ಪೊಲೀಸ್-ವಕೀಲರ ಕಲಹ; ಪೊಲೀಸರನ್ನು ಬೆಂಬಲಿಸಿದ ಸಚಿವ ಕಿರಣ್ ರಿಜಿಜು

 ನವದೆಹಲಿ, ನ 5:    ನವದೆಹಲಿಯ ವಕೀಲರು ಮತ್ತು ಪೊಲೀಸರ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಬಿಜೆಪಿ ನಾಯಕ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಪೊಲೀಸ್ ಒಂದು ಕೃತಜ್ಞಾ ರಹಿತ ವೃತ್ತಿ ಎಂದಿದ್ದಾರೆ.    ಈ ಕುರಿತು ಟ್ವೀಟ್ ಮಾಡಿರುವ ಅವರು.'ನಾವು ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ, ಕಾನೂನು ತನ್ನ ಕೆಲಸ ಮಾಡಲಿ' ಎಂದಿದ್ದಾರೆ.    ಪೊಲೀಸರಾಗಿರುವುದು ಒಂದು ಕೃತಜ್ಞಾರಹಿತ ಕೆಲಸ. ಆದರೆ, ಅವರು ಇದನ್ನು ಕೃತಜ್ಞತೆಗಾಗಿ ಮಾಡುವುದಿಲ್ಲ ಎಂದಿದ್ದಾರೆ. 2014ರಿಂದ 2019ರವರೆಗಿನ ಮೋದಿ ಸರ್ಕಾರದಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ರಿಜಿಜು, ಪೊಲೀಸರು ಪ್ರತಿನಿತ್ಯ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಅವರು ಕೆಲಸ ಮಾಡಿದರೂ ಟೀಕೆಗೊಳಗಾಗುತ್ತಾರೆ, ಕೆಲಸ ಮಾಡದಿದ್ದರೂ ಟೀಕೆಗೊಳಗಾಗುತ್ತಾರೆ ಎಂದಿದ್ದಾರೆ. ಪೊಲೀಸ್ ವಿರೋಧಿ ಹೋರಾಟದಲ್ಲಿ ತೊಡಗಿರುವವರು ಯಾರೂ ಪೊಲೀಸರು ತಮ್ಮ ಮನೆಯಲ್ಲಿ ಬಿಟ್ಟು ಬಂದಿರುವ ಕುಟುಂಬಗಳ ಕುರಿತು ಯೋಚಿಸುವುದಿಲ್ಲ ಎಂದಿದ್ದಾರೆ. ನವೆಂಬರ್ 2ರಂದು ಟಿಸ್ ಹಜಾರಿ ನ್ಯಾಯಾಲಯದ ಎದುರು ಪೊಲೀಸರು ಮತ್ತು ವಕೀಲರ ನಡುವೆ ನಡೆದ ಕಲಹವನ್ನು ವಿರೋಧಿಸಿ, ಬೃಹತ್ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಆದರೆ, ಇಲ್ಲಿಯವರೆಗೆ ಘಟನೆ ಸಂಬಂಧ ಕೇವಲ ಪೊಲೀಸರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ.