ಅಪರಾಧ ತಡೆಗೆ ಪೊಲೀಸ್ ದೂರವಾಣಿ ಸಂಖ್ಯೆ 112 ಹೊಸ ತಂತ್ರಜ್ಞಾನ ನಾಗರಿಕ ಸುರಕ್ಷಾ ಸೇವೆ ಕೊಡುಗೆ

ಅಪರಾಧ ತಡೆಗೆ ಪೊಲೀಸ್ ದೂರವಾಣಿ ಸಂಖ್ಯೆ 112 ಹೊಸ ತಂತ್ರಜ್ಞಾನ ನಾಗರಿಕ ಸುರಕ್ಷಾ ಸೇವೆ ಕೊಡುಗೆ  Police hotline 112 offers new technology, civil safety service to prevent crime

ಧಾರವಾಡ 20: ಅಪರಾಧ ತಡೆಗೆ ಪೊಲೀಸ್ ದೂರವಾಣಿ ಸಂಖ್ಯೆ 112 ನಾಗರಿಕ ಸುರಕ್ಷಾ ಸೇವೆ ಕೊಡುಗೆಯಾಗಿದೆ.. ದೂರು ಕರೆ ಮಾಡಿದ 3 ರಿಂದ 6 ನಿಮಿಷಗಳಲ್ಲಿ ಡಿಜಿಟಲ್ ಆಧಾರಿತ ದೂರು ದಾಖಲಾಗಿ, ವೈಜ್ಞಾನಿಕ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಘಟನಾ ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಲಿದೆ. ಇದರ ಸದುಪಯೋಗ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳ ಬೇಕೆಂದು ವಿದ್ಯಾಗಿರಿ ಪೊಲೀಸ್ ಠಾಣೆ  ಪೊಲೀಸ್ ಇನ್ಸ್‌ಫಕ್ಟರ್ ಮುಖ್ಯ ಮಂತ್ರಿಗಳ ಪದಕ ವಿಜೇತ ಶ್ರೀ ಸಂಗಮೇಶ ದೀಡಿಗಿನಾಲ್ ಅವರು ತಿಳಿಸಿದರು.  

ಅವರು ನಿನ್ನೆ (ಜೂ.19) ರಂದು ಧಾರವಾಡ ಸರಸ್ವತಪೂರ ರಹವಾಸಿಗಳ ಸಂಘ ವಿಜಯಲಕ್ಷ್ಮೀ ಗುಗ್ಗಳಿ ಅವರ ಮನೆ ಆವರಣದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ಮತ್ತು ಮುಖ್ಯ ಮಂತ್ರಿಗಳ ಪದಕ ವಿಜೇತ ಸನ್ಮಾನ ಸಮಾರಂಭದಲ್ಲಿ  ಮುಖ್ಯ ಅತಿಥಿಗಳಾಗಿ ಮಾತನಾಡಿದರು.  

ಕಳ್ಳತನ, ಹಿರಿಯನಾಗರಿಕ ಸಮಸ್ಯೆಗಳು, ಹೆಣ್ಣು ಮಕ್ಕಳ ದೌಜನ್ಯ, ಫೊಕ್ಸೊ ಅಪರಾಧ ಪ್ರಕರಣ ಪತ್ತೆ ಹಚ್ಚಲು, ಡಿಜಿಟಿಲ್ ದೂರು (ದಾಖಲೆ) ಕರೆ, ಹೊಸ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಸಿಸಿಟಿವಿ ಪೂಟೇಜ್‌ಗಳು ಸಹಕಾರಿಯಾಗಿವೆ. ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಲ್ಲಿ ಹೆಚ್ಚಾಗಿ ಫೊಕ್ಸೊ ಪ್ರಕರಣಗಳು  ದಾಖಲಾಗಿವೆ. ಮನೆ ಕಳ್ಳತನ ಕಡಿವಾಣ ಹಾಕಿ ಪತ್ತೆ ಹಚ್ಚಿ ಬಂಧಿಸಲು ಸಹಕಾರಿಯಾಗಿವೆ, ಅಪರಾಧ ರಾತ್ರಿ ನಡೆಯುವ ಸ್ಥಳದಲ್ಲಿ ಹೊಸ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಬೀಟ್ (ಪೊಲೀಸ್ ಪಹರೆ) ಮಾಡಲಾಗುತ್ತಿದೆಂದು, ಹಾಗೂ ಠಾಣೆ ಗಮನಕ್ಕೆ ಬಂದ ಸಮಸ್ಯೆಗಳ ಬಗ್ಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ಶ್ರೀ. ಸಂಗಮೇಶ ದೀಡಿಗಿನಾಲ್ ಅವರು ತಿಳಿಸಿದರು.  

