಿಸಿದ ಸಮಯದಲ್ಲಿಸಾರ್ವಜನಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ವೃದ್ಧರು, ರೋಗಿಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಬ್ಬರದ ಧ್ವನಿವರ್ಧಕ ಮತ್ತು ಡಿಜೆ ಬಳಕೆ ನಿಧಿಷೇಧ ಮಾಡಲಾಗಿದೆ. ಮತ್ತು ಈದ್ ಮಿಲಾದ್ ಹಬ್ಬವು ಶಾಂತ ರೀತಿಯಲ್ಲಿಮಾಡಬೇಕು ಎಂದು ತಿಳಿಸಿದರು.
ಶಾಂತಿ ಸ್ಥಾಪನೆ ನಿಟ್ಟಿನಲ್ಲಿಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳ ನೇಧಿತೃತ್ವದಲ್ಲಿಸಭೆ ಮಾಡಿದ್ದು, ಸಾರ್ವಜನಿಕರ ಸಮಸ್ಯೆ ಆಲಿಸಿ ಅವುಗಳನ್ನು ಬಗೆಹರಿಸಲು ಪೊಲೀಸರು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದು. ಹಾಗಾಗಿ, ನಿಬಂಧನೆಗಳಿಗೆ ಒಳಪಟ್ಟು, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪಥಸಂಚಲನ ಬಸವ ಗಲ್ಲಿ, ಭಜಂತ್ರಿ ಗಲ್ಲಿ, ಒಂಟಿ ಗಲ್ಲಿ, ಪಾದಗಟ್ಟಿ, ಶಿವಾಜಿ ಸರ್ಕಲ್, ಟಿಳಕ್ ಚೌಕ, ಮಹಾಂತೇಶ ನಗರ, ಸಂಗೋಳ್ಳಿ ರಾಯಣ್ಣ ವೃತ್ತಿ, ಗಾಂಧಿ ಚೌಕ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿಪೊಲೀಸರು ಪಥಸಂಚಲನ ನಧಿಡೆಸಿ ಶಾಂತಿ ಸಂದೇಶ ಸಾರಿದರು. ಪಿಎಸ್‌ಧಿಐ ಎಲ್ ಬಿ ಮಾಳಿ, ಡಬ್ಲ್ಯೂ ಎಚ್ ಯಾದವಾಡ ಸೇರಿದಂತೆ, ಎಎಸ್‌ಐ ಬಿ ಕೆ ರಂಗಣ್ಣವರ, ವಾಯ್ ಎಂ ಕಟಕೋಳ, ಪೋಲಿಸ್ ಹವಾಲ್ದಾರ ಆರ್. ಬಿ. ಸಸಾಲಟ್ಟಿ, ಪೊಲೀಸ್ ಪೇದೆಗಳಾದ ಎಂ. ಬಿ. ಸಣ್ಣನಾಯ್ಕರ, ಎಸ್ ಎಂ. ಜವಳಿ, ಎಸ್. ಎಂ. ರಾಯನಾಯ್ಕರ, ಆರ್. ಎಸ್. ತೇಳಿ, ಆಯ್. ಎಸ್. ವಕ್ಕುಂದ, ಬಾಗೀರಥಿ ಬಡಿಗೇರ, ಸುಧಾರಾಣಿ ಕರಗೂಳಿ ಸೇರಿದಂತೆ ಇತರರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 