ರಹವಾಸಿಗಳ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮೀ ಗುಗ್ಗಳಿ ಕುಂದುಕೊರತೆ ಬಗ್ಗೆ ತಿಳಿಸಿದರು. ಶ್ರೀ ಸಂಗಮೇಶ ದೀಡಿಗಿನಾಳ್ ವಿದ್ಯಾಗಿರಿ ಸಿಪಿಐ ಮಾನ್ಯ ಮುಖ್ಯ ಮಂತ್ರಿಗಳ ಪದಕ ವಿಜೇತರನ್ನು ಫಲಪುಷ್ಟ ಶಾಲು ಹೊದಿಸಿ, ಸನ್ಮಾನಿಸಿದರು.  

ಸಂಘದ ಕಾರ್ಯದರ್ಶಿಗಳಾದ ಸಿದ್ದು ಪಾಟೀಲ ಪರಿಚಯ ಮಾಡಿ, ಸ್ವಾಗತಿಸಿದರು. ಖಜಾಂಚಿ ಕವಿಯತ್ರಿ ರಾಧಾ ಶ್ಯಾಮ್, ಇಂದಿರಾ ಪ್ರಸಾದ, ಎಸ್‌.ಎನ್‌.ಕುಲಕರ್ಣಿ, ಪದಾಧಿಕಾರಿಗಳಾದ ಎಮ್‌.ಆರ್‌. ಹಂಪಸಾಗರ, ಸುಧೀಂದ್ರ ಕುಲಕರ್ಣಿ, ಎಸ್‌.ವ್ಹಿ. ಮುತಾಲಿಕ ದೇಸಾಯಿ, ಡಾ. ಸಿ.ಬಿ. ಪುರಾಣಿಕ, ಇಂದಿರಾ ಪ್ರಸಾದ್, ಅಶೋಕ ಇರಡ್ಡಿ, ಪ್ರಮೋದ ಡಿ. ಪಾಟೀಲ, ಪ್ರದೀಪ ಎಚ್‌. ಶೆಟ್ಟಿ, ಸುಧಾ ಅರಿಕೆರಿ, ಅನಂತ ವ್ಹಿ. ಮಹಾಲೆ ಹಾಗೂ ಸದಸ್ಯರಾದ ರಾಜೇಶ್ವರಿ ಎಮ್‌.ಕುಲಕರ್ಣಿ, ಕೆ.ಕೆ.ಕುಲಕರ್ಣಿ, ಸಿ.ಬಿ. ಭೋವಿ, ಶಾರಧಾ ದೊಡ್ಡಮನಿ, ಎಸ್‌.ಡಿ.ಕುಲಕರ್ಣಿ, ಸುಧೀಂದ್ರ ರಾವ್ ಸುಂಕದ, ವಿ.ಎಸ್‌.ಹರ್ತಿ, ಮಧುಸೂದನ ಕೆ.ವಿ., ಸಿ.ಎ ಬಂಕಾಪೂರ, ಸುರೇಶ. ಎಸ್‌. ಹಂಪಣ್ಣನವರ, ಅನೀಲ. ಜಿ. ಪುರಾಣಿಕ, ನಾಗರಾಜ.ಎಮ್‌.ಪಿ., ಲಕ್ಷ್ಮಣ, ಡಾ. ಸಂಗೀತಾ ಪಿ. ಸಾಂಬ್ರಾಣಿ, ಅಮರಾಜ ಪಿ. ಪಾಟೀಲ, ಅನಿಲ ಸಾಣಿಕೊಪ್ಪ ಮತ್ತು ಶಕುಂತಲಾ ಪಿ. ವಿಠೋಜಿ ಅವರು ತಮ್ಮ ತಮ್ಮ  ಕುಂದುಕೊರತೆಗಳ ಬಗ್ಗೆ ವಿವರಿಸಿದರು.